ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು. ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದು ಬಿಜೆಪಿ ಮತಗಳ ಮೇಲೆ ಪರಿಣಾಮ ಬೀರಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Jagadish Shettar join congress : ಪಕ್ಷ ಮುಖ್ಯ ವ್ಯಕ್ತಿ ಅಲ್ಲ ಎಂಬ ಸಿದ್ಧಾಂತ ನಂಬಿ ಪಕ್ಷವನ್ನು ಬೆಳೆಸಿದವರು, ಆದರೆ ಇಂದು ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಅವರೆಲ್ಲಾ ವ್ಯವಸ್ಥಿತವಾಗಿ ಸಂಚು ರೂಪಿಸಿ ನನ್ನನ್ನು ಹೊರಗೆ ಹಾಕಿದ್ದಾರೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಟಿ.ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಭ್ಯರ್ಥಿ ಕೃಷ್ಣಮೂರ್ತಿ ಡಿ.ಕೆ. ಸಹೋದರರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಹಣ ಪಡೆದು ಧನಂಜಯ್ಯ ಅವರಿಗೆ ಟಿಕೆಟ್ ನೀಡಿದ್ದಾಗಿ ದೂರಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಸರ್ವೇ ಬರೀ ಬೋಗಸ್ ಎಂದು ಕಿಡಿಕಾರಿದ್ದಾರೆ.
ಲಕ್ಷಣ ಸವದಿ ಅವರನ್ನ ಚುನಾವಣೆಯಲ್ಲಿ ಸೋತಮೇಲೆ ಡಿಸಿಎಂ, ಕೋರ್ ಕಮಿಟಿ ಸ್ಥಾನ, ಹಾಗೂ ಎಂ ಎಲ್ ಸಿ ಸ್ಥಾನ ನೀಡಿದ್ವಿ. ಲಕ್ಷ್ಮಣ್ ಸವದಿ ಈ ಹಿಂದೆ ಹೇಗೆ ಸಚಿವರಾಗಿ ಮಾಡಿಡ್ವೊ ಅದೇ ರೀತಿ ಮಾಡಬಹುದಿತ್ತು. ಶೆಟ್ಟರ್ ಅವರನ್ನ ರಾಜಕೀಯ ನಿವೃತಿ ತಗೋಳಿ ಅಂತ ಎಂದೂ ಹೇಳಿಲ್ಲ. ರಾಜ್ಯಸಭೆಗೆ ಕಳಿಸುವ ಬಗ್ಗೆ ಚರ್ಚೆಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
43 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಇನ್ನು 15 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಆಗಬೇಕಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಸೇರಿದಂತೆ ಒಟ್ಟು 15 ಕ್ಷೇತ್ರಗಳಿಗೆ ನಾಲ್ಕನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಅಥಣಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ನಿನ್ನೆ ಸವದಿ ಟಿಕೆಟ್ ನೀಡದಿದ್ದಕ್ಕೆ ಬಿಜೆಪಿ ತೊರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇಂದು ಅವರನ್ನು ಅಥಣಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ಪಕ್ಷವು 43 ಅಭ್ಯರ್ಥಿಗಳನ್ನೊಳಗೊಂಡ ಮೂರನೇ ಪಟ್ಟಿಯನ್ನು ಇಂದು ರಿಲೀಸ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.