ಈ ಚೆಲುವೆಯ ಹಾಟ್ ನೆಸ್ ಬಗ್ಗೆ ಭಾರೀ ಚರ್ಚೆ: ಟೀಂ ಇಂಡಿಯಾ ಆಟಗಾರನ ಜೊತೆ ಡೇಟಿಂಗ್..?

14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನವೇ ಈ ತಾರಾ ಜೋಡಿಯ ಬಗ್ಗೆ ಗುಸು ಗುಸು ಮಾತುಗಳು ಕೇಳಿಬಂದಿದ್ದವು.

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ ಮನ್ ಪೃಥ್ವಿ ಶಾ ಕಡಿಮೆ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಶಾ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಮಾತ್ರವಲ್ಲದೆ ತಮ್ಮ ಗೆಳತಿ ಜೊತೆಗಿನ ಸಂಬಂಧದಿಂದಲೂ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಬೆಡಗಿ ಪ್ರಾಚಿ ಸಿಂಗ್ ಬಲೆಗೆ ಫೃಥ್ವಿ ಶಾ ಬಿದ್ದಿದ್ದಾರೆ. 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನವೇ ಈ ತಾರಾ ಜೋಡಿಯ ಬಗ್ಗೆ ಗುಸು ಗುಸು ಮಾತುಗಳು ಕೇಳಿಬಂದಿದ್ದವು. ಪ್ರಾಚಿ ಸಿಂಗ್ ಜೊತೆ ದೆಹಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ ಮನ್ ಪೃಥ್ವಿ ಶಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಾಚಿ ಇತ್ತೀಚೆಗೆ Instagramನಲ್ಲಿ ತಮ್ಮ ಕೆಲವು ಉತ್ತಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಪೃಥ್ವಿ ಶಾ ಅವರ ಗರ್ಲ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಪ್ರಾಚಿ ಸಿಂಗ್ ಇತ್ತೀಚೆಗೆ ಕಪ್ಪು ಉಡುಗೆ ತೊಟ್ಟಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಈ ಫೋಟೋಗಳಲ್ಲಿ ಪ್ರಾಚಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ.

2 /6

ವರದಿಗಳ ಪ್ರಕಾರ ಪ್ರಾಚಿ ಸಿಂಗ್ ಮತ್ತು ಪೃಥ್ವಿ ಶಾ ಹಲವಾರು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ, ಪೃಥ್ವಿ ಮತ್ತು ಪ್ರಾಚಿ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಇವರಿಬ್ಬರ ಒಡನಾಟ ಕಂಡುಬರುತ್ತಿದೆ.   

3 /6

ಪ್ರಾಚಿ ಸಿಂಗ್ 22 ಜುಲೈ 1995 ರಂದು ಮುಂಬೈನಲ್ಲಿ ಜನಿಸಿದರು. ಪ್ರಾಚಿ ತುಂಬಾ ಸುಂದರವಾಗಿದ್ದಾಳೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯಳಾಗಿದ್ದಾರೆ.

4 /6

ಪೃಥ್ವಿ ಶಾ ಅವರ ಗೆಳತಿ ಪ್ರಾಚಿ ಸಿಂಗ್ ಮುಂಬೈ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.

5 /6

ಪ್ರಾಚಿ ಸಿಂಗ್ 2019ರಲ್ಲಿ ಮನರಂಜನಾ ಉದ್ಯಮವನ್ನು ಪ್ರವೇಶಿಸಿದರು. ಕಲರ್ಸ್ ಟಿವಿ ಶೋ ‘ಉಡಾನ್’ ನಲ್ಲಿ ವಂಶಿಕಾ ಶರ್ಮಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

6 /6

ಪ್ರಾಚಿ ಸಿಂಗ್ ಉತ್ತಮ ನಟಿ ಹಾಗೂ ಉತ್ತಮ ನೃತ್ಯಗಾರ್ತಿ. ಪ್ರಾಚಿ ಸಿಂಗ್ ಆಗಾಗ ತಮ್ಮ ನೃತ್ಯದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದು ಅಭಿಮಾನಿಗಳಿಗೂ ತುಂಬಾ ಇಷ್ಟವಾಗಿದೆ.