ಕಲಬುರಗಿ : ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ದಿವ್ಯಾ ಹಾಗರಗಿ ಅವರ ಬಂಧನ ಖಂಡಿತಾ ಆಗುತ್ತೆ. ಈಗಾಗಲೇ ಅವರ ಪತಿಯನ್ನು ಸಿಐಡಿಯವರು ಅರೆಸ್ಟ್ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನ್ಯಾಯಾಂಗ ತನಿಖೆಯಾಗಬೇಕು ಎನ್ನುವ ಕಾಂಗ್ರೆಸ್ ನಾಯಕರ ಬೇಡಿಕೆ ತಿರುಗೇಟು ನೀಡಿದ್ರು.
ಇದನ್ನೂ ಓದಿ : PSI Recruitment Scam: ಮುನ್ನಾಭಾಯಿ MBBS ಸ್ಟೈಲ್‍ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು
ನ್ಯಾಯಾಂಗ ತನಿಖೆ ಆಗಬೇಕು ಎನ್ನುವವರು ಇಷ್ಟು ದಿನ ಎಲ್ಲಿದ್ದರು? ಈ ಅಕ್ರಮ ಗುರುತಿಸಿದ್ದೇ ನಾವು. ನಾವೇ ಇದನ್ನ ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ. ನಾವು ಮುಕ್ತ ತನಿಖೆಗೆ ಒಪ್ಪಿಸಿದ್ದರಿಂದಲೇ ಸಿಐಡಿ ಮುಕ್ತವಾಗಿ ಶಾಲೆಗಳ ಮೇಲೆ ರೇಡ್ ಮಾಡಿದೆ. ಹಿಂದೆಯೂ ನೇಮಕಾತಿಯಲ್ಲಿ ಅಕ್ರಮಗಳು ನಡೆದಿದ್ದವು.
ಒಂದಾದ್ರೂ ತನಿಖೆಯಾಯ್ತಾ? ಯಾರನ್ನಾದ್ರೂ ಅರೆಸ್ಟ್ ಮಾಡಿದ್ದಾರಾ? ಮೊದಲ ಬಾರಿಗೆ ನಾವೇ ಇದನ್ನು ತನಿಖೆಗೆ ಒಪ್ಪಿಸಿದ್ದೇವೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದೆಂದು ನಾವು ತನಿಖೆ ಮಾಡುತ್ತಿದ್ದೇವೆ. ಯಾರೇ ತಪ್ಪಿತಸ್ಥರು ಇರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ನನ್ನ ಗನ್ ಮ್ಯಾನ್ ಅಲ್ಲ ಆತ, ಬಸವರಾಜ್ ಬೊಮ್ಮಾಯಿ ಕೊಟ್ಟ ಗನ್ ಮ್ಯಾನ್ ಎನ್ನುವ ಶಾಸಕ ಎಂ.ವೈ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ಎಂ.ವೈ.ಪಾಟೀಲ್ ಯಾರನ್ನ ಕೇಳಿದ್ದಾರೆ, ಅವರನ್ನ ಕೊಟ್ಟಿದ್ದೇವೆ. ಅವರ ಜೊತೆಗಿರುವ ಅವರ ಗನ್ ಮ್ಯಾನ್ ಬಗ್ಗೆ ಅವರಿಗೆ ಗೊತ್ತಿರಬೇಕು. ಏನ್ ನಡಿತಿದೆ ಎಲ್ಲಾ ಗೊತ್ತಿದ್ದೂ ಸುಮ್ಮನಿದ್ದಾರೆ. ಈಗ ನನಗೇನೂ ಗೊತ್ತಿಲ್ಲ ಅಂದ್ರೆ ಯಾರಾದ್ರೂ ನಂಬುವ ವಿಚಾರವಾ ಇದು ಎಂದು ಪ್ರಶ್ನಿಸಿದ್ರು.
ಇದನ್ನೂ ಓದಿ : PSI Recruitment Scam : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅರೆಸ್ಟ್!
ದಿಶಾ ಕಮಿಟಿ, ನರ್ಸಿಂಗ್ ಕೌನ್ಸೆಲಿಂಗ್ ಸದಸ್ಯತ್ವದಲ್ಲಿ ದಿವ್ಯಾ ಹಾಗರಗಿ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಎಲ್ಲವೂ ತೆಗೆದು ಹಾಕಲಾಗುವುದು ಎಂದು ಖಡಕ್ಕಾಗಿ ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸುತ್ತಿದ್ದಂತೆ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ, ಒಂದು ವಾರವಾದರೂ ವಿಚಾರಣೆಗೆ ಹಾಜರಾಗಿಲ್ಲ. ಮನೆ ಮೇಲೆ ದಾಳಿ ಮಾಡಿ ದಿವ್ಯಾ ಅವರ ಪತಿ ರಾಜೇಶನನ್ನು ಬಂಧಿಸಿದರೂ ಇಲ್ಲಿಯವರೆಗೆ ದಿವ್ಯಾ ಮಾತ್ರ ಪತ್ತೆಯಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.