ನವದೆಹಲಿ: ವಿಶ್ವಕಪ್ ಟೂರ್ನಿ ಪ್ರಾರಂಭವಾಗಿದ್ದು, ಭಾರತ ಇದುವರೆಗೆ ಯಾವುದೇ ಒಂದು ಪಂದ್ಯವನ್ನು ಆಡಿಲ್ಲ ಆಗಲೇ ಆಟಗಾರರ ನಡುವೆ ಮಾತಿನ ಯುದ್ದ ಪ್ರಾರಂಭವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಆಟಗಾರ ಕಾಗಿಸೋ ರಬಾಡಾ ಭಾರತ ತಂಡದ ನಾಯಕ ಕೊಹ್ಲಿ ಕುರಿತಾಗಿ ಹೇಳಿರುವ ಹೇಳಿಕೆಯೇ ಸಾಕ್ಷಿ.
ಜೂನ್ 5 ರಂದು ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈಗ ರಬಾಡ ಕೊಹ್ಲಿ ನೀಡಿರುವ ಹೇಳಿಕೆಯಿಂದಾಗಿ ಈ ಪಂದ್ಯ ಇನ್ನು ಕಾವೇರುವ ಸಾಧ್ಯತೆ ಇದೆ. "ನಾನು ಈಗ ಗೇಮ್ ಪ್ಲಾನ್ ಬಗ್ಗೆ ಅದರಲ್ಲೂ ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸುತ್ತಿದ್ದೇನೆ. ಅವರು ಈ ಹಿಂದೆ ನನ್ನ ಎಸೆತವನ್ನು ಬೌಂಡರಿ ಕಳಿಸಿ ನಂತರ ಏನೋ ಉಸುರಿದರು ಇದಕ್ಕೆ ನಾನು ತಕ್ಷಣ ಪ್ರತಿಕ್ರಿಯಿಸಿದಾಗ ಅವರು ಕೋಪಗೊಂಡರು. ಹೀಗಾಗಿ ಅವರನ್ನು ಅರಿತುಕೊಳ್ಳುವುದೇ ಕಷ್ಟವಾಗಿದೆ.
" ಹೀಗೆ ಮಾಡುವುದರ ಮೂಲಕ ಅವರು ಮುಂದೆವರೆಯಲು ಪ್ರಯತ್ನಿಸುತ್ತಾರೆ. ಆದರೆ ಈ ನಡೆ ನನಗೆ ಅಪ್ರಬುದ್ಧರಂತೆ ಎನಿಸುತ್ತದೆ. ಅವರು ಉತ್ತಮ ಆಟಗಾರ, ಆದರೆ ನಿಂದನೆಗಳನ್ನು ಅವರು ಸಹಿಸುವುದಿಲ್ಲ " ಎಂದು ರಬಾಡಾ ಹೇಳಿದರು. ಈಗ ಕೊಹ್ಲಿ ಕುರಿತ ರಬಾಡಾ ಹೇಳಿಕೆ ಹಿನ್ನಲೆಯಲ್ಲಿ ಜೂನ್ 5 ರಂದು ನಡೆಯುವ ಪಂದ್ಯ ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.