IPL 2023 : 2023 ರಲ್ಲಿ ಸಿಎಸ್​​ಕೆ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಧೋನಿ : ಟೀಂ ಸಿಇಒ ಸ್ಪಷ್ಟನೆ

ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್ ಖಚಿತಪಡಿಸಿದ್ದಾರೆ.

Written by - Channabasava A Kashinakunti | Last Updated : Sep 4, 2022, 02:32 PM IST
  • ಮಹೇಂದ್ರ ಸಿಂಗ್ ಧೋನಿ
  • ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ
  • ಖಚಿತಪಡಿಸಿದ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್
IPL 2023 : 2023 ರಲ್ಲಿ ಸಿಎಸ್​​ಕೆ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಧೋನಿ : ಟೀಂ ಸಿಇಒ ಸ್ಪಷ್ಟನೆ title=

IPL 2023 : ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥ್ ಖಚಿತಪಡಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಐಪಿಎಲ್ 2022 ರ ಸೀಸನ್ ನಲ್ಲಿ, ಪಂದ್ಯಾವಳಿಯ ಪ್ರಾರಂಭಕ್ಕೆ ಎರಡು ದಿನಗಳ ಮೊದಲು ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಪ್ರಯೋಗಿಸಿತು.

ಇದನ್ನೂ ಓದಿ : IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್!

ಆದ್ರೆ, ಈ ಪ್ರಯೋಗ ವಿಫಲವಾಯಿತು ಮತ್ತು ಏಪ್ರಿಲ್ 30 ರಂದು ಪಂದ್ಯಾವಳಿಯ ಮಧ್ಯದಲ್ಲಿ ತಂಡವನ್ನು ಮುನ್ನಡೆಸಲು ಎಂಎಸ್ ಧೋನಿ ಅವರನ್ನು ಮರಳಿ ನೇಮಕ ಮಾಡಲಾಯಿತು.

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 41 ವರ್ಷ ವಯಸ್ಸಿನ ವಿಕೆಟ್‌ಕೀಪರ್ ಧೋನಿ ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿದ್ದಾರೆ. ನಾಲ್ಕು ಭಾರಿ ವಿಜಯದ ರುಚಿ ಕಂಡಿದ್ದಾರೆ. ಧೋನಿಯನ್ನು ಫ್ರಾಂಚೈಸಿಗೆ ಸಮಾನಾರ್ಥಕ ಎಂದು ಕರೆಯಲಾಗುತ್ತದೆ ಮತ್ತು ಸಿಎಸ್‌ಕೆ ಸಿಇಒ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಎಂಎಸ್ ಧೋನಿ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : Asia Cup 2022: ಪಾಕಿಸ್ತಾನ ವಿರುದ್ಧ ಗೆಲ್ಲಲು ರೋಹಿತ್ ಶರ್ಮಾ ಮಾಸ್ಟರ್ ಪ್ಲಾನ್ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News