SBI Digital Banking: ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಬ್ಯಾಂಕಿಂಗ್ ಕೆಲಸಗಳು. ಈ ಮೊದಲು ಪ್ರತಿಯೊಂದು ಬ್ಯಾಂಕಿಂಗ್ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಹೋಗಬೇಕಿತ್ತು. ಆದರೆ, ಈಗ ಎಲ್ಲವನ್ನೂ ನೀವು ಕುಳಿತಲ್ಲಿಯೇ ಮಾಡಬಹುದು. ನೀವು ಸಹ ಎಸ್ಬಿಐ ಗ್ರಾಹಕರಾಗಿದ್ದರೆ, ನಿಮಗೆ ಯಾವೆಲ್ಲಾ ಡಿಜಿಟಲ್ ಸೇವೆಗಳು ಲಭ್ಯವಿವೆ ಎಂದು ತಿಳಿಯಿರಿ.
ನೀವು ಸುಲಭವಾಗಿ ಬ್ಯಾಂಕಿಂಗ್ ವಹಿವಾಟು ನಡೆಸಲು ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವು ನಿಮಗೆ ಅವಕಾಶ ನೀಡುತ್ತದೆ. ಬ್ಯಾಂಕಿನ ಈ ಸೇವೆಯೊಂದಿಗೆ, ನೀವು ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.