Winter skincare : ಪುರುಷರೆ ಚಳಿಗಾಲದ ನಿಮ್ಮ ತ್ವಚೆಯ ರಕ್ಷಣೆಗೆ ಅನುಸರಿಸಿ ಈ 5 ಸಲಹೆಗಳನ್ನು!

ನೀವು ಪುರುಷರಾಗಿದ್ದರೆ, ನಿಮ್ಮ ಮೃದುವಾದ ಮತ್ತು ದೃಢವಾದ ಚರ್ಮದ ಕಾಳಜಿ ವಹಿಸದಿದ್ದರೆ ತುರಿಕೆ ಉಂಟಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ನಿಮ್ಮ ಚರ್ಮದ ಬಗ್ಗೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಚರ್ಮವನ್ನು ಚಳಿಗೆ ಬಲಿಯಾಗದಂತೆ ರಕ್ಷಿಸಲು ಇಲ್ಲಿ 5 ಸುಲಭ ಮಾರ್ಗಗಳಿವೆ ಪರಿಶೀಲಿಸಿ.

Winter skincare : ಚಳಿಗಾಲ ಶುರುವಾಗಿದೆ, ಈ ವೇಳೆ ನಿಮ್ಮ ಚರ್ಮದ ರಕ್ಷಣೆ ತುಂಬಾ ಮುಖ್ಯವಾಗಿದೆ. ಚಳಿಗಾಲದಲ್ಲಿ ನಿಮ್ಮ ಚರ್ಮವು ಒಣಗಲು ಪ್ರಾರಂಭವಾಗುತ್ತದೆ. ಅಲ್ಲದೆ, ಅದರ ಕಾಳಜಿ ವಹಿಸದಿದ್ದರೆ. ಕೈ, ಕಾಲು, ಹಿಮ್ಮಡಿ ಬಿರುಕು ಬಿಡುತ್ತವೆ. ಮಹಿಳೆ ಮತ್ತು ಪುರುಷರು ಇಬ್ಬರು ತಮ್ಮ ಚರ್ಮ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ನೀವು ಪುರುಷರಾಗಿದ್ದರೆ, ನಿಮ್ಮ ಮೃದುವಾದ ಮತ್ತು ದೃಢವಾದ ಚರ್ಮದ ಕಾಳಜಿ ವಹಿಸದಿದ್ದರೆ ತುರಿಕೆ ಉಂಟಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ನಿಮ್ಮ ಚರ್ಮದ ಬಗ್ಗೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಚರ್ಮವನ್ನು ಚಳಿಗೆ ಬಲಿಯಾಗದಂತೆ ರಕ್ಷಿಸಲು ಇಲ್ಲಿ 5 ಸುಲಭ ಮಾರ್ಗಗಳಿವೆ ಪರಿಶೀಲಿಸಿ.

1 /5

ಮುಖ ಸುಕ್ಕು ಗಟ್ಟಿದ್ದಲ್ಲಿ ಸೇವ್ ಮಾಡಿ : ನಿಮ್ಮ ಮುಖದ ಕೂದಲಿನ ದಿಕ್ಕಿಗೆ ವಿರುದ್ಧವಾಗಿ ಶೇವಿಂಗ್ ಮಾಡುವುದರಿಂದ ಚರ್ಮ ಸುಕ್ಕುಗಟ್ಟುತ್ತದೆ. ಇದರಿಂದ ಕಡಿತ ಶುರುವಾಗುತ್ತದೆ. ಕೂದಲು ಬೆಳೆಯುತ್ತಿರುವ ದಿಕ್ಕಿನಲ್ಲಿ ಸೇವ್ ಮಾಡಿ, ಇದು ಚರ್ಮವನ್ನು ನಯವಾಗಿಡಲು ಸುರಕ್ಷಿತ ಮತ್ತು ಒಳ್ಳೆಯದು. ಅಲ್ಲದೆ, ಕ್ಷೌರದ ನಂತರ ಕೆನೆ ಆಧಾರಿತ ಉತ್ಪನ್ನಗಳನ್ನು ಬಳಸಿ. ಇಲ್ಲದಿದ್ದರೆ ನಿಮ ಚರ್ಮ ಒಣಗಿದಂತೆ ಕಾಣುತ್ತದೆ.

2 /5

ನಿಮ್ಮ ದೇಹಕ್ಕೆ ಬಳಸಿ ಲೋಷನ್ : ಚರ್ಮದ ರಕ್ಷಣೆಯ ವಿಷಯಕ್ಕೆ ಬಂದಾಗ, ದೇಹದ ಕೆಲವು ಭಾಗಗಳು ಆಗಾಗ್ಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ನಿಮ್ಮ ಮೊಣಕೈ, ಕುತ್ತಿಗೆ ಮತ್ತು ಮಂಡಿಚಿಪ್ಪುಗಳಿಗೆ ನಿಮ್ಮ ಮುಖದಷ್ಟೇ ಗಮನ ಹರಿಸಬೇಕು. ಕೆನೆ ಆಧಾರಿತ ಬಾಡಿ ಲೋಷನ್ ಅನ್ನು ಬಳಸುವ ಮೂಲಕ ದೈನಂದಿನ ಚರ್ಮದ ಪೋಷಣೆಯನ್ನು ನೀಡಲು ಮರೆಯಬೇಡಿ, ನೀವು ಇಡೀ ದಿನ ಸುರಕ್ಷವಾಗಿರುತ್ತದೆ.

3 /5

ಚಳಿಗಾಲದಲ್ಲಿಯೂ ಸನ್ ಸ್ಕ್ರೀನ್ ಬಳಸಿ : ಗರಿಷ್ಠ ಚಳಿಗಾಲದಲ್ಲಿ ಸೂರ್ಯನು ಆಗಾಗ್ಗೆ ಗೋಚರಿಸದಿದ್ದರೂ, ಅದು ಹೊರಹೊಮ್ಮುವ ಹಾನಿಕಾರಕ UVA ಮತ್ತು UVB ಕಿರಣಗಳು ಸಹ ಅಸ್ತಿತ್ವದಲ್ಲಿಲ್ಲರುತ್ತವೆ. ಹೀಗಾಗಿ ಚಳಿಗಾಲದಲ್ಲಿಯೂ ಸನ್ ಸ್ಕ್ರೀನ್ ಬಳಸಿ. ಸನ್‌ಸ್ಕ್ರೀನ್ ಇಲ್ಲದೆ ಹೊರಗೆ ಹೋಗಬೇಡಿ. ಶಿಯಾ ಬಟರ್ ಅಥವಾ ಜೊಜೊಬಾ ಆಯಿಲ್‌ನಂತಹ ಆರ್ಧ್ರಕ ಅಂಶಗಳನ್ನು ಹೊಂದಿರುವ ಉತ್ಪನ್ನಕ್ಕೆ ಆದ್ಯತೆ ನೀಡಿ.

4 /5

ದಪ್ಪ ಮಾಯಿಶ್ಚರೈಸರ್ ಅನ್ನು ಬಳಸಿ : ಕಡಿಮೆ ತಾಪಮಾನದಲ್ಲಿ ಮಾಯಿಶ್ಚರೈಸರ್‌ಗಳ ಅಗತ್ಯವಿರುತ್ತದೆ, ಇದು ಚರ್ಮವನ್ನು ಮೃದುವಾಗಿಸಲು ದಪ್ಪ ಮಾಯಿಶ್ಚರೈಸರ್ ಅನ್ನು ಬಳಸಿ.

5 /5

ಸಾಫ್ಟ್ ಫೇಸ್ ವಾಶ್ ಬಳಸಿ : ಚಳಿಗಾಲದಲ್ಲಿ ಸ್ಟ್ರಾಂಗ್ ಫೇಸ್ ವಾಶ್ ಬಳಸುವುದರಿಂದ ನಿಮ್ಮ ಚರ್ಮ ಒಣಗಬಹುದು. ಆದ್ದರಿಂದ, ನಿಮ್ಮ ತ್ವಚೆಯನ್ನು ಒಣಗದಂತೆ ಸ್ವಚ್ಛವಾಗಿಡಲು ಸಾಫ್ಟ್ ಫೇಸ್ ವಾಶ್ ಅನ್ನು ಬಳಸಿ, ಏಕೆಂದರೆ ಚಳಿಗಾಲದಲ್ಲಿ ಚರ್ಮವನ್ನು ಸ್ವಲ್ಪ ಮೃದುವಾಗಿಡಬೇಕು.