39 ವರ್ಷಗಳ ಬಳಿಕ ಇಂಗ್ಲೆಂಡ್‌ನ ಈ ಮೈದಾನದಲ್ಲಿ ಗೆದ್ದುಬೀಗಿದ ಟೀಂ ಇಂಡಿಯಾ: ಸಂಭ್ರಮದ ಫೋಟೋ ಇಲ್ಲಿವೆ

ಇಂಗ್ಲೆಂಡ್‌ನಲ್ಲಿ ಇತಿಹಾಸ ಸೃಷ್ಟಿಸಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಗೆಲುವು ಟೀಂ ಇಂಡಿಯಾದ ಆಟಗಾರರಿಗೆ ಎಷ್ಟು ವಿಶೇಷವಾಗಿತ್ತು ಎಂಬುದನ್ನು ಸಂಭ್ರಮಾಚರಣೆಯ ಚಿತ್ರಗಳಿಂದಲೇ ತಿಳಿಯಬಹುದು. ಟೀಂ ಇಂಡಿಯಾ ಈ ಸರಣಿ ವಿಜಯವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

1 /5

ಭಾರತ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಇಂಗ್ಲೆಂಡ್  ಅನ್ನು ಸೋಲಿಸುವ ಮೂಲಕ ಸರಣಿಯನ್ನು ಗೆದ್ದು ಇಂಗ್ಲೆಂಡ್ ನೆಲದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ನಾಯಕ ರೋಹಿತ್ ಸರಣಿ ಗೆದ್ದ ನಂತರ ಯುವ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಟ್ರೋಫಿ ಎತ್ತುವ ಅವಕಾಶ ನೀಡಿದರು.

2 /5

ಸರಣಿ ಗೆಲುವಿನ ನಂತರ, ಆಟಗಾರರು ಸಾಕಷ್ಟು ಮೋಜು ಮಾಡಿದ್ದರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಶಾಂಪೇನ್ ಬಾಟಲಿಓಪನ್‌ ಮಾಡಿ ಸಂಭ್ರಮಿಸಿದರು. ಪಂದ್ಯದಲ್ಲಿ ಹೀರೋ ತರ ಮಿಂಚಿದ ರಿಷಭ್ ಪಂತ್ ಸಹ ಈ ಸಂಭ್ರಮದಲ್ಲಿ ಕಾಣಿಸಿಕೊಂಡರು.  

3 /5

ಟೀಂ ಇಂಡಿಯಾದ ಈ ಸಂಭ್ರಮದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹಿಂದೆ ಬಿದ್ದಿಲ್ಲ. ದೊಡ್ಡ ಬಾಟಲಿಯನ್ನು ಎತ್ತಿಕೊಂಡು ಸಾಕಷ್ಟು ಮೋಜು ಮಾಡಿದ ಅವರು ಆಟಗಾರರನ್ನು ಹುರಿದುಂಬಿಸುತ್ತಿದ್ದರು.  

4 /5

ಕೊನೆಯ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿದ್ದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ 8 ವರ್ಷಗಳ ನಂತರ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದರೆ, 39 ವರ್ಷಗಳ ನಂತರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದೆ.

5 /5

ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 260 ರನ್‌ಗಳ ಗುರಿ ಪಡೆದಿತ್ತು. ಈ ಗುರಿ ಬೆನ್ನತ್ತಿದ ಹಾರ್ದಿಕ್ ಪಾಂಡ್ಯ 71 ರನ್ ಹಾಗೂ ರಿಷಬ್ ಪಂತ್ ಅಜೇಯ 125 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.