ಹೃದ್ರೋಗಿಗಳಿಗೆ ಯಾವ ಬಗೆಯ ಆಹಾರ ಕ್ರಮ ಒಳ್ಳೆಯದು?

Heart patients Food System: ಹೃದ್ರೋಗಿಗಳು ತಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಂತಿಂತಹ ಆಹಾರವನ್ನು ಸೇವಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಹೃದ್ರೋಗಿಗಳು ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ..

1 /5

ಹಣ್ಣು-ತರಕಾರಿಗಳ ಸೇವನೆಯನ್ನು ಹೆಚ್ಚಿಸಿ: ಸೊಪ್ಪು, ವಿಟಮಿಟ್‌ ಸಿ ಇರುವ ತರಕಾರಿಗಳು ಹೀಗೆ ಹಸಿರು ತರಕಾರಿಗಳು ಹಾಗೂ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿ ಹೃದ್ರೋಗದ ಅಪಾಯದಿಂದ ಪಾರಾಗಿ.   

2 /5

ಧಾನ್ಯಗಳು: ಹೃದ್ರೋಗಿಗಳ ಆಹಾರ ಕ್ರಮದಲ್ಲಿ ಓಟ್ಸ್, ಜೋಳ, ರಾಗಿ, ಕೆಂಪಕ್ಕಿಯನ್ನು ಬಳಸುವುದು ಅವಶ್ಯಕ. ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಬಿ ಕಂಡುಬರುತ್ತದೆ ಆದ್ದರಿಂದ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.   

3 /5

ಬೀನ್ಸ್: ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಬೀನ್ಸ್‌ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹ ಬೀನ್ಸ್‌ ಸಹಾಯ ಮಾಡುತ್ತವೆ.   

4 /5

ಮೀನು: ಮೀನು ಸೇವನೆ ಹೃದ್ರೋಗಿಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಮೀನನ್ನು ಪ್ರೈ ಮಾಡಿ ತಿನ್ನುವುದಕ್ಕಿಂತ ಬಾಯಿಲ್‌ ಮಾಡಿ ಸೇವಿಸಿ.   

5 /5

ಅಡುಗೆಗೆ ಉತ್ತಮ ಎಣ್ಣೆಯನ್ನು ಬಳಸಿ: ಹೃದ್ರೋಗಿಗಳು ತಮ್ಮ ಅಡುಗೆಯಲ್ಲಿ ಬಳಸುವ ಎಣ್ಣೆ ಬಗ್ಗೆಯೂ ಎಚ್ಚರ ವಹಿಸಬೇಕು. ಹೊರಗಡೆ ಆಹಾರವನ್ನು ಸೇವಿಸುವಾಗ ಎಣ್ಣೆಯಲ್ಲಿ ಕರಿದ ಆಹಾರದಿಂದ ದೂರವಿರಿ.