54ನೇ ವಯಸ್ಸಿಗೆ ಕೂಡಿಬಂತು ಕಂಕಣಭಾಗ್ಯ! ತನ್ನದೇ ಪಕ್ಷದ ಸಂಸದೆಯನ್ನ ಮದುವೆಯಾಗ್ತಿದ್ದಾರೆ ರಾಹುಲ್ ಗಾಂಧಿ!? ವಧು ಯಾರೆಂದು ನೋಡಿ

Rahul Gandhi marriage with praniti shinde rumours: ಬಾಲಿವುಡ್ʼನಲ್ಲಿ ಸಲ್ಮಾನ್ ಖಾನ್ ಮದುವೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ರಾಜಕೀಯದ ವಿಷಯಕ್ಕೆ ಬಂದರೆ ರಾಹುಲ್‌ ಗಾಂಧಿಗೂ ಇದೇ ಪರಿಸ್ಥಿತಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

 ಬಾಲಿವುಡ್ʼನಲ್ಲಿ ಸಲ್ಮಾನ್ ಖಾನ್ ಮದುವೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ರಾಜಕೀಯದ ವಿಷಯಕ್ಕೆ ಬಂದರೆ ರಾಹುಲ್‌ ಗಾಂಧಿಗೂ ಇದೇ ಪರಿಸ್ಥಿತಿ. ಈಗಾಗಲೇ ಹಲವು ಸಭೆ, ವೇದಿಕೆಗಳಲ್ಲಿ ಕಾರ್ಯಕರ್ತರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದು ಸಹ ಇದೆ. ಆದರೆ ಇವೆಲ್ಲದರ ನಡುವೆ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.  

2 /7

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅತಿ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಸೋಲಾಪುರ ಸಂಸದೆ ಪ್ರಣಿತಿ ಶಿಂಧೆ ಅವರನ್ನು ವಿವಾಹವಾಗಲಿದ್ದಾರೆ ಎಂಬುದಾಗಿ ಭಾರೀ ಪ್ರಚಾರ ನಡೆಯುತ್ತಿದೆ. ರಾಹುಲ್ ಕುಟುಂಬದವರು ಈಗಲೇ ಮದುವೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡ್ತಿದ್ದಾರೆ ಎನ್ನಲಾಗಿದೆ.  

3 /7

ಅಷ್ಟಕ್ಕೂ ರಾಹುಲ್ ಗಾಂಧಿ ಮದುವೆ ಜೊತೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಣಿತಿ ಶಿಂಧೆ ಯಾರು ಎಂಬುದನ್ನು ತಿಳಿದುಕೊಳ್ಳೋಣ.  

4 /7

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ ಪ್ರಣಿತಿ ಶಿಂಧೆಯನ್ನು ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ನಡೆದ ಭಾರತ್ ಜೋಡೋಯಾತ್ರೆಯಲ್ಲಿ ರಾಹುಲ್ ಮತ್ತು ಪ್ರಣಿತಿ ಕೈ ಕೈ ಹಿಡಿದುಕೊಂಡಿದ್ದರು. ಸದ್ಯ ಇಬ್ಬರ ನಡುವೆ ಏನೋ ಇದೆ ಎಂಬ ವದಂತಿಗಳು ಹರಿದಾಡುತ್ತಿವೆ.  

5 /7

ಮತ್ತೊಂದೆಡೆ, ಸಂಸದೆಯಾಗಿ ಗೆದ್ದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಣಿತಿ ಶಿಂಧೆ, ರಾಹುಲ್‌ʼಗೆ ವಿಶೇಷವಾಗಿ ಹಾರೈಸಿದ್ದು, ಕಾಂಗ್ರೆಸ್ ನಾಯಕ ಕೊನೆಗೂ ಮದುವೆಯಾಗುತ್ತಿದ್ದಾರೆ ಎಂದು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.  

6 /7

ಇತ್ತೀಚೆಗಷ್ಟೇ ಮೇ 13ರಂದು ರಾಯ್ ಬರೇಲಿಯಲ್ಲಿ ನಡೆದ ರ್ಯಾಲಿಯಲ್ಲಿ ಕೆಲ ಕಾರ್ಯಕರ್ತರು ರಾಹುಲ್ ಗಾಂಧಿ ಮದುವೆಯಾಗುವುದು ಯಾವಾಗ ಎಂದು ಪ್ರಿಯಾಂಕಾ ಗಾಂಧಿ ಅವರನ್ನು ಕೇಳಿದ್ದರು. ಇದಕ್ಕೆ ರಾಹುಲ್ ಉತ್ತರಿಸಬೇಕು ಎಂದು ಪ್ರಿಯಾಂಕಾ ನಗುತ್ತಾ ಉತ್ತರಿಸಿದ್ದರು.  

7 /7

ಅದಲ್ಲದೆ ಇತ್ತೀಚೆಗೆ ರಾಹುಲ್ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದಾಗ ಅಲ್ಲಿನ ವಿದ್ಯಾರ್ಥಿಗಳು ಕೂಡ ರಾಹುಲ್ ಮದುವೆ ಯಾವಾಗ ಎಂದು ಕೇಳಿದ್ದರು. ಇದಕ್ಕೆ ಅವರು ಕಳೆದ 20-30 ವರ್ಷಗಳಿಂದ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದರು. ಈ ಎಲ್ಲದರ ಮಧ್ಯೆ ಸೊಲ್ಲಾಪುರ ಸಂಸದೆಯ ಜೊತೆ ಮದುವೆ ನಿಶ್ಚಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ. ಇದಕ್ಕೆ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.