Kalyani Priyadarshan : ʼಹೃದಯಂʼ ಮಲಯಾಳಂ ಸಿನಿಮಾದ ʼನಿತ್ಯʼ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಕಲ್ಯಾಣಿ ಪ್ರಿಯದರ್ಶನ್ ಮಲಯಾಳಂ ಸೇರಿದಂತೆ ತಮಿಳು, ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Alia Bhatt : ಭಾರತೀಯ ನಟಿ, ʼಸ್ಟುಡೆಂಟ್ ಆಫ್ ದಿ ಇಯರ್ʼ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದವರು. ಸಿದ್ದಾರ್ಥ ಮಲ್ಹೋತ್ರಾ ಮತ್ತು ವರುಣ್ ಧವನ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಫಿಲ್ಮ್ಫೇರ್ ಪ್ರಶಸ್ತಿಗಳು, ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Meera Jasmin : ಭಾರತೀಯ ನಟಿ, ಮಲಯಾಳಂನ ʼಸೂತ್ರಧಾರನ್ʼ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಸ್ತೂರಿಮಾನ್ ಮಲಯಾಳಂ ಚಿತ್ರದ ಮೂಲಕ ಯಶಸ್ಸನ್ನು ಕಂಡವರು. ಪುನಿತ್ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ, ಮಲಯಾಳಂ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರದಲ್ಲಿಯೂ ನಟಿಸಿದ್ದಾರೆ.
Vani Bhojan : ಭಾರತೀಯ ದೂರದರ್ಶನ ನಟಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಿ ʼಮೀಕು ಮಾಥ್ರೇಮ್ ಚೆಪ್ತಾʼ ಅವರ ಮೊದಲ ಚಿತ್ರ ಮತ್ತು ಅಶೋಕ ಸೆಲ್ವನ್ ಅವರೊಂದಿಗೆ ʼಓ ಮೈ ಕಡುವಲೆʼ ತಮಿಳು ಚೊಚ್ಚಲ ಚಿತ್ರವಾಗಿದೆ.
Nabha Natesh : ಶೃಂಗೇರಿಯ ಹುಡುಗಿ ನಭಾ ನಟೇಶ್ ಭಾರತೀಯ ನಟಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ʼವಜ್ರಕಾಯʼ ಸಿನಿಮಾದ ಮೂಲಕ 2015ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಭಾ ನಟೇಶ್ ಮುಂದೆ 2018ರಲ್ಲಿ ʼನನ್ನನ್ನು ದೋಚುಕುಂದುವಟೆʼ ಎಂಬ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Ashika Ranganath : ಭಾರತೀಯ ನಟಿ, ಕನ್ನಡ ಚಿತ್ರರಂಗದ ಪಟಾಕಿ ಪೋರಿ ಆಶಿಕಾ ರಂಗನಾಥ್ ಇವರು 2016ರಲ್ಲಿ ಕ್ರೇಜಿ ಬಾಯ್ ಮೂಲಕ ಪಾದಾರ್ಪಣೆ ಮಾಡಿದವರು. ರಾಂಬೊ 2 ದ ʼಚುಟುಚುಟು ಅಂತೈತಿʼ ಹಾಡಿನ ಮೂಲಕ ಖ್ಯಾತಿಯನ್ನು ಪಡೆದವರು. ರಾಜು ಕನ್ನಡ ಮೀಡಿಯಂ, ಗರುಡ, ತಾಯಿಗೇ ತಕ್ಕ ಮಗ, ಮುಗುಳುನಗೆ, ಮದಗಜ ಇನ್ನಿತರ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
Malavika Mohanan : ನಟ ಚಿಯಾನ್ ವಿಕ್ರಮ್ ನಟನೆಯ ಬಹುನಿರೀಕ್ಷಿತ ʼತಂಗಲಾನ್ʼ ನಟಿ ಮಾಳವಿಕಾ ಮೋಹನ್ ಅವರ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚೆಲುವೆಯ ಅಂದಕ್ಕೆ ಹಾರ್ಟ್, ಫೈರ್, ಲವ್ ಇಮೋಜಿ ಕಾಮೆಂಟ್ ಮಾಡುವ ತೋರಿಸುತ್ತಿದ್ದಾರೆ.
Vidya Balan : ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಅಪರೂಪದ ಪ್ರತಿಭೆ. ಈಗಲೂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ನಟಿ. ಡಿ-ಗ್ಲಾಮ್ ಪಾತ್ರದಿಂದ ಸಖತ್ ಬೋಲ್ಡ್ ಪಾತ್ರದವರೆಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ನಟಿ ವಿದ್ಯಾ ಬಾಲನ್. ಅಲ್ಲದೇ ಸ್ಟಾರ್ ನಟರ ಚಿತ್ರಗಳೇ ನೆಲಕಚ್ಚುತ್ತಿರುವಾಗ ಸಖತ್ ಅಪ್ಡೇಟ್ ಆಗಿರುವ ವಿದ್ಯಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಬಣ್ಣ ಹಚ್ಚಿ ಗೆಲ್ಲುತ್ತಿದ್ದಾರೆ.
Jhanvi Kapoor photoshoot: ಬಾಲಿವುಡ್ ನಟಿ ಜಾನ್ವಿ ಕಪೂರ್ ಫೋಟೋಶೂಟ್ಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿಯ ಬೋಲ್ಡ್ ಲುಕ್ ಜನ ಮೆಚ್ಚುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.