ನವದೆಹಲಿ: ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi) ಅವರಿಗೆ ಕರೋನಾವೈರಸ್ (Coronavirus) ಸೋಂಕು ತಗುಲಿದೆ. ಶಾಹಿದ್ ಅಫ್ರಿದಿ ಟ್ವೀಟ್ ಮಾಡುವ ಮೂಲಕ ಸ್ವತಃ ಈ ಮಾಹಿತಿ ನೀಡಿದ್ದಾರೆ.
I’ve been feeling unwell since Thursday; my body had been aching badly. I’ve been tested and unfortunately I’m covid positive. Need prayers for a speedy recovery, InshaAllah #COVID19 #pandemic #hopenotout #staysafe #stayhome
— Shahid Afridi (@SAfridiOfficial) June 13, 2020
ಗುರುವಾರದಿಂದ ನಾನು ಆರೋಗ್ಯವಾಗಿಲ್ಲ, ನನ್ನ ದೇಹವು ತುಂಬಾ ನೋವಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಆರೋಗ್ಯ ಪರೀಕ್ಷೆಯನ್ನು ಮಾಡಿಸಿದ್ದೇನೆ. ದುರದೃಷ್ಟವಶಾತ್ ನಾನು ಕೋವಿಡ್ -19 (Covid-19) ಪಾಸಿಟಿವ್ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ. ಇನ್ಶಾ-ಅಲ್ಲಾ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಇಡೀ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕರೋನಾವೈರಸ್ ಪಾಕಿಸ್ತಾನ (Pakistan) ದಲ್ಲಿಯೂ ಸಾಕಷ್ಟು ಹಾನಿ ಮಾಡಿದೆ. ಈ ದೇಶದಲ್ಲಿ ಒಂದು ಲಕ್ಷ 32 ಸಾವಿರಕ್ಕೂ ಹೆಚ್ಚು ಜನರು ಈ ಮಾರಕ ಸಾಂಕ್ರಾಮಿಕ ರೋಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಪಾಕಿಸ್ತಾನ ಸರ್ಕಾರದ ಲಾಕ್‌ಡೌನ್ ನಿರ್ಧಾರ ಹಸಿವಿನಿಂದ ಬಳಲುತ್ತಿರುವ ಜನರ ಸಾವಿಗೆ ಕಾರಣವಾಯಿತು. ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅಂತಹವರಿಗೆ ಸಹಾಯ ಮಾಡಲು ಮುಂದೆ ಬಂದರು.
ಅಫ್ರಿದಿ ತಮ್ಮ ಪ್ರತಿಷ್ಠಾನದ ಸಹಾಯದಿಂದ ಜನರಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದರು. ಈ ಸಮಯದಲ್ಲಿ ಅವರು ಕರಾಚಿಯ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಪಾಕಿಸ್ತಾನದಲ್ಲಿ ಜನರಿಗಾಗಿ ಪರಿಹಾರ ಕಾರ್ಯ ಕೈಗೊಂಡಿದ್ದ ಸಮಯದಲ್ಲಿ ಅವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಚಿಕಿತ್ಸೆ ಮುಂದುವರೆದಿದೆ, ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.