ಪ್ಯಾರಿಸ್: ಕ್ಯಾಥೊಲಿಕ್ ಚರ್ಚ್ ನಲ್ಲಿ ಅಗ್ನಿ ದುರಂತ

ಕೂಡಲೇ ಸ್ಥಳಕ್ಕಾಗಮಿಸಿದ 500ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಎಎನ್ಐ ವರದಿ ಮಾಡಿದೆ.

Last Updated : Apr 16, 2019, 01:22 PM IST
ಪ್ಯಾರಿಸ್: ಕ್ಯಾಥೊಲಿಕ್ ಚರ್ಚ್ ನಲ್ಲಿ ಅಗ್ನಿ ದುರಂತ title=
Pic Courtesy: ANI

ಪ್ಯಾರಿಸ್: ದೇಶದ ಪ್ರಸಿದ್ಧ ಐತಿಹಾಸಿಕ ಕಟ್ಟಡವಾದ ನೋಟ್ರೆ ಡೇಮ್ ಕ್ಯಾಥೆಡ್ರಲ್​ ನಲ್ಲಿ ಸೋಮವಾರ ಸಂಜೆ ಭಾರೀ ಅಗ್ನಿ ದುರಂತ ಸಂಭವಿಸಿ ಪರಿಣಾಮ 850 ವರ್ಷಗಳಷ್ಟು ಪುರಾತನವಾದ ಕಟ್ಟಡದ ಶಿಖರ ಮತ್ತು ಮೇಲ್ಛಾವಣಿ ಕುಸಿದಿದೆ. 

ಬೆಂಕಿ ಧಗಧಗನೆ ಉರಿಯುತ್ತಿದ್ದಂತೆ ಆಕಾಶದೆತ್ತರ ದಟ್ಟ ಹೊಗೆ ಆವರಿಸಿದ್ದರಿಂದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಚರ್ಚ್ ನ ಒಳಭಾಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ 500ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಎಎನ್ಐ ವರದಿ ಮಾಡಿದೆ.

ಘಟನೆ ಬಗ್ಗೆ ಪ್ಯಾರಿಸ್ ಪೊಲೀಸ್ ಇಲಾಖೆ ಟ್ವೀಟ್ ಮಾಡಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ವಾಹನಗಳ ಸಂಚಾರಕ್ಕೆ ಜನರು ಅವಕಾಶ ಮಾಡಿಕೊಡಬೇಕು. ಈ ಪ್ರದೇಶದಲ್ಲಿ ಸಂಚರಿಸಬಾರದು ಎಂದು ಹೇಳಿದ್ದಾರೆ. "ಭೀಕರ ಬೆಂಕಿ" ಎಂದು ಪ್ಯಾರಿಸ್ ಮೇಯರ್ ಆನೆ ಹಿಡಾಲ್ಗೋ ಟ್ವೀಟ್ ಮಾಡಿದ್ದಾರೆ.

Trending News