ಬೋಸ್ಟನ್: ಅಮೆರಿಕಾದ ಉತ್ತರ ಬೋಸ್ಟನ್ನಲ್ಲಿ ಗುರುವಾರ ರಾತ್ರಿ ನೈಸರ್ಗಿಕ ಗ್ಯಾಸ್ ಪೈಪ್ಲೈನ್ನಲ್ಲಿ ಸೋರಿಕೆ ಸಂಭವಿಸಿದ್ದು, ಸುಮಾರು 70 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
6 injured, hundreds evacuated after dozens of explosions hit gas pipeline in Boston, US: Reuters
— ANI (@ANI) September 14, 2018
ಗುರುವಾರದಂದು ನಡೆದ ಈ ಸ್ಫೋಟಗಳಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಹಾಗೂ ಸಾವಿರಾರು ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೆಸಾಚ್ಯುರೇಟ್ಸ್ ರಾಜ್ಯ ಪೊಲೀಸರು ನೀಡಿರುವ ಮಾಹಿತಿ ಅನ್ವಯ ಈವರೆಗೂ ಒಟ್ಟು 70 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಸ್ಫೋಟಗಳು ಮೂರು ಬೋಸ್ಟನ್ ಸ್ಥಳಗಳಲ್ಲಿ ಸಂಭವಿಸಿವೆ. ಜನರು ತಮ್ಮ ಮನೆಗಳಿಂದ ಸುರಕ್ಷಿತವಾಗಿರಲು ಪ್ರಚಾರ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
DEVELOPING: Emergency crews respond to suspected series of gas explosions across three communities north of Boston. https://t.co/SjmRLOpIhm pic.twitter.com/hf6GPksch0
— ABC News (@ABC) September 13, 2018
LATEST: Evacuations are taking place in multiple neighborhoods north of Boston where residents have smelled gas, according to Massachusetts State Police.
Authorities confirmed fires and explosions at 39 locations: https://t.co/FLlKiNwVMO pic.twitter.com/HYPFyccL7K
— ABC News (@ABC) September 13, 2018
ಪೊಲೀಸ್ ಅಧಿಕಾರಿಗಳ ಪ್ರಕಾರ, ತನಿಖೆ ನಂತರ ಮಾತ್ರ ಸ್ಫೋಟಗಳಿಗೆ ನಿಖರ ಕಾರಣಗಳನ್ನು ತಿಳಿಯಲು ಸಾಧ್ಯ ಎನ್ನಲಾಗಿದೆ. ಲಾರೆನ್ಸ್, ಎಂಡೋವರ್ ಮತ್ತು ನಾರ್ತ್ ಎಂಡೋವರ್ ಈಸ್ಟ್ ಕೋಸ್ಟ್ ಪಟ್ಟಣಗಳಲ್ಲಿ ಈ ಪ್ರದೇಶಗಳಲ್ಲಿ ಗ್ಯಾಸ್ ಸೋರಿಕೆಗಳ ವರದಿಗಳಿವೆ. ಈ ಸ್ಫೋಟಗಳ ನಂತರ, ಬೋಸ್ಟನ್ನ ವಿವಿಧ ಪ್ರದೇಶಗಳಲ್ಲಿ ಬೆಂಕಿಯು ಸಿಲುಕಿದೆ, ಈ ಪ್ರದೇಶಗಳಲ್ಲಿ ಇನ್ನಷ್ಟು ಸ್ಫೋಟಗಳು ಸಂಭವಿಸದಿರಲು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸುವುದರೊಂದಿಗೆ ಗ್ಯಾಸ್ ಸರ್ವಿಸ್ ನಿಲ್ಲಿಸಲಾಗಿದೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.