ಪ್ರಧಾನಿ ಮೋದಿಗೆ 'ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್' ಗೌರವ

ಐತಿಹಾಸಿಕ ಪ್ಯಾಲೆಸ್ಟೀನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು(ಫೆ.10) ರಾಮ್ಲಾಗೆ ಭೇಟಿ ನೀಡಿದರು.

Last Updated : Feb 10, 2018, 06:53 PM IST
ಪ್ರಧಾನಿ ಮೋದಿಗೆ 'ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್' ಗೌರವ title=
Pic : ANI

ರಾಮಲ್ಲಾ (ವೆಸ್ಟ್ ಬ್ಯಾಂಕ್): ಐತಿಹಾಸಿಕ ಪ್ಯಾಲೆಸ್ಟೀನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು(ಫೆ.10) ರಾಮ್ಲಾಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಭೇಟಿ ಮಾಡಿದ ಮೋದಿ, ಪ್ಯಾಲೇಸ್ಟಿನಿಯನ್ ಜನರಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.

ರಾಮಲ್ಲಾ ಪ್ರವಾಸ ಕೈಗೊಂಡ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೋದಿ, ಪ್ಯಾಲೇಸ್ಟಿನಿಯನ್ ನಾಯಕ ಯಾಸಿರ್ ಅರಾಫತ್ ಅವರ ಸಮಾಧಿಯ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು. ನಂತರ, ಪ್ರಧಾನಿ ಮೋದಿ ಸಮಾಧಿಯ ಬಳಿ ಇರುವ ಮ್ಯೂಸಿಯಂಗೆ ಭೇಟಿ ನೀಡಿದರು.

ಕೇವಲ 15 ತಿಂಗಳ ಹಿಂದೆ ನಿರ್ಮಾಣವಾದ ಯಾಸರ್ ಅರಾಫಾತ್ ಮ್ಯೂಸಿಯಂ ಅನ್ನು 20 ನಿಮಿಷಗಳ ಕಾಲ ಮೋದಿ ವೀಕ್ಷಿಸಿದರು. ಈ ಸಂಗ್ರಹಾಲಯದ ನಿರ್ದೇಶಕ ಮೊಹಮ್ಮದ್ ಹಲಾಯ್ಕ ಅವರ ಪ್ರಕಾರ, ಈ ನರೇಂದ್ರ ಮೋದಿ ಈ ಮ್ಯೂಸಿಯಂ ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಆಗಿದ್ದಾರೆ. 

'ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್' ಸನ್ಮಾನ ಸ್ವೀಕರಿಸಿದ ಮೋದಿ
ಪ್ಯಾಲೆಸ್ಟೀನ್‌ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಯನ್ನು ಗುರುತಿಸಿ ಅವರಿಗೆ 'ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಇಂದು ಉಭಯ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಮಹಮೌದ್ ಅಬ್ಬಾಸ್ ಅವರು ಪ್ಯಾಲೆಸ್ಟೀನ್‌ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ಗೌರವ ನೀಡಿದರು.

ಗ್ರ್ಯಾಂಡ್ ಕಾಲರ್ ಪ್ಯಾಲೆಸ್ಟೀನ್‌ ವಿದೇಶಿ ಗಣ್ಯರಿಗೆ ಮತ್ತು ರಾಜರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಹಿಂದೆ ಸೌದಿ ಅರಬಿಯಾದ ಕಿಂಗ್ ಸಲ್ಮಾನ್, ಬಹರೇನ್ ರಾಜ ಹಮದ್ ಗೆ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಈ ಗೌರವ ಲಭಿಸಿದೆ.

Trending News