ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಉಂಟಾಗಲೂ ನಿಮ್ಮ ಈ ಅಭ್ಯಾಸಗಳೇ ಕಾರಣವಿರಬಹುದು

                     

Dark Circles Treatment: ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿಯಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕಣ್ಣುಗಳ ಸುತ್ತ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಕೂಡ ಒಂದು. ಆದರೆ, ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಉಂಟಾಗಲು ನಿಮ್ಮ ಕೆಲವು ಅಭ್ಯಾಸಗಳೆ ಕಾರಣ ಎಂದು ನಿಮಗೆ ತಿಳಿದಿದೆಯೇ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಜೀವನಾಡಿಯಾಗಿರುವ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯೂ ಕೂಡ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಉಂಟಾಗಲು ಕಾರಣ. ನೀವೂ ಸಹ ಡಾರ್ಕ್ ಸರ್ಕಲ್ನಿಂದಾಗಿ ತೊಂದರೆಗೊಳಗಾಗಿದ್ದರೆ ಮೊದಲು ನಿಮ್ಮ ಈ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.

2 /5

ಕೆಲವರಿಗೆ ತಡರಾತ್ರಿಯವರೆಗೂ ಎಚ್ಚರವಿರುವ ಅಭ್ಯಾಸವಿರುತ್ತದೆ. ನಿಮ್ಮ ಈ ಅಭ್ಯಾಸವೂ ಕೂಡ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ನಿರ್ಮಾಣವಾಗಲು ಕಾರಣ. 

3 /5

ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದೆ ಇರುವುದರಿಂದಲೂ ಡಾರ್ಕ್ ಸರ್ಕಲ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಕಡಿಮೆ ನೀರು ಕುಡಿಯುವವರಲ್ಲೂ ಸಹ ಈ ಸಮಸ್ಯೆ ಸಾಮಾನ್ಯವಾಗಿದೆ. 

4 /5

ಕೆಲವರು ಕಡಿಮೆ ದರದಲ್ಲಿ ಸಿಗುತ್ತದೆ ಎಂದು ಕಡಿಮೆ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ಕೊಳ್ಳುತ್ತಾರೆ. ಆದರೆ, ಇವುಗಳು  ನಿಮ್ಮ ಸ್ಕಿನ್ ಅಲರ್ಜಿಗೂ ಕಾರಣವಾಗಿರಬಹುದು. ಇದರಿಂದಲೂ ಡಾರ್ಕ್ ಸರ್ಕಲ್ ಉಂಟಾಗವಾಹುದು. 

5 /5

ಅತಿಯಾಗಿ ಧೂಮಪಾನ ಮಾಡುವವರಿಗೂ ಸಹ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ.  ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.