ಈ ಸ್ಟಾರ್‌ ನಟ ವರ್ಷಕ್ಕೆ 30 ಕೋಟಿ ರೂ. ದೇಣಿಗೆ ನೀಡ್ತಾರೆ..! ಬಡ ವಿದ್ಯಾರ್ಥಿಗಳಿಗೆ ಬೆನ್ನಾಗಿ ನಿಂತಿದ್ದಾರೆ..

Actor life : ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಸಲ್ಮಾನ್ ಖಾನ್, ಸೋನು ಸೂದ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌ ಸೇರಿದಂತೆ ಹಲವು ನಟರು ಸಮಾಜ ಕಲ್ಯಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಸುದೀಪ್‌, ಯಶ್‌ ತಮ್ಮದೇಯಾದ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಾರೆ.. 
 

1 /7

ಸಿನಿ ಉದ್ಯಮದಲ್ಲಿ ದೊಡ್ಡ ದಾನಿಗಳ ಯಾರು ಎಂಬ ವಿಷಯಕ್ಕೆ ಬಂದರೆ, ಈ ನಟನ ಮುಂದೆ ಬಾಲಿವುಡ್‌ನ ದೊಡ್ಡ ನಟರು ಏನೂ ಅಲ್ಲ.. ಈ ನಟನನ್ನು ವಿಶ್ವದಾದ್ಯಂತ 'ಪ್ರಿನ್ಸ್ ಆಫ್ ಟಾಲಿವುಡ್' ಎಂದು ಕರೆಯಲಾಗುತ್ತದೆ. ಅವರು ಬೇರೆ ಯಾರೂ ಅಲ್ಲ, ಟಾಲಿವುಡ್ ರಾಜಕುಮಾರ ಮಹೇಶ್ ಬಾಬು.  

2 /7

ಹೌದು.. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಭಾರತೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ದಾನಿ. ಭಾರತೀಯ ಚಿತ್ರರಂಗದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ನಟ ಮಹೇಶ್ ಬಾಬು ಅನೇಕ ಬಡವರಿಗೆ ಜೀವನ ನೀಡಿದ್ದಾರೆ. ಅಲ್ಲದೆ, ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ.   

3 /7

ಮಹೇಶ್ ಬಾಬು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಟಾಲಿವುಡ್ ಪ್ರಿನ್ಸ್ ಸಿನಿಮಾಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಹಾಗಾಗಿ ಪ್ರತಿ ವರ್ಷ ತಾವು ದುಡಿದ ಹಣದಲ್ಲಿ ಬಡವರಿಗಾಗಿ 25 ರಿಂದ 30 ಕೋಟಿ ರೂ. ದೇಣಿಗೆ ನೀಡುತ್ತಾರೆ..  

4 /7

ಮಹೇಶ್ ಬಾಬು ಅವರ ಆಸ್ತಿ 135 ಕೋಟಿ ರೂ. ಹೈದರಾಬಾದ್‌ನಲ್ಲಿ ಅವರು ಹೊಂದಿರುವ ಬಂಗಲೆ 30 ಕೋಟಿ ರೂ. ಜುಬಿಲಿ ಹಿಲ್ಸ್‌ನಲ್ಲಿರುವ ಈ ಮನೆ ಬಹುತೇಕ ಎಲ್ಲಾ ಹೈಟೆಕ್ ಸೌಕರ್ಯಗಳನ್ನು ಹೊಂದಿದೆ. ಮಹೇಶ್ ಬಾಬು ಬಳಿ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಇದೆ. 2013ರಲ್ಲಿ ತೆರೆಕಂಡ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಸೇತು’ ಚಿತ್ರೀಕರಣದ ವೇಳೆ ಅವರು ಈ ವ್ಯಾನ್ ಖರೀದಿಸಿದ್ದರು.  

5 /7

ಮಹೇಶ್ ಬಾಬು ಅನೇಕ ಎನ್‌ಜಿಒಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರೇ ರೇನ್‌ಬೋ ಮಕ್ಕಳ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಅಲ್ಲಿನ ಬಡ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ನೆರವಾಗುತ್ತಾರೆ. ಇದುವರೆಗೆ ಮಹೇಶ್ ಬಾಬು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.  

6 /7

ಇದಲ್ಲದೇ ತಮ್ಮ ರಾಜ್ಯದಲ್ಲಿ ಎರಡು ಗ್ರಾಮಗಳನ್ನು ದತ್ತು ಪಡೆದಿದ್ದಾರೆ. ರಸ್ತೆ, ವಿದ್ಯುತ್, ಶಾಲೆ, ಆರೋಗ್ಯ ಸೌಲಭ್ಯ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. 1979 ರಲ್ಲಿ ಬಾಲನಟನಾಗಿ ವೃತ್ತಿಜೀವನ ಪ್ರಾರಂಭಿಸಿದ ಮಹೇಶ್ ಬಾಬು ಒಂದು ದಶಕದವರೆಗೆ ಹಲವಾರು ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 1999 ರಲ್ಲಿ 24ನೇ ವಯಸ್ಸಿನಲ್ಲಿ ನಾಯಕ ನಟರಾದರು.  

7 /7

ಆರಂಭದಲ್ಲಿ ನಟ ಮಹೇಶ್ ಬಾಬು ಸರಣಿ ಹಿಟ್ ಚಿತ್ರಗಳನ್ನು ನೀಡಿದ್ದರು. 2007 ರಲ್ಲಿ ಮೂರು ವರ್ಷಗಳ ವಿರಾಮವನ್ನು ಪಡೆದರು. ಇದರ ನಂತರ 'ದೂಕೂಡು' ಮತ್ತು 'ಬಿಸಿನೆಸ್ ಮ್ಯಾನ್' ನಂತಹ ಹಿಟ್‌ಗಳೊಂದಿಗೆ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದರು.. ಇತ್ತೀಚಿನ ಬಿಡುಗಡೆಯಾದ 'ಮಹರ್ಷಿ' ಮತ್ತು 'ಸರ್ಕಾರಿ ವಾರಿ ಪಾಟ' ಹಿಟ್ ಆಗಿದ್ದವು. ಸಧ್ಯ ಮಹೇಶ್ ಬಾಬು ಅವರು ಖ್ಯಾತ ನಿರ್ದೇಶಕ ರಾಜಮೌಳಿ ಮುಂಬರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.