Viral News: ಸಾಲ ತೆಗೆದುಕೊಳ್ಳುವ ಮೂಲಕ ನಿಮ್ಮ ಸ್ವಂತ ವಿಮಾನವನ್ನು ಖರೀದಿಸಿ

ಕೆಲವು ಮಹತ್ವಾಕಾಂಕ್ಷೆಯ ಜನರು ವಿಮಾನದಲ್ಲಿ ಪ್ರಯಾಣಿಸುವ ಜೊತೆಗೆ ಸ್ವಂತ ವಿಮಾನವನ್ನು ಖರೀದಿಸುವ ಕನಸು ಕಾಣುತ್ತಾರೆ.

ವಿಮಾನದಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ ಕೆಲವು ಮಹತ್ವಾಕಾಂಕ್ಷೆಯ ಜನರು ವಿಮಾನದಲ್ಲಿ ಪ್ರಯಾಣಿಸುವ ಜೊತೆಗೆ ಸ್ವಂತ ವಿಮಾನ(Private Plane)ವನ್ನು ಖರೀದಿಸುವ ಕನಸು ಕಾಣುತ್ತಾರೆ. ಇದನ್ನು ಕನಸು ನನಸಾಗಿಸುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವೇನಲ್ಲ. ಇದಕ್ಕಾಗಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಹೌದು, ಸಾಲ ತೆಗೆದುಕೊಂಡು ನೀವು ಸ್ವಂತ ವಿಮಾನ(Private Jet)ವನ್ನು ಹೊಂದಬಹುದು. ಆ ಮೂಲಕ ಭರ್ಜರಿ ಬ್ಯುಸಿನೆಸ್ ಕೂಡ ನಡೆಸಬಹುದು. ಇದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಖಾಸಗಿ ವಿಮಾನವನ್ನು ಖರೀದಿಸುವ ಮೊದಲು ಮೊದಲು ನೀವು ಅವುಗಳ ಬೆಲೆಗಳನ್ನು ತಿಳಿದುಕೊಳ್ಳಬೇಕು. ವಿಮಾನದ ಕಂಪನಿ, ಗಾತ್ರ, ಆಸನ ಸಾಮರ್ಥ್ಯ, ಹೈಟೆಕ್ ವೈಶಿಷ್ಟ್ಯಗಳು, ಸೌಕರ್ಯಗಳು ಇತ್ಯಾದಿಗಳ ಆಧಾರದ ಮೇಲೆ ವಿಮಾನದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಬೋಯಿಂಗ್ ವಿಶ್ವದ ಅತಿದೊಡ್ಡ ವಿಮಾನ ತಯಾರಕ ಕಂಪನಿಯಾಗಿದೆ. ಈ ಅಮೆರಿಕನ್ ಕಂಪನಿಯು ಪ್ರಪಂಚದಾದ್ಯಂತ ವಿಮಾನಗಳನ್ನು ಪೂರೈಸುತ್ತದೆ.

2 /5

ಭಾರತದಲ್ಲಿ ಬಳಸಲಾಗುವ ಪ್ರಯಾಣಿಕ ವಿಮಾನಗಳ ಬಗ್ಗೆ ಹೇಳುವುದಾದರೆ, ಇಲ್ಲಿ ಹೆಚ್ಚಾಗಿ ಬೋಯಿಂಗ್ ವಿಮಾನಗಳನ್ನು ಬಳಸಲಾಗುತ್ತದೆ. ವಿಶಿಷ್ಟ ಮಾದರಿಯನ್ನು ಅವಲಂಬಿಸಿ ಅವುಗಳ ಬೆಲೆ ಸುಮಾರು 775 ಕೋಟಿ ರೂ.ಗಳಿಂದ 3.5 ಸಾವಿರ ಕೋಟಿ ರೂ.ಗಳವರೆಗೆ ಇರುತ್ತದೆ. ಅಂದರೆ ನಿಮ್ಮ ಸ್ವಂತ ವಿಮಾನವನ್ನು ಖರೀದಿಸಲು ನೀವು ಸಾವಿರ ಕೋಟಿ ಕ್ಲಬ್‌ಗೆ ಸೇರಿರಬೇಕು. ಆದರೆ ಅದೇ ನೀವು ಹೆಲಿಕಾಪ್ಟರ್ ಖರೀದಿಸಲು ಕನಿಷ್ಠ 10 ಕೋಟಿ ರೂ.ವನ್ನಾದರೂ ಖರ್ಚು ಮಾಡಬೇಕಾಗುತ್ತದೆ.

3 /5

Aerocel.com ವೆಬ್‌ಸೈಟ್‌ನ ಪ್ರಕಾರ, ವಿಮಾನದ ಬಾಳಿಕೆಯು ಅದರ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಸುಮಾರು 20 ರಿಂದ 36 ವರ್ಷಗಳವರೆಗೆ ವಿಮಾನಗಳನ್ನು ನೀವು ಹಾರಾಟ ನಡೆಸಬಹುದು. ಹೆಲಿಕಾಪ್ಟರ್ ನ ಸರಾಸರಿ ಬಾಳಿಕೆ 15 ರಿಂದ 20 ವರ್ಷಗಳಾಗಿರುತ್ತದೆ. ಗುಣಮಟ್ಟದ ವಿಮಾನ ಖರೀದಿಸಿದರೆ ನಿಮಗೆ ಹೆಚ್ಚಿನ ಲಾಭವಾಗುತ್ತದೆ.

4 /5

ಒಂದು ವೇಳೆ ನೀವು ಸಾಲ ಪಡೆದು ಖಾಸಗಿ ವಿಮಾನ ಅಥವಾ ಹೆಲಿಕಾಪ್ಟರ್‌ಗಳನ್ನು ಖರೀದಿಸಿದರೆ ಅವುಗಳನ್ನು ನಿಲುಗಡೆ ಮಾಡಲು ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ನೀವು ವಿಮಾನ ನಿಲ್ದಾಣಗಳಲ್ಲಿ ಸ್ಥಳವನ್ನು ಕಾಯ್ದಿರಿಸಬೇಕು ಮತ್ತು ಪಾರ್ಕಿಂಗ್ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ನಿಮ್ಮ ಖಾಸಗಿ ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಾದಾಗ ನೀವು ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಮಾಹಿತಿ ನೀಡಬೇಕು. ಇದಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿಯನ್ನು ನೀಡುತ್ತದೆ.

5 /5

ಖಾಸಗಿ ವಿಮಾನ ಅಥವಾ ಹೆಲಿಕಾಪ್ಟರ್ ಖರೀದಿಸಲು ನಿಮಗೆ ಹಣದ ಕೊರತೆಯಿದ್ದರೆ ಕಾರು-ಬೈಕ್, ಮನೆಯಂತೆ ಅವುಗಳನ್ನು ಖರೀದಿಸಲು ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಮಾಡಿ ಖಾಸಗಿ ಜೆಟ್ ಅಥವಾ ಹೆಲಿಕಾಪ್ಟರ್ ಖರೀದಿಸಿದ ಉದ್ಯಮಿಗಳು ದೇಶದಲ್ಲಿ ಅನೇಕರಿದ್ದಾರೆ.