ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!

Budhaditya Rajyoga 2024: ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ. 

Budhaditya Rajyoga 2024: ಸೌರವ್ಯೂಹದಲ್ಲಿ ರಾಶಿ ಬದಲಾವಣೆಗಳು ಮತ್ತು ಗ್ರಹಗಳ ಸ್ಥಾನಗಳಿಂದ ಕೆಲವು ಮಂಗಳಕರ ರಾಜಯೋಗಗಳು ರೂಪುಗೊಳ್ಳುತ್ತವೆ. ಹೀಗೆ ರೂಪುಗೊಂಡ ಯೋಗಗಳ ಪ್ರಭಾವ ಎಲ್ಲಾ ರಾಶಿಯವರ ಜೀವನದಲ್ಲಿ ಗೋಚರಿಸುತ್ತದೆ. ಗ್ರಹಗಳ ಅಧಿಪತಿ ಅಂತಾ ಪರಿಗಣಿಸಲ್ಪಟ್ಟಿರುವ ಸೂರ್ಯನು ಪ್ರಸ್ತುತ ತನ್ನದೇಯಾದ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಸೆಪ್ಟೆಂಬರ್ 16ರಂದು ಸೂರ್ಯನು ಕನ್ಯಾರಾಶಿಯಲ್ಲಿ ಸಾಗುತ್ತಾನೆ. ಇದರ ಜೊತೆಗೆ ಗ್ರಹಗಳ ರಾಜಕುಮಾರನೆಂದು ಪರಿಗಣಿಸಲ್ಪಟ್ಟ ಬುಧ ಸೆಪ್ಟೆಂಬರ್ 23ರಂದು ತನ್ನದೇಯಾದ ಕನ್ಯಾರಾಶಿಯಲ್ಲಿ ಪ್ರವೇಶ ಮಾಡುತ್ತದೆ. ಕನ್ಯಾರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಉಂಟಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ. ಹಾಗಾದ್ರೆ ಈಗ ಕನ್ಯಾರಾಶಿಯಲ್ಲಿ ರೂಪಗೊಳ್ಳುವ ಬುಧಾದಿತ್ಯ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.

2 /4

ಸಿಂಹ ರಾಶಿಯ 2ನೇ ಮನೆಯಲ್ಲಿ ಹೊಸ ರಾಜಯೋಗ ಸೃಷ್ಟಿಯಾಗುತ್ತದೆ. ಇದರಿಂದ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದ್ದು, ಸಾಕಷ್ಟು ಧನಲಾಭ ದೊರೆಯುತ್ತದೆ. ಪರಿಣಾಮ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಹೊಸ ಸ್ನೇಹ ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ವ್ಯಾಪಾರ ವಿಸ್ತರಿಸುವ ಅವಕಾಶವೂ ದೊರೆಯಲಿದೆ. ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಸಿಂಹ ರಾಶಿಯವರ ಜ್ಞಾನ ವೃದ್ಧಿಯಾಗಲಿದೆ. ನೀವು ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಗೌರವ ಸಹ ಹೆಚ್ಚಾಗಲಿದೆ.

3 /4

ವೃಶ್ಚಿಕ ರಾಶಿಯ 11ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಇದರಿಂದ ಆದಾಯದಲ್ಲಿ ಉತ್ತಮ ಹೆಚ್ಚಳವಾಗುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆಯಿದೆ. ಇದರ ಮೂಲಕ ನೀವು ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅದರಿಂದ ಉತ್ತಮ ಆದಾಯ ಪಡೆಯುತ್ತೀರಿ. ನವವಿವಾಹಿತರು ಮಕ್ಕಳು ಪಡೆಯುವ ಸಾಧ್ಯತೆಯಿದೆ. ಬಹುಕಾಲದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

4 /4

ಮಕರ ರಾಶಿಯ 9ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಈ ಕಾರಣದಿಂದ ಮಕರ ರಾಶಿಯವರ ಅದೃಷ್ಟ ಅನುಕೂಲಕರವಾಗಿರುತ್ತದೆ. ವಿದೇಶ ಪ್ರವಾಸಕ್ಕೆ ನಿಮಗೆ ಅವಕಾಶ ದೊರೆಯಲಿದೆ. ನೀವು ನಿಮ್ಮ ಜೀವನದಲ್ಲಿ ಸುಖ-ಸಂತೋಷ ಪಡೆಯುತ್ತೀರಿ. ವ್ಯಾಪಾರದಲ್ಲಿ ಅಧಿಕ ಅಭಿವೃದ್ಧಿ ಕಂಡುಬರಲಿದೆ. ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಕೈಗೊಳ್ಳಬೇಕಾಗಬಹುದು. ಈ ಪ್ರವಾಸ ನಿಮಗೆ ಆರ್ಥಿಕ ಲಾಭವನ್ನು ತರುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ನೀವು ಬಹಳಷ್ಟು ಹಣ ಗಳಿಸುತ್ತೀರಿ ಮತ್ತು ಉಳಿಸುತ್ತೀರಿ.