Baroda vs Sikkim, SMAT 2024 : T 20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯಲಾಗಿದೆ. 20 ಓವರ್‌ಗಳಲ್ಲಿ 349 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿ ವಿಶ್ವದಾಖಲೆ ಸೃಷ್ಟಿಯಾಗಿದೆ. ಇದರೊಂದಿಗೆ ಟಿ 20 ಯಲ್ಲಿ 344 ರನ್ ಗಳಿಸಿ ಜಿಂಬಾಬ್ವೆ ಮುಡಿಗೇರಿಸಿಕೊಂಡಿದ್ದ ವಿಶ್ವದಾಖಲೆ ಬದಿಗಟ್ಟಿದಂತಾಗಿದೆ.
ಬರೋಡಾ ತಂಡ ಎಲ್ಲಾ ಹಳೆಯ ದಾಖಲೆಗಳನ್ನು ಮುರಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೃನಾಲ್ ಪಾಂಡ್ಯ ತಂಡವು 20 ಓವರ್‌ಗಳಲ್ಲಿ 349 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿದ ವಿಶ್ವದಾಖಲೆ ಮಾಡಿದೆ. ಸಿಕ್ಕಿಂ ವಿರುದ್ಧ ಅಬ್ಬರಿಸಿದ ಬರೋಡಾ ಬ್ಯಾಟ್ಸ್‌ಮನ್‌ಗಳು ಈ ಬೃಹತ್ ಸ್ಕೋರ್ ಅನ್ನು ಕಲೆ ಹಾಕಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಇದ್ದ 344 ರನ್ ಗಳ ದಾಖಲೆಯನ್ನು ಮುರಿಯಲಾಗಿದೆ.
ಇದನ್ನೂ ಓದಿ : ಮಗಳ ಕುರಿತು ಗುಡ್ ನ್ಯೂಸ್ ಹಂಚಿಕೊಂಡ ಸಚಿನ್ ತೆಂಡೂಲ್ಕರ್.. ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್..?!
ಭಾನು ಪನಿಯಾ ಸ್ಫೋಟಕ ಶತಕ :
ಗ್ರೂಪ್-ಬಿ ಯ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಬ್ಯಾಟಿಂಗ್ ಮಾಡಿದ ಬರೋಡಾ ನಿಗದಿತ 20 ಓವರ್‌ಗಳಲ್ಲಿ 349 ರನ್ ಗಳಿಸಿತು. ಇದರಲ್ಲಿ ಮೂರನೇ ಸ್ಥಾನದಲ್ಲಿ ಬಂದ ಭಾನು ಪನಿಯಾ ಆತ್ಯುತ್ತಮ ಪ್ರದರ್ಶನ ತೋರಿದರು. ಅವರು 134 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಭಾನು ಕೇವಲ 51 ಎಸೆತಗಳಲ್ಲಿ 15 ಸಿಕ್ಸರ್ ಹೊಡೆದು ಈ ರನ್ ಗಳಿಸಿದರು.
ಶಿವಾಲಿಕ್-ವಿಷ್ಣು ಜೊತೆಯಾಟ :
ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಿವಾಲಿಕ್ ಶರ್ಮಾ ಮತ್ತು ವಿಷ್ಣು ಸೋಲಂಕಿ ಕೂಡಾ ಬಿರುಸಿನ ಶೈಲಿಯಲ್ಲಿ ಅರ್ಧಶತಕಗಳನ್ನು ಗಳಿಸಿದರು. ಶಿವಾಲಿಕ್ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಅದೇ ಸಮಯದಲ್ಲಿ ವಿಷ್ಣು ಕೇವಲ 16 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳೂ ಇದ್ದವು. ಸಿಕ್ಕಿಂನ ರೋಷನ್ ಕುಮಾರ್ ನಾಲ್ಕು ಓವರ್‌ಗಳಲ್ಲಿ 2 ವಿಕೆಟ್ ಗೆ 81 ರನ್ ನೀಡುವ ಮೂಲಕ ದುಬಾರಿ ಎನಿಸಿಕೊಂಡರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
18ನೇ ಓವರ್‌ನಲ್ಲಿ 300ರ ಗಡಿ ದಾಟಿದ ತಂಡ :
42 ಎಸೆತಗಳಲ್ಲಿ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಭಾನು ಪನಿಯಾ ಅವರ ಶತಕದಿಂದಾಗಿ ಬರೋಡಾ ಕೇವಲ 17.2 ಓವರ್‌ಗಳಲ್ಲಿ 300 ರನ್‌ಗಳ ಗಡಿ ದಾಟಿತು. ಪವರ್‌ಪ್ಲೇನಲ್ಲಿಯೇ ತಂಡ 100 ರನ್ ಪೂರೈಸಿತ್ತು. ಇದರೊಂದಿಗೆ ಬರೋಡಾ ಐಪಿಎಲ್ ಹೊರತುಪಡಿಸಿ ಟಿ20 ಪವರ್‌ಪ್ಲೇನಲ್ಲಿ 100 ರನ್ ಗಳಿಸಿದ ಭಾರತದ ಮೊದಲ ದೇಶೀಯ ತಂಡವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ