ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ವಿರಾಟ್ ನೆನಪಿಸಿಕೊಂಡಿದ್ದು ಹೀಗೆ!

ವಿರುಷ್ಕಾ ವಿವಾಹದ ಬಳಿಕ ಬಂದ ವರದಿಗಳ ಪ್ರಕಾರ, ಅವರ ಮದುವೆಯಲ್ಲಿ ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

  • Dec 11, 2018, 16:56 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಡಿಸೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
 

1 /5

ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಡಿಸೆಂಬರ್ 11 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು(ಡಿಸೆಂಬರ್ 11) ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. 

2 /5

ವಿರಾಟ್ ಕೊಹ್ಲಿ ತನ್ನ ವಿವಾಹದ ಕೆಲವು ಹೊಸ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ನಂತರ ಬಂದ ವರದಿಗಳ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ಅವರ ಮದುವೆಯಲ್ಲಿ ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಅತಿಥಿಗಳಿಗಾಗಿ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಲಾಗಿದೆಯೆಂದು ವರದಿಯಾಗಿತ್ತು.

3 /5

ವಿರಾಟ್-ಅನುಷ್ಕಾ ಪಂಜಾಬಿ ಸಂಪ್ರದಾಯದಲ್ಲಿ ಮದುವೆಯಾದರು .46 ವರ್ಷ ವಯಸ್ಸಿನ ಪಂಜಾಬಿ ಬ್ರಾಹ್ಮಣ ಪುರೋಹಿತರ ನೇತೃತ್ವದಲ್ಲಿ ಈ ಧಾರ್ಮಿಕ ಸಮಾರಂಭ ನೆರವೇರಿತು. ಪಂಜಾಬ್ನ ಕಪುರ್ಥಾಲಾ ಜಿಲ್ಲೆಯ ಗ್ರಾಮದ ನಿವಾಸಿ ಪವನ್ ಕುಮಾರ್ ವಿರುಷ್ಕಾ ರನ್ನು ದಾಂಪತ್ಯ ಜೀವನದಲ್ಲಿ ಬಂಧಿಸಿದ ಪುರೋಹಿತರು.

4 /5

ಇಟಲಿಯಲ್ಲಿ, ಫ್ಲಾರೆನ್ಸ್ನಲ್ಲಿ, ಡಿಸೆಂಬರ್ 11, 2017 ರಂದು ನಡೆದ ವಿರುಷ್ಕಾ ವಿವಾಹದಲಿ ಈ ಇಬ್ಬರ ಕುಟುಂಬಸ್ಥರು ಮತ್ತು ವಿಶೇಷ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಬಳಿಕ ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ತಮ್ಮ ವಿವಾಹದ ಶುಭ ಸುದ್ದಿಯನ್ನು ಹಂಚಿಕೊಂಡರು. ವಿರಾಟ್ ಕೊಹ್ಲಿಯವರ ಈ ಟ್ವೀಟ್ ಅನ್ನು ಸಾಕಷ್ಟು ರೀಟ್ವೀಟ್ ಆಗಿದ್ದು, ಅವರ ಮದುವೆಯ ಪೋಟೋ ರೆಕಾರ್ಡ್ ನಿರ್ಮಿಸಿತ್ತು. 

5 /5

ವಿರಾಟ್ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಾಗ, ಒಂದು ವರ್ಷ ಕಳೆದದ್ದೇ ತಿಳಿಯಲಿಲ್ಲ. ನಿನ್ನೆಯಷ್ಟೇ ವಿವಾಹವಾದಂತಿದೆ. ವಾರ್ಷಿಕೋತ್ಸವದ ಶುಭಾಶಯಗಳು ನನ್ನ ನೆಚ್ಚಿನ ಸ್ನೇಹಿತೆ, ನನ್ನ ಸಂಗಾತಿ ಎಂದು ಬರೆದುಕೊಂಡಿದ್ದಾರೆ.