ಟೀಂ ಇಂಡಿಯಾಗೆ 49 ರನ್ ಗಳ ಹೀನಾಯ ಸೋಲು!

  • Zee Media Bureau
  • Oct 5, 2022, 11:48 AM IST

ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ vs ದಕ್ಷಿಣ ಆಫ್ರಿಕಾ 3ನೇ T20 ಅಂತಾರಾಷ್ಟ್ರೀಯ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ರನ್‌ಗಳಿಂದ ಭಾರತವನ್ನು ಸೋಲಿಸಿದೆ. ಸೋಲಿನ ಬಳಿಕವೂ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ, 18.3 ಓವರ್‌ಗಳಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತ ಪರ ದಿನೇಶ್ ಕಾರ್ತಿಕ್ 46, ದೀಪಕ್ ಚಹಾರ್ 31 ಮತ್ತು ರಿಷಬ್ ಪಂತ್ 27 ರನ್ ಗಳಿಸಿದ್ದಾರೆ. 2017ರ ಬಳಿಕ ತವರು ನೆಲದಲ್ಲಿ ಗುರಿ ಬೆನ್ನಟ್ಟಿದ ಭಾರತ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಕಳೆದುಕೊಂಡಿರುವುದು ಇದೇ ಮೊದಲು ಎಂದರೆ ತಪ್ಪಾಗಲಾರದು.

Trending News