ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಆರೋಪಿಗಳು ತಿಂಗಳುಗಳು ಕಳೆದ್ರೂ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ತಮಟೆ ಬಾರಿಸಿ ಆರೋಪಿಗಳ ಪತ್ತೆಗೆ ಸುಳಿವು ಸಿಕ್ಕರೆ ಸಿಐಡಿಗೆ ತಿಳಿಸುವಂತೆ ಮನವಿ ಮಾಡಿದೆ.
PSI ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಆರೋಪಿಗಳಾದ ಶಾಂತಿಬಾಯಿ ಹಾಗೂ ರವೀಂದ್ರನಿಗಾಗಿ CID ತಲಾಶ್ ನಡೆಸ್ತಿದೆ. ಶಾಂತಿಬಾಯಿ ಹಾಗೂ ಮೇಳಕುಂದಿಯ ಸಹೋದರ ರವೀಂದ್ರ CID ಕಣ್ತಪ್ಪಿಸಿ ಓಡಾಡುತ್ತಿದ್ದಾರೆ. ಕಳೆದ 25 ದಿನಗಳಿಂದ PSI ಅಭ್ಯರ್ಥಿ ಶಾಂತಿಬಾಯಿ ನಾಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ಶೋಧಕಾರ್ಯ ಚುರುಕುಗೊಳಿಸಿದ್ದಾರೆ..
ಸಿಎಂ ಪೋಸ್ಟ್ ಗೆ 2500 ಕೋಟಿ ಯತ್ನಾಳ್ ಹೇಳಿಕೆ ಹಿನ್ನೆಲೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 2000 ಕೋಟಿಗೆ ಸಿಎಂ ಪೋಸ್ಟು, 1000 ಕೋಟಿಗೆ ಮಂತ್ರಿ ಪೋಸ್ಟು, ಒಂದು ಕೋಟಿಗೆ ಯಾವ್ ಅಪಾಯಿಂಟ್ ಮೆಂಟು, 50 ಲಕ್ಷಕ್ಕೆ ಯಾವ ಅಪಾಯಿಂಟ್ ಮೆಂಟು ಅಂತಾ ಒಂದು ಪತ್ರಿಕೆಯವರು ಲಿಸ್ಟ್ ಹಾಕಿದ್ದಾರೆ. ತಾಕತ್ ಇದ್ರೆ ಅವರಿಗೆ ನೋಟೀಸ್ ಕೊಡ್ಲಿ ನೋಡೋಣಾ ಸರ್ಕಾರದವರು ಎಂದು ಡಿಕೆಶಿ ಹೇಳಿದ್ರು.
ಹಗಣದಲ್ಲಿ ಕಿಂಗ್ ಪಿನ್ ಇದ್ದಾರೆ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕ ಶಿವಕುಮಾರ್, ಕುಮಾರಸ್ವಾಮಿ ಹೇಳೋದು ಸತ್ಯ ಕಾಣ್ತದೆ, ಯಾಕೆಂದ್ರೆ ಕಿಂಗ್ ಪಿನ್ ಇರೋದು ಸತ್ಯನೇ. ನನಗೆ ಬಂದಿರೋ ಮಾಹಿತಿ ಪ್ರಕಾರ, ನಾನು ಬಹಳ ಡಿಟೇಲ್ ಆಗಿ ಎಕ್ಸಾಮಿನ್ ಮಾಡ್ತಿದ್ದೇನೆ ಕೆಲವು ಮಂತ್ರಿಗಳ ಕೈವಾಡ ಕೂಡಾ ಇದೆ ಎಂದು ಹೇಳಿದ್ದಾರೆ.
ಪಿಎಸ್ಐ ಅಕ್ರಮದಲ್ಲಿ ಬಿಜೆಪಿ ನಾಯಕರ ನೇರ ಕೈವಾಡವಿದೆ ಎಂದು ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ.ಪ್ರಕರಣ ಮುಚ್ಚಿಹಾಕಲು ನಿಷ್ಟಾವಂತ ಅಧಿಕಾರಿಯನ್ನ ಟಾರ್ಗೆಟ್ ಮಾಡಿದ್ರು.ಈ ಪ್ರಕರಣದಲ್ಲಿ ಸಾಕಷ್ಟು ಪೊಲೀಸರ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.