The Night Manager : ಇಬ್ಬರು ನಟರ ಮಧ್ಯ ಸಿಕ್ಕಿಕೊಂಡ ʼಶೋಭಿತಾʼ..! ಎನ್‌ ನಡಿತಿದೆ ಇಲ್ಲಿ..

Sobhita dhulipala : ಇತ್ತೀಚಿಗೆ ನಟಿ ಶೋಭಿತಾ ಧೂಳಿಪಾಲ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. ತಮ್ಮ ಅಂದದ ಮೂಲಕ ಇಂಟರ್‌ನೆಟ್‌ನ ಸೆನ್ಸೇಷನ್‌ ಆಗುತ್ತಿರುವ ಬೆಡಗಿ, ಡೇಟಿಂಗ್‌ ನಂತಹ ವಂದತಿಗಳಿಂದಲೂ ಹೆಚ್ಚು ಫೇಮಸ್‌ ಆಗುತ್ತಿದ್ದಾರೆ. ಇದೀಗ ಶೋಭಿತಾ ಮತ್ತೊಂದು ಫೋಟೊ ವೈರಲ್‌ ಆಗಿದೆ.

Sobhita dhulipala : ಟಾಲವುಡ್‌ ಬೆಡಗಿ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿಶೇಷವಾಗಿ ಪರಿಚಯ ಅಗತ್ಯವಿಲ್ಲ.  ಈಗಾಗಲೇ ಸೋಷಿಯಲ್‌ ಮೀಡಿಯಾ ಮತ್ತು ತೆಲುಗು ಚಿತ್ರಗಳ ಜೊತೆಗೆ ಹಿಂದಿ ಚಿತ್ರಗಳಲ್ಲೂ ನಟಿಸುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಸದ್ಯ ಶೋಭಿತಾ ಮತ್ತು ಅನಿಲ್‌ ಕಪೂರ್‌ ಹಾಗೂ ಆದಿತ್ಯ ರಾಯ್‌ ಒಳಗೊಂಡು ಚಿತ್ರವೊಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
 

1 /6

ನಟಿ ಶೋಭಿತಾ ಧುಲಿಪಾಲಾ ಹಿಂದಿ ಚಿತ್ರಗಳ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ನಂತರ ತೆಲುಗಿನ ಗುಡಚಾರಿ ಚಿತ್ರದಲ್ಲಿ ಸಮೀರಾ ರಾವ್ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು.   

2 /6

ಗುಡಾಚಾರಿ ನಂತರ ಇದೀಗ ಅವರು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನೈಟ್‌ ಮ್ಯಾನೇಜರ್‌ ಸಿನಿಮಾದಲ್ಲಿ ಸಖತ್‌ ಹಾಟ್‌ ಲುಕ್‌ನಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ.

3 /6

ಅಲ್ಲದೆ, ಪೊನ್ನಿಯನ್ ಸೆಲ್ವನ್‌ನಲ್ಲಿ ಎರಡೂ ಭಾಗಗಳಲ್ಲಿ ಶೋಭಿತಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಪೋನಿಯನ್ ಸೆಲ್ವನ್ ಅವರ ಗೆಳತಿಯ ಪಾತ್ರವನ್ನು ನಿರ್ವಹಿಸಿದರು.

4 /6

ಈಗಾಗಲೇ ಮೂರು ವೆಬ್ ಸರಣಿಗಳಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ. ಮೂರನೇ ವೆಬ್ ಸರಣಿ ದಿ ನೈಟ್ ಮ್ಯಾನೇಜರ್‌ನ ಎರಡನೇ ಸೀಸನ್‌ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

5 /6

ಇತ್ತೀಚಿಗೆ ನಟಿ ಅನಿಲ್ ಕಪೂರ್ ಅವರು ಆದಿತ್ಯ ರಾಯ್ ಕಪೂರ್ ನಡುವೆ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. 

6 /6

ಸದ್ಯ ದಿ ನೈಟ್‌ ಮ್ಯಾನೇಜರ್‌ ವೆಬ್ ಸರಣಿಯ ಎರಡನೇ ಸೀಸನ್ ಜೂನ್ 30 ರಿಂದ ಸ್ಟ್ರೀಮಿಂಗ್ ಆಗಲಿದೆ. ​