ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ದೇಶದ ಜನರ ಗಮನ ಸೆಳೆಯಲು ಮತ್ತೆ ಡೊನಾಲ್ಡ್ ಟ್ರಂಪ್ 'ಚೀನಾ ಕಾರ್ಡ್' ಬಳಸಿದ್ದಾರೆ. ತಾವು ಮತ್ತೆ ಅಧ್ಯಕ್ಷರಾದರೆ ಚೀನಾ (China) ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಕರೋನಾವೈರಸ್ (Coronavirus) ಸಾಂಕ್ರಾಮಿಕ ರೋಗದ ಬಗ್ಗೆ ಚೀನಾ ಮಾಡಿದ್ದನ್ನು ಸಹಿಸಲಾಗುವುದಿಲ್ಲ. ನಾನು ಮತ್ತೆ ಅಧ್ಯಕ್ಷನಾದರೆ ಚೀನಾ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಲ್ಲೇ  ಅತಿ ಹೆಚ್ಚು ಹಾನಿ ಅನುಭವಿಸಿರುವ ದೇಶ ಅಮೆರಿಕ (America). ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಚೀನಾದ ಕಾರಣದಿಂದಾಗಿ ನಾವಿಂದು ಮಾಸ್ಕ್ ಧರಿಸಿ ನಮ್ಮ ಮುಖಗಳನ್ನು ಮುಚ್ಚಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಚೀನಾದ ಕಾರಣದಿಂದಾಗಿ ದೇಶದಲ್ಲಿ ಇಷ್ಟೆಲ್ಲಾ ಹಾನಿಯಾಗಿದೆ. ಇದೆಲ್ಲದಕ್ಕೂ ಚೀನಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಲೆತೆರಬೇಕಾಗುತ್ತದೆ ಎಂದರು.


ಕರೋನಾದೊಂದಿಗಿನ ಯುದ್ಧದಲ್ಲಿ ಡೊನಾಲ್ಡ್ ಟ್ರಂಪ್ ಅವರ ಸ್ಪೀಡಿ ರಿಕವರಿ ರಹಸ್ಯ ಇದು


ಕರೋನಾ ಅಲ್ಲ ... ಚೀನಾ ವೈರಸ್...
ಕರೋನಾಗೆ ಸಂಬಂಧಿಸಿದಂತೆ ಟ್ರಂಪ್ ಮೊದಲಿನಿಂದಲೂ ಚೀನಾ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಸಾಂಕ್ರಾಮಿಕ ರೋಗ ಕರೋನಾವೈರಸ್ ಅನ್ನು  ಟ್ರಂಪ್ 'ಚೀನಾ ವೈರಸ್' ಎಂದು ಕರೆದಿದ್ದಾರೆ. ಚೀನಾದ ಬೇಜವಾಬ್ದಾರಿ ಮನೋಭಾವದಿಂದಾಗಿ ವೈರಸ್ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಟ್ರಂಪ್ ಒತ್ತಾಯಿಸಿದ್ದಾರೆ.


ಆರು ಕಂಪನಿಗಳ ಮೇಲೆ ಕ್ರಮ:
ಏತನ್ಮಧ್ಯೆ ಚೀನಾದ ಆರು ಮಾಧ್ಯಮ ಕಂಪನಿಗಳ ಕಾರ್ಯಾಚರಣೆಯನ್ನು ವಿದೇಶಿ ಕಾರ್ಯಾಚರಣೆಗಳಾಗಿ ಯುಎಸ್ ಗೊತ್ತುಪಡಿಸಿದೆ. ಇದರರ್ಥ ಎಲ್ಲಾ ಕಂಪನಿಗಳು ರಿಯಲ್ ಎಸ್ಟೇಟ್ ಹಿಡುವಳಿಗಳನ್ನು ಒಳಗೊಂಡಂತೆ ತಮ್ಮ ಸಿಬ್ಬಂದಿ ಪಟ್ಟಿಯ ಬಗ್ಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ಗೆ ಮಾಹಿತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ನಮ್ಮ ನಡೆ ಕಮ್ಯುನಿಸ್ಟ್ ಪ್ರಚಾರಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಚೀನಾ ವಿಷಯದ ಬಗ್ಗೆ ಅಮೆರಿಕ ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆ ಆರಂಭಿಸಲಿದೆ ಎಂದೂ ಅವರು ಹೇಳಿದರು.


Trump in Trouble: ಅಮೆರಿಕ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಜಿ ಮಾಡೆಲ್


ನವೆಂಬರ್ 3 ರಂದು ಚುನಾವಣೆ :
ನವೆಂಬರ್ 3 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ಹೊರಬಂದ ಸಮೀಕ್ಷೆಗಳಲ್ಲಿ ಟ್ರಂಪ್ ಅವರ ಪ್ರತಿಸ್ಪರ್ಧಿ ಜೋ ಬಿಡೆನ್ ಗೆಲ್ಲುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಈ ಬಾರಿ ಅವರ ಹಾದಿ ಸುಲಭವಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರೇ ಕೆಲವೆಡೆ ತಿಳಿದಿದ್ದಾರೆ. ಈ ಹಿನ್ನಲೆಯಲ್ಲಿಯೇ ಟ್ರಂಪ್ ಪದೇ ಪದೇ ಚೀನಾದ ವಿಷಯವನ್ನು ಎತ್ತುತ್ತಿದ್ದಾರೆ. ಚೀನಾ ಕಾರ್ಡ್ ಬಳಸಿ ಹೆಚ್ಚಿನ ಮತ ಪಡೆಯುವುದು ಟ್ರಂಪ್ ಉದ್ದೇಶ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಕರೋನಾವೈರಸ್ ನಿಂದಾಗಿ ಅಮೆರಿಕ ಪಟ್ಟ ಪಾಡಿಗೆ ಚೀನಾ ನೇರ ಹೊಣೆ ಎಂದು ಸಾಬೀತುಪಡಿಸಲು ಟ್ರಂಪ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.