ಕ್ರಿಕೆಟ್ ಆಯ್ಕೆ ಸಮಿತಿ ಸಾರಥ್ಯ ವಹಿಸಲು ಕುಂಬ್ಳೆ ಪರ ಸೆಹ್ವಾಗ್ ಬ್ಯಾಟಿಂಗ್

ಮುಂಬರುವ ದಿನಗಳಲ್ಲಿ  ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ನೇತೃತ್ವವನ್ನು ಕುಂಬ್ಳೆ ವಹಿಸಬೇಕೆಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

Updated: Aug 21, 2019 , 05:36 PM IST
ಕ್ರಿಕೆಟ್ ಆಯ್ಕೆ ಸಮಿತಿ ಸಾರಥ್ಯ ವಹಿಸಲು ಕುಂಬ್ಳೆ ಪರ ಸೆಹ್ವಾಗ್ ಬ್ಯಾಟಿಂಗ್

ನವದೆಹಲಿ: ಮುಂಬರುವ ದಿನಗಳಲ್ಲಿ  ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ನೇತೃತ್ವವನ್ನು ಕುಂಬ್ಳೆ ವಹಿಸಬೇಕೆಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್ ' ಅನಿಲ್ ಕುಂಬ್ಳೆ ನಾಯಕನಾಗಿದ್ದಾಗ ನನ್ನ ರೂಮಿಗೆ ಬಂದು ನೀನು ಹೋಗಿ ಆಡು, ಮುಂದಿನ ಎರಡು ಸರಣಿಯಲ್ಲಿ ಹೇಗೆ ಆಡುತ್ತಿಯೋ ಗೊತ್ತಿಲ್ಲ ಆದರೆ ನಿನ್ನನ್ನು ತಂಡದಿಂದ ಕೈ ಬಿಡುವುದಿಲ್ಲ ಎಂದು ಹೇಳುವ ಮೂಲಕ ನನ್ನ ಮೇಲೆ ವಿಶ್ವಾಸವನ್ನು ಹೊಂದಿದ್ದರು.ನನಗೆ ಅನಿಸುತ್ತೆ ಅವರು ರಾಷ್ಟ್ರೀಯ ಆಯ್ಕೆ ಸಮಿತಿ ನೇತೃತ್ವ ವಹಿಸಲು ಸೂಕ್ತ ವ್ಯಕ್ತಿ' ಎಂದು ಸೆಹ್ವಾಗ್ ಹೇಳಿದರು.

ಅನಿಲ್ ಕುಂಬ್ಳೆ  2016 ರಿಂದ 2017 ರ ವರೆಗೆ ಭಾರತದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅದಾದ ನಂತರ ಅವರು ವಿರಾಟ್ ಕೊಹ್ಲಿ ನಡುವಿನ ಶೀತಲ ಸಮರದಿಂದಾಗಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸದ್ಯ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ನೇತೃತ್ವವನ್ನು ಎಂಎಸ್ಕೆ ಪ್ರಸಾದ್ ಅವರು ವಹಿಸಿದ್ದಾರೆ.ಆದರೆ ಅವರ ಸಾಮರ್ಥ್ಯದ ಬಗ್ಗೆ ಇತ್ತಿಚಿಗೆ ಸುನಿಲ್ ಗವಾಸ್ಕರ್ ಅವರು ಟೀಕಿಸಿದ್ದರು.