ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ತಾವು ಯಾವುದೇ ಮಟ್ಟಕ್ಕೆ ಹೋಗಬಹುದೆಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸಂಜಯ್ ಪಾಟೀಲ್.

Last Updated : Apr 20, 2018, 02:50 PM IST
ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು title=
Pic: ANI

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರೇ ತಮ್ಮ ಪಕ್ಷಕ್ಕೆ ತೊಂದರೆಗಳನ್ನು ಸೃಷ್ಟಿಸುತ್ತಿದ್ದಾರೆ. ಬೆಳಗಾವಿ ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಏಪ್ರಿಲ್ 19 ರಂದು ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ್, ಮೇ 12ರ  ಕರ್ನಾಟಕ ಚುನಾವಣೆಯು 'ರಸ್ತೆಗಳು ಮತ್ತು ಕುಡಿಯುವ ನೀರಿನ ಬಗ್ಗೆ ಅಲ್ಲ, ಆದರೆ ಹಿಂದೂ-ಮುಸ್ಲಿಂ ನಡುವೆ ನಡೆಯುತ್ತಿದೆ' ಎಂದು ಉಲ್ಲೇಖಿಸಿದ್ದರು. 

ಕರ್ನಾಟಕ ಚುನಾವಣೆ ರಸ್ತೆ ಮತ್ತು ನೀರಿಗಾಗಿ ಅಲ್ಲ
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಅವರು, "ಕರ್ನಾಟಕ ಚುನಾವಣೆಗಳು ರಸ್ತೆಗಳು, ನೀರು ಮತ್ತು ಇತರ ಸಮಸ್ಯೆಗಳಿಗಾಗಿ ಅಲ್ಲ. ಈ ಚುನಾವಣೆಗಳು 'ಹಿಂದೂ Vs ಮುಸ್ಲಿಂ' ಇದರಲ್ಲಿ ಅವರು ಈ ಚುನಾವಣೆಯು ರಸ್ತೆ, ನೀರು ಚರಂಡಿಗಳಿಗಾಗಿ ಅಲ್ಲ ಬದಲಾಗಿ ಹಿಂದು ಮತ್ತು ಮುಸ್ಲಿಂಗಳ ನಡುವೆ ಎಂದರು. ಅಲ್ಲದೆ ಇನ್ನು ಮುಂದುವರೆದು ಮಾತನಾಡಿದ ಅವರು  "ನಾನು ಸಂಜಯ್ ಪಾಟೀಲ್, ನಾನು ಹಿಂದೂ ,ಇದು ಹಿಂದೂ ರಾಷ್ಟ್ರ ಮತ್ತು ನಾವು ರಾಮ ಮಂದಿರವನ್ನು ನಿರ್ಮಿಸಬೇಕೆಂದು ನಾವು ಬಯಸುತ್ತೇವೆ. ಒಂದು ವೇಳೆ ಲಕ್ಷ್ಮಿ ಹೆಬ್ಬಾಳಕರ್ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿದರೆ, ನೀವು ಅವರಿಗೆ ಮತವನ್ನು ಹಾಕಿ. ಆದರೆ ಅವರು ಬಾಬರಿ ಮಸೀದಿ ಕಟ್ಟುವವರು ಎಂದರು. ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣವನ್ನು ಕೂಡಾ ಎತ್ತಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ತಾವು ಯಾವುದೇ ಮಟ್ಟಕ್ಕೆ ಹೋಗಬಹುದೆಂದು ತಿಳಿಸಿದ್ದ ಸಂಜಯ್ ಪಾಟೀಲ್, ಬಾಬರಿ ಮಸೀದಿ ನಿರ್ಮಿಸಲು ಮತ್ತು ಟಿಪ್ಪು ಜಯಂತಿವನ್ನು ಆಚರಿಸಲು ಬಯಸುವವರು ಕಾಂಗ್ರೆಸಿಗೆ ಮತ ಹಾಕುತ್ತಾರೆ. ಆದರೆ ಆ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಯಸುವವರು ಮತ್ತು ಶಿವಾಜಿ ಮಹಾರಾಜರ ವಿಜಯವನ್ನು ಬಯಸುವವರು ಬಿಜೆಪಿಗೆ ಮತ ಹಾಕುತ್ತಾರೆ ಎಂದಿದ್ದರು.

Trending News