ʼವಿರಾಟ್‌ ಕೊಹ್ಲಿ ಸಿನಿಮಾಗಳಿಗೆ ಎಂಟ್ರಿ ಕೊಡುವಂತಿಲ್ಲ..ʼ ಖ್ಯಾತ ನಿರ್ದೇಶಕ ಖಡಕ್‌ ಎಚ್ಚರಿಕೆ! ಅಷ್ಟಕ್ಕೂ ಕಾರಣ ಏನು?

Virat Kohli Entry to Film Industry: ವಿರಾಟ್‌ ಕೊಹ್ಲಿ ಯಾವ ಬಾಲಿವುಡ್‌ ಹಿರೋಗೂ ಕಮ್ಮಿಯಿಲ್ಲ.. ಇದುವರೆಗೆ ಹಲವು ಜಾಹೀರಾತುಗಳ ಮೂಲಕ ತಮ್ಮ ನಟನೆಯನ್ನು ತೋರಿಸಿದ್ದಾರೆ. ಆದರೆ ಖ್ಯಾತ ನಿರ್ದೇಶಕರೊಬ್ಬರು ಅವರಿಗೆ ಸಿನಿರಂಗಕ್ಕೆ ಎಂಟ್ರಿ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ.. ಅಷ್ಟಕ್ಕೂ ಯಾರು? ಕಾರಣ ಏನು? ಇಲ್ಲಿ ತಿಳಿಯಿರಿ.. 
 

1 /8

 ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮತ್ತು ಅದ್ಭುತ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು ವಿಶ್ವ ಕ್ರಿಕೆಟ್‌ನ ಮುಖ ಎಂದು ಪರಿಗಣಿಸಲಾಗಿದೆ. ಕ್ರಿಕೆಟ್ ಕ್ಷೇತ್ರವನ್ನು ಆಳುವುದಲ್ಲದೆ, ಉದ್ಯಮಿಯೂ ಹೌದು. ‌

2 /8

ಆದರೆ, ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರಿಗೆ ಎಚ್ಚರಿಕೆ ನೀಡಿದ್ದು, ಯಾವ ಕ್ರಿಕೆಟಿಗರೂ ಸಿನಿಮಾ ಮಾಡಬಾರದು ಎಂಬುದು ಅವರ ಅಭಿಪ್ರಾಯ. ಅದರಲ್ಲೂ ಚಿತ್ರದಲ್ಲಿ ನಟಿಸದಂತೆ ವಿರಾಟ್ ಗೆ ಸಲಹೆ ನೀಡಿದ್ದಾರಂತೆ.   

3 /8

ಹೌದು ಖ್ಯಾತ ನಿರ್ಮಾಪಕ ಮತ್ತು ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದು, ಆ ವೇಳೆ ವಿರಾಟ್ ಅವರನ್ನು ತುಂಬಾ ಹೊಗಳಿದ್ದ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳದಂತೆ ಸಲಹೆ ನೀಡಿದ್ದಾರಂತೆ..   

4 /8

ಮುಖೇಶ್ ಅವರ ಪ್ರಕಾರ ವಿರಾಟ್ ತುಂಬಾ ಒಳ್ಳೆಯ ವ್ಯಕ್ತಿ. ವಿರಾಟ್ ಈಗಾಗಲೇ ಉತ್ತಮ ನಟ ಎಂದು ಛಾಬ್ರಾ ಹೇಳಿದ್ದಾರೆ. ಅವರು ಈ ದೇಶದ ಕಲ್ಪನೆಯನ್ನು ಹೊಂದಿದ್ದಾರೆ.. ಏಕೆಂದರೇ ಅವರು ದೆಹಲಿಯಲ್ಲಿ ಬೆಳೆದ ಪಂಜಾಬಿ ಹುಡುಗ... ವಿರಾಟ್‌ ತಮ್ಮ ಯಶಸ್ಸನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಸ್ಪರ್ಧೆ, ನೋಟ, ಮಾನಸಿಕ ಸ್ಥಿತಿ, ಫಿಟ್ನೆಸ್ ಹೀಗೆ ಪ್ರತಿಯೊಂದು ಹಂತದಲ್ಲೂ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ.  

5 /8

ವಿರಾಟ್ ಅವರ ಡಾನ್ಸ್, ಕಾಮಿಕ್ ಟೈಮಿಂಗ್ ಮತ್ತು ಮಿಮಿಕ್ರಿ ಕೌಶಲ್ಯವನ್ನು ಮುಕೇಶ್ ಛಾಬ್ರಾ ಶ್ಲಾಘಿಸಿದರು. ಹೀಗಿದ್ದರೂ ಚಿತ್ರದಲ್ಲಿ ಕಾಣಿಸಿಕೊಳ್ಳದಂತೆ ಸಲಹೆ ನೀಡಿದ್ದಾರಂತೆ.. ಇದರ ಹಿಂದಿನ ಕಾರಣವನ್ನೂ ಅವರು ಹೇಳಿದ್ದಾರೆ.   

6 /8

ಅವರ ಪ್ರಕಾರ ವಿರಾಟ್ ಬುದ್ಧಿವಂತ; ಆದರೆ ಬೂಟಾಟಿಕೆ ಅಲ್ಲ. ಹಾಗಾಗಿ ನಿವೃತ್ತಿಯ ನಂತರವೂ ಸಿನಿಮಾದಿಂದ ದೂರ ಉಳಿದರೆ ಒಳ್ಳೆಯದು ಎಂದಿದ್ದಾರೆ... ಐದು-ಆರು ವರ್ಷಗಳ ಹಿಂದೆ ವಿರಾಟ್ ಅವರನ್ನು ಭೇಟಿಯಾಗಿದ್ದಾಗಿಯೂ ಅವರು ಬಹಿರಂಗಪಡಿಸಿದ್ದಾರೆ.    

7 /8

ಇನ್ನು ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳಬಹುದು. ಅವರು ದೀರ್ಘಕಾಲದವರೆಗೆ ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ವಿರಾಟ್ ಕೊನೆಯ ಬಾರಿಗೆ ಟೆಸ್ಟ್ ಆಡಿ ಎಂಟು ತಿಂಗಳಾಗಿದೆ. ‌  

8 /8

ಜನವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಅವರು ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರು ತಮ್ಮ ಮಗ ಅಕಾಯ್ ಜನನದ ಕಾರಣ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ದೂರುಳಿದಿದ್ದರು..