ಏರಿಳಿತವಾಗುವ ಬ್ಲಡ್ ಶುಗರ್ ಜೊತೆಗೆ ಈ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿಯಿರುವ ಎಲೆಯಿದು

ಪೇರಳೆ ಎಲೆಗಳು ನಿಮಗೆ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಹ ಪ್ರಯೋಜನವನ್ನು ನೀಡುತ್ತದೆ.

ಬೆಂಗಳೂರು : ಪೇರಳೆ ಹಣ್ಣು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಮಧುಮೇಹದಿಂದ ಹೃದ್ರೋಗದವರೆಗೆ ಈ ಹಣ್ಣು ಪ್ರಯೋಜನಕ್ಕೆ ಬರುತ್ತದೆ. ಈ ಹಣ್ಣಿನ ಪಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅದರ ಎಲೆಗಳು ಕೂಡಾ ಅಷ್ಟೇ ಪ್ರಯೋಜನಕಾರಿಯಾಗಿದೆ.  ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೂ ಪ್ರಯೋಜನವನ್ನು ನೀಡುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ರಕ್ತದಲ್ಲಿನ ಸಕ್ಕರೆಯ ಏರಿಳಿತ ಆರೋಗ್ಯಕ್ಕೆ ಹಾನಿಕಾರಕ. ಪೇರಳೆ ಎಲೆಗಳನ್ನು ಬಳಸಿ ಇದನ್ನು ನಿಯಂತ್ರಿಸಬಹುದು. ಹೌದು, ಪೇರಳೆ ಎಲೆಗಳು ಆಲ್ಫಾ-ಗ್ಲುಕೋಸಿಡೇಸ್ ಕಿಣ್ವವನ್ನು ಹೊಂದಿರುತ್ತವೆ. ಇದು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು, 3 ತಿಂಗಳ ಕಾಲ ಪ್ರತಿದಿನ ಅದರ ಎಲೆಗಳ ಚಹಾವನ್ನು ಕುಡಿಯಬೇಕು.   

2 /4

ನಾವು ಸೇವಿಸುವ ಆಹಾರಗಳಲ್ಲಿ ಇರುವ ಪಿಷ್ಟವು ಸಕ್ಕರೆಯಾಗಿ ಬದಲಾಗಲು ಪ್ರಾರಂಭಿಸಿದಾಗ ತೂಕ ಹೆಚ್ಚಾಗುತ್ತದೆ.  ಪೇರಳೆ ಎಲೆಗಳು ಈ ಪ್ರಕ್ರಿಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅದು ತೂಕವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ. ಪೇರಳೆ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ ಅಂಶವು ತುಂಬಾ ಕಡಿಮೆಯಾಗಿರುತ್ತದೆ . ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3 /4

ಪೇರಳೆ ಎಲೆಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ.  ಅತಿಸಾರದಿಂದ ಬಳಲುತ್ತಿದ್ದರೆ, ಪೇರಳೆ ಎಲೆಗಳು ಅದನ್ನಿ ನಿವಾರಿಸುತ್ತದೆ. ಅರ್ಧ ಕಪ್ ಅಕ್ಕಿ ಹಿಟ್ಟನ್ನು ಎಲೆಗಳೊಂದಿಗೆ ಒಂದು ಲೋಟ ನೀರಿನಲ್ಲಿ ಕುದಿಸಿ ಮತ್ತು ದಿನಕ್ಕೆ ಎರಡು ಬಾರಿ ಈ ಪಾನೀಯವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಅತಿಸಾರದ ಸಮಸ್ಯೆಯಿಂದ ಶೀಘ್ರವೇ ಪರಿಹಾರ ಸಿಗುತ್ತದೆ.

4 /4

ವ್ಯಾಯಾಮ ಮಾಡದಿರುವುದು ಮತ್ತು ಕರಿದ ಆಹಾರವನ್ನು ತಿನ್ನುವುದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೀವು ಪೇರಳೆ ಎಲೆಗಳ ಚಹಾವನ್ನು ಕುಡಿಯಬಹುದು. ಪೇಳೆ ಎಲೆಯ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.