ಮಾರ್ಚ್ 22 ರಿಂದ 1 ವರ್ಷದವರೆಗೆ ಈ ರಾಶಿಗಳ ಜನರಿಗೆ ಕಷ್ಟಕಾಲ, ರಾಹು-ಶನಿ ಯುತಿಯಿಂದ ನಿರ್ಮಾಣಗೊಳ್ಳುಟ್ಟಿದೆ ಖತರ್ನಾಕ್ ಯೋಗ!

Vikrama Samvat 2080: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವಿಕ್ರಮ ಸಂವತ್ಸರ 2023 ರಿಂದ ಆರಂಭಗೊಳ್ಳುತ್ತಿದೆ. ನೂತನ ವರ್ಷ ಕೆಲ ರಾಶಿಗಳ ಜನರ ಪಾಲಿಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ.
 

Ugadi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಿಂದು ಹೊಸ ವರ್ಷ ಮಾರ್ಚ್ 22, 2023 ರಿಂದ ಆರಂಭಗೊಳ್ಳುತ್ತಿದೆ. ಈ ದಿನದಿಂದಲೇ ವಿಕ್ರಮ ಸಂವತ್ಸರ 2080 ಕೂಡ ಆರಂಭಗೊಳ್ಳುತ್ತಿದೆ. ಶಾಸ್ತ್ರಗಳ ಪ್ರಕಾರ ಈ ದಿನ ಪರಬ್ರಹ್ಮ ಸೃಷ್ಟಿಯನ್ನು ನಿರ್ಮಿಸಿದ ಎಂದೂ ಕೂಡ ಹೇಳಲಾಗುತ್ತದೆ. ಇನ್ನೊಂದೆಡೆ ಈ ದಿನದಿಂದ ಮುಂದಿನ 9 ದಿನಗಳ ಕಾಲ ತಾಯಿ ದುರ್ಗೆ ಜನರ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ. ಹೀಗಾಗಿ ಜೋತಿಷ್ಯ ಶಾಸ್ತ್ರದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ.

 

ಇದನ್ನೂ ಓದಿ-ವಿಕ್ರಮ ಸಂವತ್ಸರ 2080ರ ಆರಂಭದಲ್ಲಿಯೇ ಮೂರು ಮಹಾ ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರಿಗೆ ವರ್ಷವಿಡೀ ಧನಲಾಭ!
 

ಆದರೆ, ಮುಂದಿನ 1 ವರ್ಷಗಳ ಕಾಲ ಕೆಲ ರಾಶಿಗಳ ಜಾತಕದವರಿಗೆ ಕಷ್ಟ ಕಾಲ ಎದುರಾಗಲಿದೆ. ಅವರ ಜೀವನದಲ್ಲಿ ಹಲವು ರೀತಿಯ ಏರಿಳಿತಗಳು ಕಂಡುಬರಲಿವೆ. ಏಕೆಂದರೆ ಶನಿ ಶತಭಿಶಾ ನಕ್ಷತ್ರದಲ್ಲಿ ಪ್ರವೇಶಿಸಿದ್ದು, ಶತಭಿಶಾ ನಕ್ಷತ್ರಕ್ಕೆ ರಾಹು ಅಧಿಪತಿಯಾಗಿದ್ದಾನೆ. ಶತಭಿಶಾ ನಕ್ಷತ್ರದ ಮೊದಲ ಹಾಗೂ ಅಂತಿಮ ಚರಣಕ್ಕೆ ಗುರು ಅಧಿಪತಿಯಾಗಿದ್ದಾನೆ. ಪ್ರಸ್ತುತ ಶನಿ ಶತಭಿಶಾ ನಕ್ಷತ್ರದ ಮೊದಲ ಚರಣದಲ್ಲಿರಲಿದ್ದಾನೆ, ಅಲ್ಲಿ ಆತ ಅಕ್ಟೋಬರ್ 17ರ ವರೆಗೆ ಇರಲಿದ್ದಾನೆ ಮತ್ತು ಈ ಚರಣಕ್ಕೆ ಗುರು ಅಧಿಪತಿಯಾಗಿದ್ದಾನೆ. ಈ ಅವಧಿಯಲ್ಲಿ ಕೆಲ ಜನರು ಎಚ್ಚರಿಕೆಯಿಂದ ಇರಬೇಕಾದ ಕಾಲ ಎದುರಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ಶನಿ-ರಾಹು-ಕೇತುಗಳ ಕೆಟ್ಟ ಪ್ರಭಾವಗಳಿಂದ ಪಾರಾಗಲು ಈ ಮಹಾ ಉಪಾಯ ಮಾಡಿ, ಅಪಾರ ಧನವೃದ್ಧಿಯ ಜೊತೆಗೆ ಭಾಗ್ಯೋದಯ ಪ್ರಾಪ್ತಿ!

 

ಹೊಸ ವರ್ಷದಲ್ಲಿ ಗ್ರಹಗಳ ಸ್ಥಿತಿ ಹೇಗಿರಲಿದೆ?
ಹಿಂದೂ ಹೊಸ ವರ್ಷ ಬುಧವಾರದಿಂದ ಆರಂಭಗೊಳ್ಳುತ್ತಿದೆ. ಈ ದಿನ ಉತ್ತರಾ ಭಾದ್ರಪದ ನಕ್ಷತ್ರವಿದೆ. ಮೀನ ರಾಶಿಯಲ್ಲಿ ಸೂರ್ಯ, ಚಂದ್ರ, ಬುಧ ಹಾಗೂ ನೆಪ್ಚೂನ್ ಇರಲಿದ್ದಾರೆ. ಜೊತೆಗೆ ಮೇಷ ರಾಶಿಯಲ್ಲಿ ರಾಹು ಶುಕ್ರರ ಮೈತ್ರಿ ಇರಲಿದೆ. ಮಂಗಳ ಗ್ರಹ ಮಿಥುನ ರಾಶಿಯಲ್ಲಿದ್ದುಕೊಂಡು ಶನಿಯ ಜೊತೆಗೆ ನವಪಂಚಮ ಯೋಗ ರೂಪಿಸುತ್ತಿದ್ದಾನೆ.

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಶ್ಚಿಕ ರಾಶಿ: ಹಿಂದೂ ಹೊಸ ವರ್ಷ ವೃಶ್ಚಿಕ ರಾಶಿಯ ಜನರಿಗೆ ಸ್ವಲ್ಪ ಕಷ್ಟಕರ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ರಾಶಿಯ ರಾಶ್ಯಾಧಿಪ ಪ್ರಸ್ತುತ ನಿಮ್ಮ ಜಾತಕದ ಅಷ್ಟಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಗಾಯ-ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ. ಆರ್ಥಿಕ ವಿಷಯಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಮುಂದಿನ ಒಂದು ವರ್ಷ ಸಾಲ ತೆಗೆದುಕೊಳ್ಳುವುದರಿಂದ ಪಾರಾಗಿ. ಸಂಬಂಧಗಳಲ್ಲಿ ಕಹಿ ಅನುಭವ ಎದುರಾಗುವ ಸಾಧ್ಯತೆ ಇದೆ. ದಾಖಲೆಗಳ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಲು ಯತ್ನಿಸಿ.  

2 /3

ಮಕರ ರಾಶಿ: ಮುಂದಿನ ಒಂದು ವರ್ಷ ನೀವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುವ ಪ್ರಸಂಗ ಇದೆ. ಪ್ರಸ್ತುತ ನಿಮ್ಮ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿದೆ. ಜೊತೆಗೆ ನಿಮ್ಮ ರಾಶಿಯ ಅಧಿಪತಿಯಾಗಿರುವ ಶನಿ ಮಹಾರಾಜ ಮಂಗಳನ ಜೊತೆಗೆ ನವಪಂಚಮದಲ್ಲಿರಲಿದ್ದಾನೆ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ನೀವು ಅತಿ ಉತ್ಸಾಹದಲ್ಲಿ ಏನನ್ನಾದರೂ ಮಾಡಲು ಹೋಗಿ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ, ಈ ವರ್ಷ ಆಡಂಬರ ಹಾಗೂ ಯಾತ್ರೆಯ ಮೇಲೆ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಆದರೆ, ಆಸ್ತಿ-ಪಾಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಶುಭ ಸಾಬೀತಾಗುವ ಸಾಧ್ಯತೆ ಇದೆ.   

3 /3

ವೃಷಭ ರಾಶಿ: ನಿಮ್ಮ ಪಾಲಿಗೆ ಮುಂದಿನ ಒಂದು ವರ್ಷ ಆರ್ಥಿಕವಾಗಿ ವೆಚ್ಚದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಅಧಿಪತಿಯಾಗಿರುವ ಶುಕ್ರ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಆಡಂಬರ-ವಿಲಾಸಿತನದ ವಸ್ತುಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಜೊತೆಗೆ ಅನಗತ್ಯ ವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಬಜೆಟ್ ಬಿಗಡಾಯಿಸುವ ಸಾಧ್ಯತೆ ಇದೆ. ಇದಲ್ಲದೆ ನೀವು ವಿಪರೀತಲಿಂಗ ಮತ್ತು ಸಂಬಂಧಿಗಳಿಂದ ಎಚ್ಚರದಿಂದ ಇರಬೇಕಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)