ಬೆಂಗಳೂರು: ನೀವು ಕೂಡ ವಾಟ್ಸಾಪ್ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ವಾಟ್ಸಾಪ್ ತನ್ನ ಸೇವಾ ನಿಯಮಗಳನ್ನು ಬದಲಾಯಿಸಲಿದೆ. ಕಂಪನಿಯ ಪ್ರಕಾರ, ಯಾವುದೇ ಬಳಕೆದಾರರು ಈ ಷರತ್ತುಗಳನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಅಪ್ಲಿಕೇಶನ್ನ ಹೊಸ ಸೇವಾ ನಿಯಮಗಳನ್ನು ನೀವು ಸಂಪೂರ್ಣವಾಗಿ ಸ್ವೀಕರಿಸಬೇಕಾಗುತ್ತದೆ. ಹೊಸ ಸೇವಾ ನಿಯಮಗಳು 20 ಫೆಬ್ರವರಿ 2021 ರಿಂದ ಜಾರಿಗೆ ಬರುತ್ತಿವೆ. ಅದರ ಪ್ರಕಾರ ನೀವು ವಾಟ್ಸಾಪ್ನ ಸೇವಾ ನಿಯಮಗಳನ್ನು ಅಂಗೀಕರಿಸದಿದ್ದರೆ, ನಿಮ್ಮ ವಾಟ್ಸಾಪ್ (Whatsapp) ಖಾತೆಯನ್ನು ನೀವು ಡಿಲೀಟ್ ಮಾಡಬಹುದು. ಅದಾಗ್ಯೂ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸ್ಕ್ರೀನ್ಶಾಟ್ ಹಂಚಿಕೊಂಡ WABetaInfo:
ವಾಟ್ಸಾಪ್ನ ಹೊಸ ವೈಶಿಷ್ಟ್ಯಗಳು ಮತ್ತು ನವೀಕರಣಗಳನ್ನು ಪತ್ತೆಹಚ್ಚುವ ಸೈಟ್ WABetaInfo, ಟ್ವಿಟ್ಟರ್ನಲ್ಲಿ ವಾಟ್ಸಾಪ್ನ ಹೊಸ ನಿಯಮಗಳ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದೆ. ಸ್ಕ್ರೀನ್ಶಾಟ್ನ ಪ್ರಕಾರ ನಮ್ಮ ಬಳಕೆದಾರರು ನಮ್ಮ ಷರತ್ತುಗಳನ್ನು ಅಂಗೀಕರಿಸದಿದ್ದರೆ ಅವರು ತಮ್ಮ ವಾಟ್ಸಾಪ್ ಖಾತೆಯನ್ನು ಡಿಲೀಟ್ ಮಾಡಬಹುದು ಎಂದು ಬರೆಯಲಾಗಿದೆ.
ಆನ್ಲೈನ್ ಶಾಪಿಂಗ್ ಸೇರಿದಂತೆ ಇತ್ತೀಚೆಗೆ 5 ಉತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ WhatsApp
📄 WhatsApp is going to update their Terms of Service in 2021.
WhatsApp will announce their updated Terms of Service using a particular in-app announcement banner, on iOS and Android!https://t.co/A75i5hp7Wk
— WABetaInfo (@WABetaInfo) December 2, 2020
ಫೆಬ್ರವರಿ 8 ರಿಂದ ಹೊಸ ಷರತ್ತುಗಳು ಅನ್ವಯ:
ವಾಟ್ಸಾಪ್ ವಕ್ತಾರರು ಸಹ ಹೊಸ ಷರತ್ತುಗಳ ಬಗ್ಗೆ ದೃಢಪಡಿಸಿದ್ದಾರೆ ಮತ್ತು ವಾಟ್ಸಾಪ್ ಅನ್ನು ಬಳಸಲು ಅದರ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಫೆಬ್ರವರಿ 8 ರಿಂದ ಹೊಸ ಸೇವಾ ಪರಿಸ್ಥಿತಿಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಆದರೂ ಇದರಲ್ಲಿ ಬದಲಾವಣೆಯ ಸಾಧ್ಯತೆಯೂ ಇದೆ ಎನ್ನಲಾಗಿದೆ.
WhatsApp OTP ಹಗರಣ ಎಂದರೇನು? ಅದನ್ನು ಹೇಗೆ ತಪ್ಪಿಸಬೇಕು ಎಂದು ತಿಳಿಯಿರಿ
ಫೇಸ್ಬುಕ್ ವ್ಯವಹಾರಕ್ಕಾಗಿ ಚಾಟ್ಗಳನ್ನು ಬಳಸುತ್ತದೆ:
ವಾಟ್ಸಾಪ್ನ ಹೊಸ ನಿಯಮಗಳು ಹೊಸ ವರ್ಷದಲ್ಲಿ ಫೇಸ್ಬುಕ್ (Facebook) ಒಡೆತನದ ಕಂಪನಿ ವಾಟ್ಸಾಪ್ ಬಳಕೆದಾರರ ಡೇಟಾವನ್ನು ಹೇಗೆ ಬಳಸುವುದು ಎಂದು ಉಲ್ಲೇಖಿಸಿದೆ ಎಂದು ವರದಿ ಹೇಳಿದೆ. ವ್ಯವಹಾರಕ್ಕಾಗಿ ನಿಮ್ಮ ಚಾಟ್ ಅನ್ನು ಫೇಸ್ಬುಕ್ ಹೇಗೆ ಸಂಗ್ರಹಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದನ್ನು ಇದು ವಿವರಿಸುತ್ತದೆ.