Watch: ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಅಬ್ಬರಕ್ಕೆ 106 ಮೀ ದೂರ ಹಾರಿದ ಚೆಂಡು! ಇದುವೇ ನೋಡಿ IPLನ ಅತಿ ಉದ್ದದ ಸಿಕ್ಸರ್

Longest Six in IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ 106 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Bhavishya Shetty | Last Updated : Mar 30, 2024, 02:36 PM IST
    • ವೆಂಕಟೇಶ್ ಅಯ್ಯರ್ 106 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದ್ದಾರೆ
    • ಇದು ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್ ಆಗಿದೆ
    • ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ದಾಖಲೆಯನ್ನೂ ವೆಂಕಟೇಶ್ ಅಯ್ಯರ್ ಮುರಿದಿದ್ದಾರೆ
Watch: ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಅಬ್ಬರಕ್ಕೆ 106 ಮೀ ದೂರ ಹಾರಿದ ಚೆಂಡು! ಇದುವೇ ನೋಡಿ IPLನ ಅತಿ ಉದ್ದದ ಸಿಕ್ಸರ್ title=
Venkatesh Iyer

Venkatesh Iyer Six: ಶುಕ್ರವಾರ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಇನ್ನು ಈ ಸಂದರ್ಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಬಾರಿಸಿದ ಸಿಕ್ಸರ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಅಂದಹಾಗೆ ಇದು ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್ ಆಗಿದೆ

ಇದನ್ನೂ ಓದಿ: Gold Price Today: ದಾಖಲೆ ಬರೆದ ಚಿನ್ನದ ಬೆಲೆ.. 10 ಗ್ರಾಂಗೆ 4 ಸಾವಿರ ರೂ. ಹೆಚ್ಚಳ! ಬಂಗಾರ ಕೊಳ್ಳೋದು ಕನಸಿನ ಮಾತಾಗುತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ 106 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ದಾಖಲೆಯನ್ನೂ ವೆಂಕಟೇಶ್ ಅಯ್ಯರ್ ಮುರಿದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ 103 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇದರ ನಂತರ ಆಂಡ್ರೆ ರಸೆಲ್ ಈ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 102 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಮಯಾಂಕ್ ದಾಗರ್ ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್‌’ನ ಒಂಬತ್ತನೇ ಓವರ್‌’ನಲ್ಲಿ ಬೌಲ್ ಮಾಡಲು ಆಗಮಿಸಿದ್ದರು. ಮಯಾಂಕ್ ದಾಗರ್ ಅವರ ಓವರ್‌’ನ ನಾಲ್ಕನೇ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಈ ಬಿಗ್ ಶಾಟ್ ಹೊಡೆದಿದ್ದಾರೆ. ಈ ಅಬ್ಬರಕ್ಕೆ ಚೆಂಡು ಚಿನ್ನಸ್ವಾಮಿ ಕ್ರೀಡಾಂಗಣವನ್ನು ದಾಟಿ, ಆಕಾಶದೆತ್ತರಕ್ಕೆ ಹಾರಿದೆ.

ಈ ಸಿಕ್ಸರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 30 ಎಸೆತಗಳಲ್ಲಿ 50 ರನ್ ಸಿಡಿಸಿದ್ದು, ಅದರಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌’ಗಳು ಸೇರಿವೆ.

ಐಪಿಎಲ್ 2024 ರಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌’ಮನ್‌

1. ವೆಂಕಟೇಶ್ ಅಯ್ಯರ್ - 106 ಮೀಟರ್ (ವಿರುದ್ಧ RCB)

2. ಇಶನ್ ಕಿಶನ್ - 103 ಮೀಟರ್‌ಗಳು (ವಿರುದ್ಧ ಎಸ್‌ಆರ್‌ಹೆಚ್)

3. ಆಂಡ್ರೆ ರಸೆಲ್ - 102 ಮೀಟರ್‌ಗಳು (ವಿರುದ್ಧ ಎಸ್‌ಆರ್‌ಹೆಚ್)

4. ಅಭಿಷೇಕ್ ಪೊರೆಲ್ - 99 ಮೀಟರ್ (ವಿರುದ್ಧ PBKS)

5. ಟ್ರಾವಿಸ್ ಹೆಡ್ - 95 ಮೀಟರ್ (ವಿರುದ್ಧ MI)

ಇದನ್ನೂ ಓದಿ: Daniel Balaji: ಯಶ್‌ ಅಭಿನಯದ 'ಕಿರಾತಕ' ಸಿನಿಮಾದ ವಿಲನ್‌ ಡೇನಿಯಲ್‌ ಬಾಲಾಜಿ ನಿಧನ!  

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News