IND vs ENG 2nd Test:ಅಪರೂಪದ ಸಾಧನೆ ಮಾಡಿದ ಸ್ಟಾರ್ ಕ್ರಿಕೆಟರ್.. 72 ವರ್ಷ ಹಳೆಯ ದಾಖಲೆ ಬ್ರೇಕ್!

IND vs ENG 2nd Test: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅಪರೂಪದ ಸಾಧನೆ ಮಾಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಲಾಲ್ ಅಮರನಾಥ್ ಅವರ 72 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ. 

Written by - Chetana Devarmani | Last Updated : Feb 4, 2024, 06:34 AM IST
  • ಭಾರತ ಇಂಗ್ಲೆಂಡ್‌ ಎರಡನೇ ಟೆಸ್ಟ್ ಪಂದ್ಯ
  • ಜೇಮ್ಸ್ ಆಂಡರ್ಸನ್ ಅಪರೂಪದ ದಾಖಲೆ
  • 72 ವರ್ಷಗಳ ಹಳೆಯ ರೆಕಾರ್ಡ್‌ ಬ್ರೇಕ್‌
IND vs ENG 2nd Test:ಅಪರೂಪದ ಸಾಧನೆ ಮಾಡಿದ ಸ್ಟಾರ್ ಕ್ರಿಕೆಟರ್.. 72 ವರ್ಷ ಹಳೆಯ ದಾಖಲೆ ಬ್ರೇಕ್! title=

Anderson Breaks 72 years Old Record: ಇಂಗ್ಲೆಂಡ್‌ನ ಲೆಜೆಂಡರಿ ವೇಗಿ ಜೇಮ್ಸ್ ಆಂಡರ್ಸನ್  ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದರು.ಈ ಮೂಲಕ ಭಾರತದ ನೆಲದಲ್ಲಿ ಅಪರೂಪದ ಸಾಧನೆ ಮಾಡಿದರು. ಭಾರತದಲ್ಲಿ ಟೆಸ್ಟ್ ಪಂದ್ಯ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 

ಭಾರತದ ಮಾಜಿ ಕ್ರಿಕೆಟಿಗ ಲಾಲ್ ಅಮರನಾಥ್ ಅವರ 72 ವರ್ಷಗಳ ಹಳೆಯ ದಾಖಲೆಯನ್ನು ಆಂಡರ್ಸನ್ ಮುರಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವೈಜಾಗ್ ಟೆಸ್ಟ್ ಸಮಯದಲ್ಲಿ ಆಂಡರ್ಸನ್ 41 ವರ್ಷ ಮತ್ತು 187 ದಿನ ವಯಸ್ಸಿನವರಾಗಿದ್ದಾರೆ. 1952 ರಲ್ಲಿ, ಅಮರನಾಥ್ ತಮ್ಮ 41 ವರ್ಷ ಮತ್ತು 92 ದಿನ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದರು. ಅಮರ್ ನಾಥ್ ಅವರ ದಾಖಲೆಯನ್ನು ಆಂಡರ್ಸನ್ ಮುರಿದರು. 

ಇದನ್ನೂ ಓದಿ: ಗುಡಿಸಲಲ್ಲಿ ವಾಸ, ಪಾನಿಪೂರಿ ಮಾರಾಟ..! ರೋಚಕವಾಗಿದೆ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ʼಯಶಸ್ವಿʼ ಕಥೆ  

ವಿಶ್ವದ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಆ್ಯಂಡರ್ಸನ್ ಇನ್ನೂ ಏಳು ವಿಕೆಟ್ ಪಡೆದರೆ 700 ಕ್ಲಬ್‌ಗೆ ಸೇರುತ್ತಾರೆ. ಇದಕ್ಕೂ ಮುನ್ನ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ಮಾತ್ರ 700ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು. ವೈಜಾಗ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಂಡರ್ಸನ್ ಶುಭಮನ್ ಗಿಲ್ (34), ದ್ವಿಶತಕದ ಹೀರೋ ಯಶಸ್ವಿ ಜೈಸ್ವಾಲ್ (209) ಮತ್ತು ಅಶ್ವಿನ್ (20) ವಿಕೆಟ್ ಪಡೆದರು. 

ಎರಡನೇ ದಿನ ಆಟ ಮುಂದುವರಿಸಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 396 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದರು. ಆರಂಭಿಕ ಆಟಗಾರ ಜಾಕ್ ಕ್ರಾಲಿ (76) ಅರ್ಧಶತಕ ಬಾರಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಇದರೊಂದಿಗೆ ಟೀ ವಿರಾಮದ ವೇಳೆಗೆ ಆಂಗ್ಲರ ತಂಡ 4 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಆಂಗ್ಲರ ತಂಡವನ್ನು ಬುಮ್ರಾ ಹಾಗೂ ಕುಲದೀಪ್ ದುಸ್ವಪ್ನದಂತೆ ಕಾಡಿದರು. ಅವರ ನೆರವಿನಿಂದ ತಂಡ 55.5 ಓವರ್‌ಗಳಲ್ಲಿ 253 ರನ್‌ಗಳಿಗೆ ಆಲೌಟ್ ಆಯಿತು. ಬುಮ್ರಾ ಆರು ವಿಕೆಟ್ ಪಡೆದರು. ಈ ಮೂಲಕ ಟೀಂ ಇಂಡಿಯಾ 143 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: Viral Video: ಕ್ರಿಕೆಟ್ ಪಂದ್ಯದ ನಡುವೆಯೇ ಕ್ರಿಕೆಟ್ ಮೈದಾನಕ್ಕಿಳಿದ Komodo Dragon, ವಿಡಿಯೋ ನೋಡಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News