Team India : ಈ ಸ್ಫೋಟಕ ಬ್ಯಾಟ್ಸ್‌ಮನ್ ಗೆ ಟೀಂ ಇಂಡಿಯಾದಲ್ಲಿ ಮೊದಲ ಚಾನ್ಸ್!

ಈ ಪಂದ್ಯದಲ್ಲಿ 24ರ ಹರೆಯದ ಆಟಗಾರನೊಬ್ಬನ ಬಗ್ಗೆ ಎಲ್ಲೆಡೆ ಭರ್ಜರಿ ಚರ್ಚೆಯಾಗುತ್ತಿದೆ. ಈ ಆಟಗಾರ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ ನೀಡಬಹುದು ಎಂದು ಹೇಳಲಾಗುತ್ತಿದೆ.

Written by - Channabasava A Kashinakunti | Last Updated : Jun 24, 2022, 04:27 PM IST
  • ಕೆಟ್‌ನ ಅತಿದೊಡ್ಡ ಟೂರ್ನಿಯಾದ ರಣಜಿ ಟ್ರೋಫಿಯ ಫೈನಲ್ ಪಂದ್ಯ
  • ಈ ಪಂದ್ಯದಲ್ಲಿ 24ರ ಹರೆಯದ ಆಟಗಾರನೊಬ್ಬನ ಬಗ್ಗೆ ಎಲ್ಲೆಡೆ ಭರ್ಜರಿ ಚರ್ಚೆ
  • ಸರ್ಫರಾಜ್ ಖಾನ್ ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ ಅವಕಾಶ
Team India : ಈ ಸ್ಫೋಟಕ ಬ್ಯಾಟ್ಸ್‌ಮನ್ ಗೆ ಟೀಂ ಇಂಡಿಯಾದಲ್ಲಿ ಮೊದಲ ಚಾನ್ಸ್! title=

Team India : ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಅನೇಕ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಪಡೆದಿದ್ದರೆ. ಹಾಗೆ, ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟೂರ್ನಿಯಾದ ರಣಜಿ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ 24ರ ಹರೆಯದ ಆಟಗಾರನೊಬ್ಬನ ಬಗ್ಗೆ ಎಲ್ಲೆಡೆ ಭರ್ಜರಿ ಚರ್ಚೆಯಾಗುತ್ತಿದೆ. ಈ ಆಟಗಾರ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ ನೀಡಬಹುದು ಎಂದು ಹೇಳಲಾಗುತ್ತಿದೆ.

ಈ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ

ರಣಜಿ ಟ್ರೋಫಿಯಲ್ಲಿ ಅದ್ಭುತ ಆಟ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಬಹುದು. ಇತ್ತೀಚೆಗೆ ಸರ್ಫರಾಜ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಸೆಳೆದಿದ್ದಾರೆ. ವರದಿಯ ಪ್ರಕಾರ, ನವೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಸರ್ಫರಾಜ್ ಖಾನ್ ಭಾರತ ತಂಡಕ್ಕೆ ಆಯ್ಕೆಯಾಗಬಹುದು.

ಇದನ್ನೂ ಓದಿ : Team India : ರೋಹಿತ್ ಟೆನ್ಷನ್ ಹೆಚ್ಚಿಸಿದ ಈ ಮಾರಣಾಂತಿಕ ಬೌಲರ್!

ನಿರಂತರ ಪ್ರದರ್ಶನ ನೀಡುತ್ತಿರುವ ಈ ಬ್ಯಾಟ್ಸ್‌ಮನ್!

ಸರ್ಫರಾಜ್ ಖಾನ್ ದೇಶಿಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಈ ಋತುವಿನಲ್ಲಿ, ಅವರ ಬ್ಯಾಟ್‌ನಿಂದ ನಿರಂತರವಾಗಿ ರನ್‌ಗಳು ಹೊರಬರುತ್ತಿವೆ. ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ಅವರು ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯಬಹುದು. ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ, 'ಸರ್ಫರಾಜ್ ನನ್ನ ನಿರ್ಲಕ್ಷಿಸುವುದು ಅಸಾಧ್ಯ ಎಂದು ಅವರ ಪ್ರದರ್ಶನ, ಸಾಮರ್ಥ್ಯ ಹೇಳುತ್ತಿದೆ. ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿದಾಗ ಸರ್ಫರಾಜ್ ಕೂಡ ತಂಡದಲ್ಲಿರುತ್ತಾರೆ.

900 ಕ್ಕೂ ಹೆಚ್ಚು ರನ್ ಗಳಿಸಿದ 3ನೇ ಬ್ಯಾಟ್ಸ್‌ಮನ್!

ಸರ್ಫರಾಜ್ ಖಾನ್ ಈ ಬಾರಿಯ ರಣಜಿ ಟ್ರೋಫಿ ಋತುವಿನ 6 ಪಂದ್ಯಗಳಲ್ಲಿ 150 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 900 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರಣಜಿ ಟ್ರೋಫಿಯ ಇತಿಹಾಸದಲ್ಲಿ ಎರಡು ಸೀಸನ್‌ಗಳಲ್ಲಿ 900 ರನ್‌ಗಳ ಗಡಿ ದಾಟಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಫರಾಜ್ ಖಾನ್ ಅವರಿಗಿಂತ ಮೊದಲು ಈ ದಾಖಲೆ ಅಜಯ್ ಶರ್ಮಾ ಮತ್ತು ವಾಸಿಂ ಜಾಫರ್ ಹೆಸರಿನಲ್ಲಿದೆ.

ಇದನ್ನೂ ಓದಿ : IND vs ENG : ಕೊನೆಯ ಟೆಸ್ಟ್‌ಗೂ ಮುನ್ನ ವಿರಾಟ್‌ಗೆ ಕ್ಲಾಸ್ ತೆಗೆದುಕೊಂಡ ದ್ರಾವಿಡ್!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News