1945 ರಲ್ಲಿ ಬಿಡುಗಡೆಯಾದ 'ಬಡಿ ಮಾ' ಚಲನಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತದನಂತರ ತಮ್ಮ ಮಧುರ ಕಂಠದಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಅವರು ಹಿಂದಿಯ ಜೊತೆಗೆ ಇತರ ಭಾಷೆಗಳಲ್ಲೂ ಕೂಡ ಹಾಡುವ ಮೂಲಕ ಎಲ್ಲರ ಸೆಳೆಯುವಲ್ಲಿ ಯಶಸ್ವಿಯಾದರು.
ಸುಮಾರು ಎಂಟು ದಶಕಗಳ ವೃತ್ತಿಜೀವನದಲ್ಲಿ, ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿ ಎರಡು ಚಲನಚಿತ್ರಗೀತೆಗಳನ್ನು ಹಾಡಿದ್ದಾರೆ.ಇವೆರಡೂ ಹಾಡುಗಳು 1967 ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದವು.ಬೆಳ್ಳನ ಬೆಳಗಾಯಿತು ಹಾಡು ರಾಗ ಭೂಪಾಲಿಯಲ್ಲಿ ಹಾಡಿದ್ದರೆ ಮತ್ತು ಎಲ್ಲಾರೆ ಇರತೀರೋ, ಎಂದ ಬರ್ತೀರೋ ಎನ್ನುವ ಹಾಡು ಜಾನಪದ ಗೀತೆ ರೂಪದಲ್ಲಿತ್ತು.ಲತಾ ಮಂಗೇಶ್ಕರ್ ಅವರ ಸಹೋದರಿಯರಾದ ಉಷಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರು ಈ ಚಿತ್ರಕ್ಕಾಗಿ ತಲಾ ಒಂದು ಹಾಡನ್ನು ಹಾಡಿದ್ದಾರೆ.ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಎಂದಾಗ ಅವರು ಉಚಿತವಾಗಿ ಹಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.