Team India: ರೋಹಿತ್ ನಾಯಕತ್ವದಲ್ಲಿ ಅಪಾಯದಲ್ಲಿದೆ ಈ ಬಲಿಷ್ಠ ಆಟಗಾರನ ವೃತ್ತಿಜೀವನ!

ಭಾರತ vs ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾದ ಅಸಾಧಾರಣ ಬ್ಯಾಟ್ಸ್‌ಮನ್‌ಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಆಟಗಾರ ದೀರ್ಘಕಾಲದವರೆಗೆ ಟೀಂ ಇಂಡಿಯಾದ ಭಾಗವಾಗಿದ್ದರು. ಯಾರು ಆ ಆಟಗಾರ ಗೊತ್ತಾ..?

Written by - Puttaraj K Alur | Last Updated : Jun 25, 2022, 12:03 PM IST
  • ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಜುಲೈ 1ರಿಂದ ಪ್ರಾರಂಭವಾಗಲಿದೆ
  • ಕನ್ನಡಿಗ ಕೆ.ಎಲ್.ರಾಹುಲ್ ಸ್ಥಾನಕ್ಕೆ ಶುಭ್‌ಮನ್ ಗಿಲ್‌ಗೆ ಸಿಕ್ಕ ಅವಕಾಶ
  • ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್‍ಗೆ ಗೇಟ್‍ಪಾಸ್ ನೀಡಿದ ಆಯ್ಕೆಗಾರರು
Team India: ರೋಹಿತ್ ನಾಯಕತ್ವದಲ್ಲಿ ಅಪಾಯದಲ್ಲಿದೆ ಈ ಬಲಿಷ್ಠ ಆಟಗಾರನ ವೃತ್ತಿಜೀವನ!  title=
ಮಯಾಂಕ್ ಅಗರ್ವಾಲ್‍ಗೆ ಗೇಟ್‍ಪಾಸ್!

ನವದೆಹಲಿ: ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಜುಲೈ 1ರಿಂದ ಪ್ರಾರಂಭವಾಗಲಿದೆ. ಈ ಪ್ರವಾಸದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಭಾರತ ತಂಡದ ಜೊತೆಗಿರಲ್ಲ. ಅವರ ಸ್ಥಾನದಲ್ಲಿ ಒಬ್ಬ ಸ್ಟಾರ್ ಬ್ಯಾಟ್ಸ್‌ಮನ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದಿತ್ತು, ಆದರೆ ಆಯ್ಕೆಗಾರರು ಈ ಆಟಗಾರನಿಗೆ ಅವಕಾಶ ನೀಡಲಿಲ್ಲ. ಈ ಆಟಗಾರ ಕೆಲ ಕಾಲ ನಿರಂತರವಾಗಿ ತಂಡವನ್ನು ಸೇರಿಕೊಳ್ಳುತ್ತಿದ್ದರು.

ಈ ಆಟಗಾರನಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ

ಪ್ರವಾಸ ಆರಂಭಕ್ಕೂ ಮುನ್ನ ಕೆ.ಎಲ್.ರಾಹುಲ್ ಗಾಯಗೊಂಡಿದ್ದರು. ಟೀಂ ಇಂಡಿಯಾದಲ್ಲಿ ರಾಹುಲ್ ಬದಲಿಗೆ ಶುಭ್‌ಮನ್ ಗಿಲ್‌ಗೆ ಈಗ ಓಪನಿಂಗ್ ಅವಕಾಶ ಸಿಗಲಿದೆ. ಆಯ್ಕೆಗಾರರು ರಾಹುಲ್ ಬದಲಿಗೆ ಮಯಾಂಕ್ ಅಗರ್ವಾಲ್‌ಗೆ ತಂಡದಲ್ಲಿ ಅವಕಾಶ ನೀಡಬಹುದಿತ್ತು, ಆದರೆ ಆಯ್ಕೆದಾರರು ಅವರಿಗೆ ಅವಕಾಶ ನೀಡಲಿಲ್ಲ.

ಇದನ್ನೂ ಓದಿ: Team India : ಈ ಸ್ಫೋಟಕ ಬ್ಯಾಟ್ಸ್‌ಮನ್ ಗೆ ಟೀಂ ಇಂಡಿಯಾದಲ್ಲಿ ಮೊದಲ ಚಾನ್ಸ್!

ಕಳೆದ ಸರಣಿಯಲ್ಲಿ ತಂಡದ ಭಾಗವಾಗಿದ್ದರು

ಅಪಾಯಕಾರಿ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ಗೆ ಆಯ್ಕೆದಾರರು ಗೇಟ್‍ಪಾಸ್ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಆಡಿತ್ತು, ಆದರೆ ಈ ಸರಣಿಯಲ್ಲಿ ಮಾಯಕ್ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಕಳಪೆ ಪ್ರದರ್ಶನ ತೋರಿದ ಮಯಾಂಕ್ ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಭಾರತ ತಂಡದಿಂದ ಹೊರಗುಳಿದ ತಕ್ಷಣವೇ ಅವರ ವೃತ್ತಿಜೀವನದ ಮೇಲೆ ತೊಂದರೆಯ ಮೋಡಗಳು ಸುಳಿದಾಡುತ್ತಿವೆ. ಶ್ರೀಲಂಕಾ ವಿರುದ್ಧದ ಸರಣಿಯ 3 ಇನ್ನಿಂಗ್ಸ್‌ಗಳಲ್ಲಿ ಮಯಾಂಕ್ 19.66 ಸರಾಸರಿಯಲ್ಲಿ ಕೇವಲ 59 ರನ್ ಗಳಿಸಿದ್ದರು.

ಟೀಂ ಇಂಡಿಯಾ ಇದುವರೆಗಿನ ಅಂಕಿಅಂಶಗಳು

ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾ ಪರ ಆರಂಭಿಕರಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದಾರೆ. ಮಯಾಂಕ್ ಭಾರತ ಪರ ಇದುವರೆಗೆ ಒಟ್ಟು 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 41.33 ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ 5 ಅರ್ಧ ಶತಕ ಮತ್ತು 4 ಶತಕಗಳನ್ನು ಮಯಾಂಕ್ ಭಾರಿಸಿದ್ದಾರೆ.  

ಇದನ್ನೂ ಓದಿ: ಕ್ಲಾಸ್ ಗೆ ಚಕ್ಕರ್ ಹಾಕಿ ವಿರಾಟ್ ಕೊಹ್ಲಿ ನೋಡಲು ಬಂದ ಬಾಲಕ..!

ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಪ್ರಸಿದ್ಧ ಕೃಷ್ಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News