ವರ್ಷದಲ್ಲಿ ಮೂರು ತಿಂಗಳು ಕತ್ತಲಲ್ಲಿಯೇ ತುಂಬಿತ್ತು ನಗರ, ಪರಿಹಾರಕ್ಕಾಗಿ ಸೂರ್ಯನನ್ನೇ ಸೃಷ್ಟಿಸಿದ ಜನ

ಡೈಲಿ ಸ್ಟಾರ್ ನ್ಯೂಸ್ ಪ್ರಕಾರ, ಇಟಲಿಯ ಉತ್ತರ ಪ್ರದೇಶದ ವಿಗನೆಲ್ಲಾ ಗ್ರಾಮವು ಎಲ್ಲಾ ಕಡೆಗಳಲ್ಲಿ ಪರ್ವತಗಳು ಮತ್ತು ಕಣಿವೆಗಳಿಂದ ಆವೃತವಾಗಿದೆ

ನವದೆಹಲಿ : ಜಗತ್ತಿನಲ್ಲಿ ಒಂದು ಪುಟ್ಟ ನಗರ  ಇದೆ. ಅಲ್ಲಿ ಒಂದು ವರ್ಷದಲ್ಲಿ ಮೂರು ತಿಂಗಳು ಬರೀ ಕತ್ತಲೆ ಇರುತ್ತಿತ್ತು. ಈ ಕಾರಣದಿಂದಾಗಿ, ಅಲ್ಲಿನ ಜನರಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳಲಾರಂಭಿಸಿದವು. ಈ ಸಮಸ್ಯೆಗೆ ಈಗ ಈ ನಗರದ ಜನ ಪರಿಹಾರವನ್ನು ಕಂಡು ಕೊಂಡಿದ್ದಾರೆ. ಹೌದು ಸೂರ್ಯನ ಬೆಳಕಿನ ಕೊರತೆಯಿಂದ, ಇಡೀ ಗ್ರಾಮವು ಮೂರು ತಿಂಗಳು ಕತ್ತಲೆಯಲ್ಲಿ ವಾಸಿಸುತ್ತಿತ್ತು. ಈಗ ಈ ಗರದ ಜನರು ತಮ್ಮದೇ ಸೂರ್ಯನನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಡೈಲಿ ಸ್ಟಾರ್ ನ್ಯೂಸ್ ಪ್ರಕಾರ, ಇಟಲಿಯ ಉತ್ತರ ಪ್ರದೇಶದ ವಿಗನೆಲ್ಲಾ ಗ್ರಾಮವು ಎಲ್ಲಾ ಕಡೆಗಳಲ್ಲಿ ಪರ್ವತಗಳು ಮತ್ತು ಕಣಿವೆಗಳಿಂದ ಆವೃತವಾಗಿದೆ. ಚಳಿ ಇದ್ದಾಗಲೆಲ್ಲಾ, ಸೂರ್ಯನ ಕಿರಣಗಳು ಇಲ್ಲಿಗೆ ಬೀಳುವುದೇ ಇಲ್ಲ. ಈ ಕಾರಣದಿಂದಾಗಿ ನವೆಂಬರ್ ನಿಂದ ಫೆಬ್ರವರಿ ವರೆಗೆ ಸುಮಾರು ಮೂರು ಇಡೀ ನಗರವೇ ತಿಂಗಳು ಕತ್ತಲೆಯಾಗಿರುತ್ತದೆ. (ಚಿತ್ರ ಕೃಪೆ: ರಾಯಿಟರ್ಸ್)  

2 /5

ಈ ಸಮಯದಲ್ಲಿ, ಸೂರ್ಯನ ಕಿರಣಗಳು ಗ್ರಾಮವನ್ನು ತಲುಪದಿದ್ದ ಕಾರಣ, ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದರು. ಸೂರ್ಯನ ಬೆಳಕಿನ ಕೊರತೆಯಿಂದಾಗಿ, ಹಳ್ಳಿಯ ಜನರು ನಿದ್ರಾಹೀನತೆ, ಎನರ್ಜಿ ಲೆವೆಲ್ ಕಡಿಮೆಯಾಗುವುದು,  ಅಪರಾಧ ದರದಲ್ಲಿ ಹೆಚ್ಚಳ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. (ಫೋಟೊ ಕೃಪೆ: ಟ್ರೆಂಡ್ ಸ್ಟೆಗರ್ಡ್/ಗೌಸ್ಟಾಟೊಪೆನ್ ಬುಕಿಂಗ್)   

3 /5

ಈ ನಿಟ್ಟಿನಲ್ಲಿ, ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಡಾಕ್ಟರ್ ಕರಣ್ ರಾಜ್ ಒಂದು ಗ್ರಾಮವು ಸೂರ್ಯನ ಬೆಳಕು ಇಲ್ಲದೆ ಎಲ್ಲಾ ಸಮಸ್ಯೆಗಳೊಂದಿಗೆ ಹೇಗೆ ಹೋರಾಡುತ್ತಿತ್ತು ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಲು, ಹಳ್ಳಿಯ ಜನರು ತಮ್ಮದೇ ಆದ ಸೂರ್ಯನನ್ನು ಸೃಷ್ಟಿ ಮಾಡಿದ್ದಾರೆ. 

4 /5

ವಿಗೆನೆಲ್ಲಾ ಗ್ರಾಮವು 2006 ರಲ್ಲಿ 100,000 ಯುರೋಗಳಷ್ಟು ವೆಚ್ಚದಲ್ಲಿ 8 ಮೀಟರ್ ಉದ್ದ ಮತ್ತು 5 ಮೀಟರ್ ಅಗಲದ ಘನ ಉಕ್ಕಿನ ಹಾಳೆಗಳನ್ನು ನಿರ್ಮಿಸಿತು. ಇದನ್ನು ಮಾಡಿದ ನಂತರ ಸೂರ್ಯನ ಬೆಳಕು ನೇರವಾಗಿ ಈ ಉಕ್ಕಿನ ಹಾಳೆಯನ್ನು ತಲುಪಿ, ಈ ಮೂಲಕ ಗ್ರಾಮಕ್ಕೂ ಬೆಳಕನ್ನು ಬೀಳುತ್ತಿದೆ. (ಚಿತ್ರ ಕೃಪೆ: ರಾಯಿಟರ್ಸ್)

5 /5

ಈ ಒಂದು ಕಲ್ಪನೆಯು ಹಳ್ಳಿಯ ಜನರಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿತು. ಈ ಗ್ರಾಮವು ಈಗ ದಿನಕ್ಕೆ ಆರು ಗಂಟೆಗಳಷ್ಟು ಕಾಲ ಬೆಳಕು ಪಡೆಯುತ್ತದೆ.  (ಚಿತ್ರ ಕೃಪೆ: ರಾಯಿಟರ್ಸ್)