ಆ ಶಾಲೆಯ ಶಿಕ್ಷಕಿ ಅಂದ್ರೆ ಮಕ್ಕಳಿಗೆಲ್ಲಾ ಅಚ್ಚುಮೆಚ್ಚು. ಕಳೆದ ಹದಿನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ಸಾಧನೆ ಅನನ್ಯ. ಇಬ್ಬರು ಮಕ್ಕಳ ತಾಯಿಯಾಗಿರುವ ಶಿಕ್ಷಕಿ ಬಿ.ಇಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನ ಪಡೆದು ಚಿನ್ನದ ಪದಕ ಪಡೆಯುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಈವೊಂದು ಶಿಕ್ಷಕಿಯ ಸಾಧನೆ ಇತರೆ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಷ್ಟಕ್ಕೂ ಆ ಮಾದರಿ ಶಿಕ್ಷಕಿಯಾದ್ರು ಯಾರು ಅಂತೀರಾ ನೋಡಿ ಈ ಕಂಪ್ಲೀಟ್ ರಿಪೋರ್ಟ್