ಮಾಜಿ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಬಂಧನ

ಪಾಕಿಸ್ತಾನದ ಎನ್‌ಎಬಿ ಮಾಜಿ ಪ್ರಧಾನಿ ಶಾಹಿದ್ ಖಾಕಾನ್ ಅಬ್ಬಾಸಿಯನ್ನು ದ್ರವರೂಪದ ನೈಸರ್ಗಿಕ ಅನಿಲ ಆಮದು ಒಪ್ಪಂದದಲ್ಲಿ ಬಹು-ಶತಕೋಟಿ ರೂಪಾಯಿಗಳ ಲಾಂಡರಿಂಗ್‌ ಹಗರಣಕ್ಕೆ ಸಂಬಂಧಿಸಿದ ವಿಚಾರವಾಗಿ ಎನ್‌ಎಬಿ ಗುರುವಾರದಂದು ಬಂಧಿಸಿದೆ.

Last Updated : Jul 18, 2019, 05:57 PM IST
ಮಾಜಿ ಪಾಕ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಬಂಧನ     title=
file photo

ನವದೆಹಲಿ: ಪಾಕಿಸ್ತಾನದ ಎನ್‌ಎಬಿ ಮಾಜಿ ಪ್ರಧಾನಿ ಶಾಹಿದ್ ಖಾಕಾನ್ ಅಬ್ಬಾಸಿಯನ್ನು ದ್ರವರೂಪದ ನೈಸರ್ಗಿಕ ಅನಿಲ ಆಮದು ಒಪ್ಪಂದದಲ್ಲಿ ಬಹು-ಶತಕೋಟಿ ರೂಪಾಯಿಗಳ ಲಾಂಡರಿಂಗ್‌ ಹಗರಣಕ್ಕೆ ಸಂಬಂಧಿಸಿದ ವಿಚಾರವಾಗಿ ಎನ್‌ಎಬಿ ಗುರುವಾರದಂದು ಬಂಧಿಸಿದೆ.

ಪಾಕಿಸ್ತಾನ ಮೂಲದ ಡಾನ್ ನ್ಯೂಸ್‌ನ ವರದಿಯ ಪ್ರಕಾರ ಲಾಹೋರ್‌ನ ಹೊರವಲಯದಲ್ಲಿ ಪತ್ರಿಕಾಗೋಷ್ಠಿಗೆ ತೆರಳುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ ಎಂದು  ವರದಿ ಹೇಳಿದೆ. ಪ್ರಾರಂಭದಲ್ಲಿ ಅವರು ತಮ್ಮ ಬಂಧವನನ್ನು ವಿರೋಧಿಸಿದರು ಎನ್ನಲಾಗಿದೆ, ಆದರೆ ನಂತರ ಎನ್ಎಬಿ ಅಧಿಕಾರಿಗಳು ಆದೇಶಗಳನ್ನು ಪಾಲಿಸಲಿ ಎಂದು ಅವರು ಬಂಧನದ ವೇಳೆ ಹೇಳಿದ್ದಾರೆ ಎನ್ನಲಾಗಿದೆ.

ಈ ಬಂಧನದ ನಂತರ ಪಾಕಿಸ್ತಾನದ ಮುಸ್ಲಿಂ ಲೀಗ್ - ನವಾಜ್ ನಾಯಕ ಶಹಬಾಜ್ ಷರೀಫ್ ಅಧಿಕಾರಗಳ ಈ ಕ್ರಮವನ್ನು ಖಂಡಿಸಿದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು, ಎನ್ಎಬಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರ ಕೈಗೊಂಬೆ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

ಏಪ್ರಿಲ್ ನಲ್ಲಿ  ಪಾಕಿಸ್ತಾನ ಸರ್ಕಾರ ಅಬ್ಬಾಸಿಯ ವಿದೇಶ ಪ್ರವಾಸವನ್ನು ನಿಷೇಧಿಸಿದ ಕೆಲವೇ ತಿಂಗಳುಗಳ ನಂತರ ಈ ಬಂಧನವಾಗಿದೆ. ಅಬ್ಬಾಸಿ ಜೊತೆಗೆ ಮಾಜಿ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಮತ್ತು ಇತರ ಐವರನ್ನು ವಿದೇಶ ಪ್ರವಾಸದಿಂದ ನಿಷೇಧಿಸಲಾಗಿತ್ತು. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂಧ  ನಂತರ ಬಂಧಿಸಲ್ಪಟ್ಟ ಎರಡನೇ ಪಿಎಂಎಲ್-ಎನ್ ಅಬ್ಬಾಸಿಯಾಗಿದ್ದಾರೆ.

Trending News