ಮೋದಿ ಸಂಪುಟದ ಮಹಿಳಾ ಸಚಿವರಿಗೆ ವಿತ್ತ ಸಚಿವರ ಮನೆಯಲ್ಲಿ ʼಹೈ ಟೀ-ಪಾರ್ಟಿʼ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟದ ಮಹಿಳಾ ಸದಸ್ಯರ ಹೈ-ಟೀ ಪಾರ್ಟಿಯನ್ನು ಆಯೋಜಿಸಿದ್ದಾರೆ.
 

1 /5

 ಈ ಅನೌಪಚಾರಿಕ ಸಭೆಯಲ್ಲಿ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ, ಸಾಧ್ವಿ ನಿರಂಜನ್ ಜ್ಯೋತಿ, ಅನುಪ್ರಿಯಾ ಪಟೇಲ್, ರೇಣುಕಾ ಸಿಂಗ್, ಅನ್ನಪೂರ್ಣ ದೇವಿ, ಪ್ರತಿಮಾ ಭೌಮಿಕ್, ಭಾರತಿ ಪವಾರ್, ಶೋಭಾ ಕರಂದ್ಲಾಜೆ, ದರ್ಶನ್ ಜರ್ದೋಶ್ ಉಪಸ್ಥಿತರಿದ್ದರು

2 /5

ಮಾಹಿತಿಯ ಪ್ರಕಾರ, ಕೋವಿಡ್ ಪ್ರೋಟೋಕಾಲ್ ಅನ್ನು ಗಮನದಲ್ಲಿಟ್ಟುಕೊಂಡು ಈ ಪಾರ್ಟಿಯನ್ನು ಆಯೋಜಿಸಲಾಗಿದೆ.

3 /5

ಮೋದಿ ಸಂಪುಟ ವಿಸ್ತರಣೆಯಲ್ಲಿ 11 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಇದರಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿದ್ದು, ಉಳಿದ 9 ಮಹಿಳೆಯರು ರಾಜ್ಯ ಸಚಿವರಾಗಿದ್ದಾರೆ.  

4 /5

ರಾಜ್ಯ ಸಚಿವರಾದ ರೇಣುಕಾ ಸಿಂಗ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಪ್ರಮಾಣ ವಚನಕ್ಕೆ ಗೈರು ಹಾಜರಾಗಿದ್ದರು. ಈ ಹೈ-ಟೀ ಸಭೆಯ ಮೂಲಕ ಎಲ್ಲಾ 11 ಮಹಿಳಾ ಮಂತ್ರಿಗಳು ಒಟ್ಟಿಗೆ ಸೇರಿದ್ದಾರೆ. .

5 /5

ಪ್ರಧಾನಿ ಮೋದಿಯವರ ಹೊಸ ಸಂಪುಟದ 78 ಸದಸ್ಯರ ಪೈಕಿ ಸುಮಾರು 36 ಸಚಿವರು ಹೊಸಬರು. ಹೊಸ ಕ್ಯಾಬಿನೆಟ್‌ನಲ್ಲಿ ಸುಮಾರು 41 ಸಚಿವರು ವಕೀಲರು, ವೈದ್ಯರು, ಎಂಜಿನಿಯರ್‌ಗಳು, ಆಡಳಿತ ಅಧಿಕಾರಿಗಳು ಮತ್ತು ಎಂಬಿಎ ಪದವಿ ಪಡೆದವರಿದ್ದಾರೆ.