Lucky Girls: ಬಾಳಸಂಗಾತಿಯ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಾರೆ ಈ ರಾಶಿಯ ಹುಡುಗಿಯರು!

Lucky Girls For Husband: ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯ ಹುಡುಗಿಯರು ಭಾವುಕರಾಗಿರುತ್ತಾರೆ ಮತ್ತು ಶಾಂತ ಸ್ವಭಾವದವರಾಗಿರುತ್ತಾರೆ. ಅಷ್ಟೇ ಅಲ್ಲ ಇವರು ತಮ್ಮ ಬಾಳ ಸಂಗಾತಿಯ ಮೇಲೆ ಪ್ರೀತಿಯ ಸುರಿಮಳೆಯನ್ನೆ ಸುರಿಸುತ್ತಾರೆ.
 

Lucky Zodiac Signs: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳು ಹಾಗೂ 27 ನಕ್ಷತ್ರಗಳ ಕುರಿತು ವಿವರಣೆಯನ್ನು ನೀಡಲಾಗಿದೆ. ಅಲ್ಲದೆ, ಈ ರಾಶಿಗಳಿಗೆ ಸಂಬಂಧಿಸಿದ ಜನರ ಸ್ವಭಾವ ಮತ್ತು ವ್ಯಕ್ತಿತ್ವವು ಪರಸ್ಪರ ಭಿನ್ನವಾಗಿರುತ್ತದೆ. ಏಕೆಂದರೆ ಈ ರಾಶಿಗಳ ಮೇಲೆ ವಿವಿಧ ಗ್ರಹಗಳ ಆಧಿಪತ್ಯ ಇರುತ್ತದೆ, ಇಂದಿನ ಲೇಖನದಲ್ಲಿ ನಾವು ಒಟ್ಟು 3 ರಾಶಿಗಳ ಜನರ ಕುರಿತು ಚರ್ಚೆಯನ್ನು ನಡೆಸುತ್ತಿದ್ದು, ಈ ರಾಶಿಗಳನ್ನು ಹೊಂದಿರುವ ಹುಡುಗಿಯರು ತಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತಾರೆ. ಅಷ್ಟೇ ಅಲ್ಲ ಪ್ರತಿ ಸುಖ ದುಃಖದಲ್ಲೂ ಪತಿಯೊಂದಿಗೆ ಸದಾ ನಿಲ್ಲುತ್ತಾಳೆ. ಇವರು ಪತಿಗೆ ಅದೃಷ್ಟವೆಂದು ಸಾಬೀತಾಗುತ್ತಾರೆ. ಇದರೊಂದಿಗೆ ಇವರ ದಾಂಪತ್ಯ ಜೀವನ ಕೂಡ ಸದಾ ಸುಖಮಯವಾಗಿರುತ್ತದೆ.

 

ಇದನ್ನೂ ಓದಿ-ತನ್ನ ನೀಚ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಭ್ರಮಣೆ ಆರಂಭ, 5 ರಾಶಿಗಳ ಜನರಿಗೆ ಅಪಾರ ಯಶಸ್ಸು-ಧನ ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 


 

1 /3

ವೃಷಭ ರಾಶಿ- ವೃಷಭ ರಾಶಿಯ ಹುಡುಗಿಯರು ತುಂಬಾ ಬುದ್ಧಿವಂತರು ಮತ್ತು ಕಲಾಭಿಮಾನಿಗಳಾಗಿರುತ್ತಾರೆ. ಕುಟುಂಬ, ಪತಿ ಮತ್ತು ಪತಿಯ ಸಹೋದರರ ಪಾಲಿಗೂ ಕೂಡ ಇವರು ಅದೃಷ್ಟವಂತರಾಗಿರುತ್ತಾರೆ. ಇವರು  ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುವವರಾಗಿರುತ್ತಾರೆ. ಇವರು ತುಂಬಾ ರೊಮ್ಯಾಂಟಿಕ್ ಸ್ವಭಾವದವರು. ಅಷ್ಟೇ ಅಲ್ಲ ಇವರಿಗೆ ಅದ್ದೂರಿ ಜೀವನ ನಡೆಸಲು ಇಷ್ಟವಾಗುತ್ತದೆ. ಇದೇ ವೇಳೆ, ಇವರು ಮೇಕಪ್ ಮತ್ತು ಉಡುಗೆಗಾಗಿ ಹಣವನ್ನು ಖರ್ಚು ಮಾಡುತ್ತಾರೆ. ಈ ರಾಶಿಯ ಹುಡುಗಿಯರು ಜೀವನದಲ್ಲಿ ಉನ್ನತ ಸ್ಥಾನವನ್ನು ಸಾಧಿಸುವುದಲ್ಲದೆ, ತಮ್ಮ ಪತಿಯ ವೃತ್ತಿಜೀವನಕ್ಕೆ ಅದೃಷ್ಟಶಾಲಿ ಎಂದು ಸಾಬೀತಾಗುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ, ಆತನೇ ಇವರಿಗೆ ಈ ಗುಣಗಳನ್ನು ದಯಪಾಲಿಸುತ್ತಾನೆ.  

2 /3

ಕರ್ಕ ರಾಶಿ- ಕರ್ಕ ರಾಶಿಯ ಹುಡುಗಿಯರು ಶಾಂತ ಮತ್ತು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ಇನ್ನೊಂದೆಡೆ ಇವರು ಸ್ವತಃ ಸಂತೋಷವಾಗಿರುತ್ತಾರೆ ಮತ್ತು ತನ್ನ ಸುತ್ತಲಿನ ಜನರನ್ನು ಸಹ ಸಂತೋಷವಾಗಿರಿಸಲು ಪ್ರಯತ್ನಿಸುತ್ತಾಳೆ. ಇವರು ತಮ್ಮ ಜೀವನ ಸಂಗಾತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವವರಾಗಿದ್ದಾರೆ. ಆತನ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಆಳವಾಗಿ ಯೋಚಿಸುವವರಾಗಿರುತ್ತಾರೆ. ತನ್ನ ಪತಿಯ  ಪ್ರತಿ ಸುಖ ಮತ್ತು ದುಃಖದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾಳೆ. ಇವರ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಸಾಗುತ್ತದೆ. ಕರ್ಕ ರಾಶಿಯ ಮೇಲೆ ಚಂದ್ರನ ಆಧಿಪತ್ಯ ಇದೆ. ಇಡೀ ಕಾರಣದಿಂದ ಅವರಲ್ಲಿ ಈ ಗುಣಗಳು ಬಂದಿರುತ್ತವೆ.   

3 /3

ಮೀನ ರಾಶಿ- ಈ ರಾಶಿಯ ಹುಡುಗಿಯರು ತಮ್ಮ ಬಾಳಸಂಗಾತಿಯನ್ನು ಹೆಚ್ಚು ಪ್ರೀತಿಸುವವರಾಗಿರುತ್ತಾರೆ ಎಂದು ಎಂದು ಪರಿಗಣಿಸಲಾಗುತ್ತದೆ. ಇವರು ತುಂಬಾ ಆಧ್ಯಾತ್ಮಿಕ ಮತ್ತು ಸಾತ್ವಿಕ ಚಿಂತನೆಗಳುಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲ ಇವರು ಕುಟುಂಬ ಸದಸ್ಯರೊಂದಿಗೆ ಸಲೀಸಾಗಿ ಹೊಂದಿಕೊಳ್ಳುತ್ತಾರೆ. ಇವರ ವೈವಾಹಿಕ ಜೀವನ ತುಂಬಾ ಚೆನ್ನಾಗಿ ಸಾಗುತ್ತದೆ. ಪತಿಯೊಂದಿಗೆ ಸ್ನೇಹ ಬಾಂಧವ್ಯವನ್ನೂ ಕಾಪಾಡಿಕೊಳ್ಳುವಲ್ಲಿ ಇವರು ಯಶಸ್ವಿಯಾಗುತ್ತಾರೆ. ಇದರೊಂದಿಗೆ, ಇವರು ಆರಾಧಕರು. ತನ್ನ ಗಂಡನ ಹೃದಯವನ್ನು ಆಳುವಂತಾವರಾಗಿರುತ್ತಾರೆ ಮತ್ತು ತನ್ನ ಅತ್ತೆಯಿಂದಲೂ ಪ್ರೀತಿಯನ್ನು ಪಡೆಯುತ್ತಾರೆ ಎನ್ನಲಾಗುತ್ತದೆ. ದೇವಗುರು ಬೃಹಸ್ಪತಿ ಮೀನ ರಾಶಿಯ ಅಧಿಪತಿ ಮತ್ತು ಆತನೇ ಅವರಿಗೆ ಈ ಗುಣಗಳನ್ನು ದಯಪಾಲಿಸುತ್ತಾನೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)