ನವದೆಹಲಿ: ಈ ದಿನಗಳಲ್ಲಿ ಹೆಚ್ಚಿನ ಚಾಟ್‌ಗಳು ವಾಟ್ಸಾಪ್‌ನಲ್ಲಿ ನಡೆಯುತ್ತಿವೆ. ವೈಯಕ್ತಿಕದಿಂದ ಸಾಮಾಜಿಕ ಮತ್ತು ಅಧಿಕೃತ ಚಾಟ್‌ಗಳವರೆಗೆ ಈಗ ಎಲ್ಲವೂ ವಾಟ್ಸಾಪ್‌ನಲ್ಲಿಯೇ ನಡೆಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಜನರು ಹೆಚ್ಚಾಗಿ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ಅಳಿಸುತ್ತಾರೆ. ಹಲವು ಬಾರಿ ಏನೋ ಮಾಡಲು ಹೋಗಿ ತುಂಬಾ ಅಗತ್ಯವಾದ ಸಂದೇಶಗಳು ಡಿಲೀಟ್ ಆಗಿ ಬಿಡುತ್ತವೆ. ನಿಮ್ಮ ವಾಟ್ಸಾಪ್ (Whatsapp) ಚಾಟ್‌ನಲ್ಲಿಯೂ ಸಹ ಹಲವು ಬಾರಿ ಬಹಳ ಅಗತ್ಯವಿರುವ ಸಂದೇಶಗಳು ಡಿಲೀಟ್ ಆಗಿರಬಹುದು. ಸಂದೇಶವನ್ನು ಡಿಲೀಟ್ ಮಾಡಿದ ಬಳಿಕ ಅಯ್ಯೋ! ಇದು ತುಂಬಾ ಇಂಪಾರ್ಟೆಂಟ್ ಇತ್ತು. ಇದು ಡಿಲೀಟ್ ಆಗಬಾರದಿತ್ತು ಎಂಬ ಆತಂಕ ಸಹಜವಾಗಿಯೇ ಆಗುತ್ತದೆ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ಈಗ ನೀವು ವಾಟ್ಸಾಪ್‌ನಲ್ಲಿ ಅಳಿಸಿದ ಸಂದೇಶವನ್ನು ತುಂಬಾ ಸುಲಭವಾಗಿ ಓದಬಹುದು. ಅದು ಹೇಗೆ ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

Whatsapp: ಹೊಸ ನಿಯಮಗಳನ್ನು ಸ್ವೀಕರಿಸಿ, ಇಲ್ಲದಿದ್ದರೆ ಅಕೌಂಟ್ ಡಿಲೀಟ್ ಮಾಡಿ!


ನಿಮ್ಮ ವಾಟ್ಸಾಪ್ ಚಾಟ್‌ನಲ್ಲಿ ನೀವು ಸಂದೇಶವನ್ನು ಅಳಿಸಿದಾಗ This message was deleted ಎಂಬ ಅಧಿಸೂಚನೆ ಬರುತ್ತದೆ. ಈ ಸಂದೇಶವನ್ನು ನೋಡಿದಾಗ ಮನಸ್ಸಿನಲ್ಲಿ ಇದರ ಬಗೆಗಿನ ಆಸಕ್ತಿ ಎಚ್ಚರಗೊಳ್ಳುತ್ತದೆ. ಜೊತೆಗೆ ಇದು ಬಹಳ ಮುಖ್ಯವಾದ ಸಂದೇಶ. ಇದು ಡಿಲೀಟ್ ಆಗಬಾರದಿತ್ತು ಎಂದೆನಿಸುತ್ತದೆ. ಆದರೆ ಲಕ್ಷಾಂತರ ಪ್ರಯತ್ನಗಳ ಹೊರತಾಗಿಯೂ ನಿಮಗೆ ಆ ಸಂದೇಶವನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈಗ ಚಿಂತೆ ಮಾಡುವ ಅಗತ್ಯವಿಲ್ಲ. ನೀವು ಸಂದೇಶವನ್ನು ಓದಬಹುದಾದ ತಂತ್ರಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.


ವಾಟ್ಸಾಪ್ ಮೂಲಕ ಚಿನ್ನವನ್ನು ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆಂದು ತಿಳಿಯಿರಿ


ವಾಟ್ಸಾಪ್‌ನಲ್ಲಿ ಅಳಿಸಿದ ಸಂದೇಶವನ್ನು ಓದಲು ಈ ವಿಧಾನವನ್ನು ಅನುಸರಿಸಿ:
- Google Play Store ನಿಂದ WhatsRemoved + App ಡೌನ್‌ಲೋಡ್ ಮಾಡಿ
- ಆ್ಯಪ್ ತೆರೆದ ನಂತರ, ನಿಮ್ಮನ್ನು ಅನುಮತಿ ಕೇಳಲಾಗುತ್ತದೆ.
- ಈಗ ವಾಟ್ಸಾಪ್ ಪ್ರವೇಶಿಸಲು ಅನುಮತಿಯನ್ನು ಆರಿಸಿ
- ಬಳಿಕ ವಾಟ್ಸಾಪ್‌ನಲ್ಲಿ ಸಂದೇಶವನ್ನು ಅಳಿಸಿದಾಗ ನೀವು ಅದನ್ನು ಇಲ್ಲಿ ಓದಬಹುದು
- ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಅಪ್ಲಿಕೇಶನ್ ಲಭ್ಯವಿದೆ ಎಂಬುದನ್ನು ನೆನಪಿನಲ್ಲಿಡಿ.