Tips For Natural Glow - ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದಾಕ್ಷಣ ನಮ್ಮ ಚರ್ಮವು ಮಸುಕಾಗಿ ಕಾಣಲು ಆರಂಭವಾಗುತ್ತದೆ. ಮೇಕ್ ಅಪ್ ಮೂಲಕ ನಿಮ್ಮ ಚರ್ಮದ ಸಮಸ್ಯೆಗಳನ್ನು ನೀವು ಸ್ವಲ್ಪ ಮಟ್ಟಿಗೆ ಮರೆಮಾಚಬಹುದು. ಆದರೆ ನೈಸರ್ಗಿಕ ಕಂತಿಗಾಗಿ (Natural Glow). ಜೀವನಶೈಲಿ (Lifestyle) ಮತ್ತು ಚರ್ಮದ ಆರೈಕೆ (Skin Care) ದಿನಚರಿಯನ್ನು ನಿಯಮಿತವಾಗಿ ಇಟ್ಟುಕೊಳ್ಳಬೇಕು.
Tips For Natural Glow - ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದಾಕ್ಷಣ ನಮ್ಮ ಚರ್ಮವು ಮಸುಕಾಗಿ ಕಾಣಲು ಆರಂಭವಾಗುತ್ತದೆ. ಮೇಕ್ ಅಪ್ ಮೂಲಕ ನಿಮ್ಮ ಚರ್ಮದ ಸಮಸ್ಯೆಗಳನ್ನು ನೀವು ಸ್ವಲ್ಪ ಮಟ್ಟಿಗೆ ಮರೆಮಾಚಬಹುದು. ಆದರೆ ನೈಸರ್ಗಿಕ ಕಂತಿಗಾಗಿ (Natural Glow). ಜೀವನಶೈಲಿ (Lifestyle) ಮತ್ತು ಚರ್ಮದ ಆರೈಕೆ (Skin Care) ದಿನಚರಿಯನ್ನು ನಿಯಮಿತವಾಗಿ ಇಟ್ಟುಕೊಳ್ಳಬೇಕು. ಅದರಂತೆ, ನಿಮ್ಮ ರಾತ್ರಿಯ ಅಭ್ಯಾಸಗಳು ಕೂಡ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಹಾಗಾದರೆ ಬನ್ನಿ ರಾತ್ರಿ ಮಲಗುವ ಮುನ್ನ ನಾವು ಅನುಸರಿಸಲೇ ಬೇಕಾದ ಕೆಲ ಸಲಹೆಗಳ (Sleeping Skin Care Tips) ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ -Vegetables For Eyes: ದುರ್ಬಲ ಕಣ್ಣುಗಳನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿರಲಿ ಈ ತರಕಾರಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ನೀರು ಕುಡಿದು ಮಲಗಿ - ಕೆಲವೊಮ್ಮೆ ಸಾಕಷ್ಟು ನಿದ್ರೆಯ ಬಳಿಕವೂ ಕೂಡ ಬೆಳಗ್ಗೆ ನಮ್ಮ ಮುಖವು ದಣಿದಂತೆ ಮತ್ತು ನಿರ್ಜಲೀಕರಣಗೊಂಡಂತೆ ಕಾಣುತ್ತದೆ, ಹೀಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಮ್ಮ ಚರ್ಮದ ಮೇಲೆ ನೈಸರ್ಗಿಕ ಇರಬೇಕು ಎಂದು ನಾವು ಬಯಸುತ್ತಿದ್ದರೆ, ರಾತ್ರಿಯಲ್ಲಿ ಬಹಳ ಚಿಕ್ಕ ಟ್ರಿಕ್ ಅನ್ನು ಪ್ರಯತ್ನಿಸಬೇಕು. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು 1 ಗ್ಲಾಸ್ ನೀರು ಕುಡಿಯಿರಿ.
2. ರಾತ್ರಿಯ ಊಟದಲ್ಲಿ ಗಜ್ಜರಿ ಸೇವಿಸಿ - ರಾತ್ರಿ ಕ್ಯಾರೆಟ್ ಸಲಾಡ್ ತಿನ್ನಿರಿ. ಇದು ವಿಟಮಿನ್ ಕೆ, ಸಿ, ಇ, ಎ ಮತ್ತು ಬಿ ಅನ್ನು ಹೊಂದಿರುತ್ತದೆ. ಇದರ ಸಹಾಯದಿಂದ ಚರ್ಮದ ಮೇಲೆ ಬರುವ ಸತ್ತ ಕೋಶಗಳನ್ನು ತೆಗೆದುಹಾಕಬಹುದು.
3. ಮುಖವನ್ನು ತೊಳೆದು ಮಲಗಿ - ನೀವು ಹಗಲಿನಲ್ಲಿ ಮುಖಕ್ಕೆ ಮೇಕ್ಅಪ್ ಮಾಡಿದರೂ ಅಥವಾ ಯಾವುದೇ ಕ್ರೀಮ್ ಹಚ್ಚಿದ್ದರೂ, ರಾತ್ರಿ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಮಲಗಿ.
4. ರಾತ್ರಿ ಮುಖಕ್ಕೆ ಹಸಿ ಹಾಲನ್ನು ಹಚ್ಚಿ ಮಲಗಿ - ಹಾಲು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ, ಲ್ಯಾಕ್ಟಿಕ್ ಆಸಿಡ್ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ, ಹೀಗಾಗಿ ರಾತ್ರಿಯಲ್ಲಿ ಮುಖಕ್ಕೆ ಹಸಿ ಹಾಲನ್ನು ಲೇಪಿಸಿ ಮಲಗಿಕೊಳ್ಳಿ. ಒಂದು ವೇಳೆ ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ಹಸಿ ಹಾಲಿಗೆ ಕೆಲವು ಹನಿ ಟೀ ಟ್ರೀ ಎಣ್ಣೆಯ ಹನಿಗಳನ್ನು ಬೆರೆಸಿ.
5. ಟೂಥ್ ಬ್ರಷ್ ನಿಂದ ತುಟಿಯ ಮೇಲಿನ ಒಣ ಚರ್ಮ ತೆಗೆದುಹಾಕಿ - ಹೊಳೆಯುವ ಚರ್ಮದ ಜೊತೆಗೆ, ತುಟಿಗಳ ಸೌಂದರ್ಯ ಕೂಡ ಬಹಳ ಮುಖ್ಯ, ಆದ್ದರಿಂದ ನೀವು ತುಟಿಗಳ ಒಣಗಿದ ಚರ್ಮವನ್ನು ಮೃದುವಾದ ಟೂತ್ ಬ್ರಶ್ ನಿಂದ ತೆಗೆದು ಮಲಗಬಹುದು, ಇದರಿಂದ ನಿಮ್ಮ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.