ರಾಯಚೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಾಕಷ್ಟು ಉತ್ಸುಕತೆಯಿಂದ ಪ್ರಚಾರದಲ್ಲಿ ತೊಡಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಬೇಸಿಗೆ ಉಷ್ಣಾಂಶವನ್ನೂ ಲೆಕ್ಕಿಸದೇ ರಾಜ್ಯದಲ್ಲಿ ಹಲವು ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಮೋದಿ ಮೇನಿಯಾ ಎಲ್ಲೆಡೆ ಮನೆಮಾಡಿದ್ದು, ಅವರ ಸಾರ್ವಜನಿಕ ಸಭೆಗಳಲ್ಲಿ ಸಾಕಷ್ಟು ಜನ ಜಮಾಯಿಸುತ್ತಿದ್ದಾರೆ. ಭಾನುವಾರ(ಮೇ 6) ರಾಯಚೂರಿನಲ್ಲಿ ನಡೆದ ಮೋದಿ ರ್ಯಾಲಿಯಲ್ಲಿ ಮೋದಿ ಅಭಿಮಾನಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಈತ ಮೋದಿಯ ದೊಡ್ಡ ಅಭಿಮಾನಿ. ಮೋದಿ ಅವರ ಮೇಲಿನ ಅಭಿಮಾನದಿಂದಾಗಿ ಈತ ಮೋದಿ ಮುಖದ ಚಿತ್ರವನ್ನು ಬೆನ್ನಿನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಹೆಸರು ಬಸವರಾಜು. ರಾಯಚೂರಿನ ಕಾರ್ಯಕ್ರಮದಲ್ಲಿ ಈತನ ಅಭಿಮಾನಕ್ಕೆ ಮೋದಿ ಧನ್ಯವಾದ ತಿಳಿಸಿದರು.
ಬಸವರಾಜು ಬೆನ್ನಿನ ಮೇಲೆ ಮೋದಿ ಅವರ ಮುಖದಲ್ಲಿ ಮುಗುಳ್ನಗೆ ಇರುವ ಹಾಗೆ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಕೇಳಿದಾಗ, ಈ ಹಚ್ಚೆ ನಿರ್ಮಿಸಲು 15 ಗಂಟೆ ತೆಗೆದುಕ್ಕೊಂದರು. ಈ ಅವಧಿಯಲ್ಲಿ ಬಹಳಷ್ಟು ತೊಂದರೆಯಾಯಿತು. ಆದರೆ ತಾವು ಮೋದಿ ಮಾಡಿದ ಕೆಲಸದಿಂದ ಪ್ರಭಾವಿತರಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಒಳ್ಳೆಯ ಮತ್ತು ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರ ಮುಖದ ಚಿತ್ರವನ್ನು ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂದಿರುವುದಾಗಿ ಬಸವರಾಜ್ ತಿಳಿಸಿದ್ದಾರೆ.
Raichur: Took 15 hours to get this done. I got it made as PM has done good work in 4 years. He mentioned me in his rally today & said that I should help BJP win elections in the state. I'll never forget this day:Basvaraj, man who got PM Modi's face tattooed on his back #Karnataka pic.twitter.com/nBNRc773DG
— ANI (@ANI) May 6, 2018
ಪ್ರಧಾನಿ ಮೋದಿ ನನ್ನನ್ನು ರ್ಯಾಲಿ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಾನು ಬಿಜೆಪಿಗೆ ಸಹಾಯ ಮಾಡಬಹುದೆಂದು ಅವರು ಹೇಳಿದರು. ನಾನು ಈ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂದು ಬಸವರಾಜ್ ಹೇಳಿದರು.
ರ್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಸವರಾಜನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ನಿಮ್ಮ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಇದರ ಕಷ್ಟವನ್ನು ನೀವು ಎಷ್ಟು ಸಮಯದವರೆಗೆ ಅನುಭವಿಸುತ್ತಿರಿ ಎಂದು ನನಗೆ ತಿಳಿದಿದೆ. ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ, ನಿಮ್ಮ ದೇಹವನ್ನು ಈ ರೀತಿ ಕಷ್ಟಕ್ಕೆ ಒಡ್ಡಬೇಡಿ ಎಂದು ಮೋದಿ ಮನವಿ ಮಾಡಿದರು.