ದುಬಾರಿ ಫೋನ್ ಗಳ ಮೇಲೆ ಆಫರ್ ಗಳ ಸುರಿ ಮಳೆ ! ಈ ದಿನದಿಂದ ಆರಂಭ Amazon Great Indian Festival Sale

Amazon Great Indian Festival Sale:ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ವರ್ಷದ ಅತಿದೊಡ್ಡ  ಸೇಲ್ ಆಗಿರಲಿದೆ. ಈ ಸೇಲ್ ನಲ್ಲಿ ಕಂಪನಿಯು ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತದೆ.

Written by - Ranjitha R K | Last Updated : Sep 29, 2023, 01:21 PM IST
  • ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್
  • ಫೋನ್‌ಗಳಲ್ಲಿ 40% ವರೆಗೆ ರಿಯಾಯಿತಿ
  • ಲ್ಯಾಪ್ಟಾಪ್ ಮೇಲೆ ರಿಯಾಯಿತಿ
ದುಬಾರಿ ಫೋನ್ ಗಳ ಮೇಲೆ ಆಫರ್ ಗಳ ಸುರಿ ಮಳೆ ! ಈ ದಿನದಿಂದ ಆರಂಭ Amazon Great Indian Festival Sale title=

Amazon Great Indian Festival Sale : ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ತಮ್ಮ ವಾರ್ಷಿಕ ಮಾರಾಟದ ದಿನಾಂಕಗಳನ್ನು ದೃಢಪಡಿಸಿವೆ. ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಕೂಡಾ ಅದೇ ದಿನ ಪ್ರಾರಂಭವಾಗಲಿದೆ. ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ವರ್ಷದ ಅತಿದೊಡ್ಡ  ಸೇಲ್ ಆಗಿರಲಿದೆ. ಈ ಸೇಲ್ ನಲ್ಲಿ ಕಂಪನಿಯು ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ :
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 7 ರಿಂದ ಪ್ರಾರಂಭವಾಗುತ್ತದೆ. ಪ್ರೈಮ್ ಸದಸ್ಯರಿಗೆ ಇದು ಅಕ್ಟೋಬರ್ 7 ರ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ. ಈ ಸೇಲ್ ಕೊನೆಯ ದಿನ ಯಾವುದು ಎನ್ನುವುದನ್ನು ಕಂಪನಿ ಇನ್ನೂ ಕೂಡಾ ಘೋಷಿಸಿಲ್ಲ. ಈ ಸೇಲ್  ದೀಪಾವಳಿಯವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

ಇದನ್ನೂ ಓದಿ : ಬೆಂಗಳೂರಿಗೆ ಶೀಘ್ರದಲ್ಲೇ ಅತ್ಯಾಧುನಿಕ ಸೈಬರ್‌ಸ್ಪಿಯರ್ ಸೆಂಟರ್ ಫಾರ್ ಎಕ್ಸಲೆನ್ಸ್

ಫೋನ್‌ಗಳಲ್ಲಿ 40% ವರೆಗೆ ರಿಯಾಯಿತಿ : 
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್  ಸೇಲ್ ನಲ್ಲಿ ಕಂಪನಿಯು ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ವರೆಗೆ, ಫೈರ್ ಟಿವಿ, ಕಿಂಡಲ್ ಮತ್ತು ಅಲೆಕ್ಸಾ ಸಾಧನಗಳಲ್ಲಿ 55% ವರೆಗೆ ಮತ್ತು ಮನೆಯ ಅಡುಗೆಮನೆ ಮತ್ತು  ಔಟ್ ಡೋರ್ ವಸ್ತುಗಳ ಮೇಲೆ 70% ವರೆಗೆ ರಿಯಾಯಿತಿಯನ್ನು ನೀಡುತ್ತದೆ. .

ಲ್ಯಾಪ್ಟಾಪ್ ಮೇಲೆ ರಿಯಾಯಿತಿ : 
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಕಂಪನಿಯು ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳು, ಟಿವಿಗಳು ಮತ್ತು ಉಪಕರಣಗಳ ಮೇಲೆ 75% ವರೆಗೆ ಮತ್ತು ಆಟಿಕೆಗಳು, ಪುಸ್ತಕಗಳು ಮತ್ತು  ಗ್ರೂಮಿಂಗ್ ಪ್ರಾಡಕ್ಟ್ ಗಳ ಮೇಲೆ 80% ವರೆಗೆ ರಿಯಾಯಿತಿಯನ್ನು ನೀಡುತ್ತದೆ.

ಇದನ್ನೂ ಓದಿ : ಈ ದಿನಾಂಕದಿಂದ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆಯನ್ನು ಕೊನೆಗೊಳಿಸಲಿದೆ YouTube

ಅಮೆಜಾನ್ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಜೊತೆ ಪಾಲುದಾರಿಕೆ ಹೊಂದಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ, SBI ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು ಮತ್ತು EMI ಗಳ ಮೇಲೆ 10% ತ್ವರಿತ ರಿಯಾಯಿತಿ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News