ಸೀಕ್ರೆಟ್‌ ಆಗಿ ವಿವಾಹವಾದ ಟೀಂ ಇಂಡಿಯಾ ಆಟಗಾರ! ದಂಪತಿ ಸೂಪರ್‌ ಫೋಟೋ ವೈರಲ್‌

ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಮಾಡಿದ ಉನ್ಮುಕ್ತ್ ಚಾಂದ್ ಎಲ್ಲರಿಗೂ ಗೊತ್ತಿರುತ್ತಾರೆ. ಅವರು ತಮ್ಮ ಅದ್ಭುತ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ 2021 ರಲ್ಲಿ ಸಿಮ್ರಾನ್ ಖೋಸ್ಲಾ ಎಂಬವರನ್ನು ಸೀಕ್ರೆಟ್‌ ಆಗಿ ವಿವಾಹವಾದರು.  ಇದೀಹ ಅವರು ತಮ್ಮ ಪತ್ನಿ ಜೊತೆಗಿನ ಹಲವು ರೊಮ್ಯಾಂಟಿಕ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 /4

ಉನ್ಮುಕ್ತ್ ಚಾಂದ್ ಇತ್ತೀಚೆಗೆ ಸಿಮ್ರಾನ್ ಖೋಸ್ಲಾ ಅವರೊಂದಿಗಿನ ಕೆಲವು ರೋಮ್ಯಾಂಟಿಕ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಸಿಮ್ರಾನ್ ಖೋಸ್ಲಾ ಅವರು 9 ಸೆಪ್ಟೆಂಬರ್ 1993 ರಂದು ಜನಿಸಿದರು. ಆಕೆ ಉನ್ಮುಕ್ತ್ ಚಾಂದ್‌ಗಿಂತ ಕೇವಲ 5 ತಿಂಗಳು 14 ದಿನ ಚಿಕ್ಕವಳು.

2 /4

ಉನ್ಮುಕ್ತ್ ಚಾಂದ್ ಮತ್ತು ಸಿಮ್ರಾನ್ ಖೋಸ್ಲಾ ಅವರು 21 ನವೆಂಬರ್ 2021 ರಂದು ಸಪ್ತಪದಿ ತುಳಿದಿದ್ದಾರೆ. ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ.

3 /4

2012ರಲ್ಲಿ ಉನ್ಮುಕ್ತ್ ಚಾಂದ್ ನಾಯಕತ್ವದಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಉನ್ಮುಕ್ತ್ ಚಂದ್ ಅವರ ಪತ್ನಿಯ ಹೆಸರು ಸಿಮ್ರಾನ್ ಖೋಸ್ಲಾ. ಅಭಿಮಾನಿಗಳು ಅವರನ್ನು 'ಧಕಡ್ ಹುಡುಗಿ' ಎಂದೂ ಕರೆಯುತ್ತಾರೆ. ಸಿಮ್ರಾನ್ ಖೋಸ್ಲಾ ಅವರು ವೃತ್ತಿಯಲ್ಲಿ ಫಿಟ್ನೆಸ್ ಮತ್ತು ನ್ಯೂಟ್ರಿಷನ್ ತರಬೇತುದಾರರಾಗಿದ್ದಾರೆ. 

4 /4

ಸಿಮ್ರಾನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು Instagram ಮೂಲಕ ಇತರ ಜನರನ್ನು ಫಿಟ್ ಆಗಿರಲು ಪ್ರೇರೇಪಿಸುತ್ತಲೇ ಇರುತ್ತಾರೆ.