ದೇಹದಲ್ಲಿ ಐರನ್ ಅಂಶ ಕೊರತೆಯಾದರೆ ಕಾಣಿಸುತ್ತದೆ ಈ ಲಕ್ಷಣಗಳು!

ಐರನ್ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳಲ್ಲಿ ಒಂದು.  ನಮ್ಮ ದೇಹ ಅಗತ್ಯ  ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ಐರನ್ ಅಗತ್ಯವಿರುತ್ತದೆ.  ದೇಹದಲ್ಲಿರುವ ಐರನ್  ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ಸಾಗಿಸಲು ಸಹಾಯ ಮಾಡುತ್ತದ. ದೇಹದಲ್ಲಿ ಐರನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.  

 ಬೆಂಗಳೂರು : ಐರನ್ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳಲ್ಲಿ ಒಂದು.  ನಮ್ಮ ದೇಹ ಅಗತ್ಯ  ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ಐರನ್ ಅಗತ್ಯವಿರುತ್ತದೆ.  ದೇಹದಲ್ಲಿರುವ ಐರನ್  ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ಸಾಗಿಸಲು ಸಹಾಯ ಮಾಡುತ್ತದ. ದೇಹದಲ್ಲಿ ಐರನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ದೇಹದಲ್ಲಿ ಐರನ್ ಕೊರತೆಯಾದಾಗ ಪಾದಗಳು ಮರಗಟ್ಟಲು ಆರಂಭವಾಗುತ್ತವೆ. ಪದೇ ಪದೇ ಪಾದಗಳಿಗೆ ಪಿನ್ ಚುಚ್ಚಿದಂಥಹ ಅನುಭವವಾಗುತ್ತದೆ. ರಾತ್ರಿ ಮಲಗುವ ವೇಳೆ ಈ ಸಮಸ್ಯೆ ಹೆಚ್ಚಾಗಿ  ಕಾಣಿಸಿಕೊಳ್ಳುತ್ತದೆ.  

2 /3

ದೇಹದಲ್ಲಿ ಐರನ್ ಕೊರತೆಯಾದರೆ ನಾಲಿಗೆ ಊದಿಕೊಂಡ ಹಾಗಾಗುತ್ತದೆ.  ಇದನ್ನು ಗ್ಲೋಸಿಟಿಸ್ ಎಂದು ಕರೆಯಲಾಗುತ್ತದೆ. ಇಲ್ಲಿ ನಾಲಗೆಯ ಬಣ್ಣವೂ ಬದಲಾಗುತ್ತದೆ. ಈ ಲಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಈ ಸಮಸ್ಯೆ ಇದ್ದಾಗ ಆಹಾರವನ್ನು ಅಗಿಯುವುದು ಮತ್ತು ನುಂಗುವುದು  ಕಷ್ಟವಾಗಬಹುದು. ಇತರ ಚಿಹ್ನೆಗಳಾದ ತುಟಿ ಒಡೆಯುವುದು, ನಾಲಗೆಯ ಮೂಲೆಗಳಲ್ಲಿ ಬಿರುಕುಗಳು ಮತ್ತು ಬಾಯಿ ಹುಣ್ಣುಗಳು  ಕೂಡಾ ಕಂಡು ಬರುತ್ತದೆ. 

3 /3

ಆಹಾರ ಮತ್ತು ಪಾನೀಯವನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಸೇವಿಸಬೇಕು ಅನಿಸಿದಾಗ, ಈ ಸ್ಥಿತಿಯನ್ನು ಪಿಕಾ ಎಂದು ಕರೆಯಲಾಗುತ್ತದೆ. ಐರನ್ ಕೊರತೆ ಇದ್ದವರಿಗೆ ಪದೇ ಪದೇ ಐಸ್ ತಿನ್ನಬೇಕು ಅನ್ನಿಸುತ್ತಿರುತ್ತದೆ. ಐರನ್ ಅಂಶವಿರುವ ಆಹಾರವನ್ನು ಸೇವಿಸಿದರೆ ಈ ಸಮಸ್ಯೆಯು ಸುಲಭವಾಗಿ  ಪರಿಹಾರವಾಗುತ್ತದೆ.  (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)