Onion For Hair Problems: ಈರುಳ್ಳಿ ಮತ್ತು ಅಕ್ಕಿಯನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
Onion For Hair Problems: ನೀವು ಸಹ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಬಿಳಿ ಕೂದಲು, ಕೂದಲುದುರುವಿಕೆ, ತಲೆಹೊಟ್ಟಿನ ಸಮಸ್ಯೆಗೆ ಈರುಳ್ಳಿ ಅತ್ಯುತ್ತಮ ಪರಿಹಾರವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೂದಲು ಉದುರುವಿಕೆ, ಡ್ಯಾಂಡ್ರಫ್, ಬಿಳಿ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಿ ಉದ್ದವಾದ ಕಪ್ಪು ಕಾಂತಿಯುತ ಕೂದಲಿಗಾಗಿ ಈರುಳ್ಳಿ ತುಂಬಾ ಲಾಭದಾಯಕವಾಗಿದೆ.
ನಿಮ್ಮ ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆ, ಡ್ಯಾಂಡ್ರಫ್, ಬೂದು ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಬೇಕಾಗುವ ಸಾಮಾಗ್ರಿಗಳೆಂದರೆ... * ಈರುಳ್ಳಿ- 2 * ಅಕ್ಕಿ - 1 ಚಮಚ * ಸಾಸಿವೆ ಎಣ್ಣೆ- 1 ಕಪ್ * ಮೆಂತ್ಯ ಕಾಳು- 1 ಸ್ಪೂನ್ * ಕಪ್ಪು ಎಳ್ಳು- 1 ಸ್ಪೂನ್ * ಲವಂಗ- 4-5
ಮೊದಲಿಗೆ ಎರಡು ಈರುಳ್ಳಿಯಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ, ಇದರಲ್ಲಿ ಒಂದು ಚಮಚ ಅಕ್ಕಿ ಹಾಕಿ ಜೊತೆಗೆ ಒಂದು ಕಪ್ ಸಾಸಿವೆ ಎಣ್ಣೆ ಬೆರೆಸಿ ಸಣ್ಣ ಉರಿಯಲ್ಲಿ ಕಾಯಿಸಿ. ಎಣ್ಣೆ ಸಣ್ಣ ಸಣ್ಣ ಕುದಿ ಬರುತ್ತಿದ್ದಂತೆ ಇದರಲ್ಲಿ 1 ಸ್ಪೂನ್ ಮೆಂತ್ಯ ಕಾಳು, 1 ಸ್ಪೂನ್ ಕಪ್ಪೆಳ್ಳು ಜೊತೆಗೆ 4-5 ಲವಂಗ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಕುದಿಸಿ.
ಎಣ್ಣೆ ತಣ್ಣಗಾದ ಬಳಿಕ ಅದನ್ನು ಶೋಧಿಸಿ ಕೂದಲಿಗೆ ಬಳಸಬಹುದು.
ನೀವು ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಸ್ನಾನ ಮಾಡುವ 2 ಗಂಟೆಗಳ ಮೊದಲು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಮಸಾಜ್ ಮಾಡಿ. ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ವಾರಕ್ಕೆರಡು ಬಾರಿ ಮನೆಯಲ್ಲಿ ತಯಾರಿಸಿದ ಈ ಎಣ್ಣೆ ಬಳಸುವುದರಿಂದ ಕೇವಲ ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ, ಕೂದಲುದುರುವಿಕೆ ಸಮಸ್ಯೆ ಹಾಗೂ ತಲೆಹೊಟ್ಟಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.