ವರನಟ ಡಾ.ರಾಜಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ

    

Last Updated : May 9, 2018, 09:39 PM IST
ವರನಟ ಡಾ.ರಾಜಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ  title=
Photo courtesy: KPCC

ಬೆಂಗಳೂರು: ಜನ ಆಶೀರ್ವಾದ ಯಾತ್ರೆಯ ಅಂಗವಾಗಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರಲ್ಲಿ ಭಾಗವಹಿಸಿರುವ ರಾಹುಲ್ ಗಾಂಧಿ ಇದೇ ವೇಳೆ ಸಮಯ ಬಿಡುವು ಮಾಡಿಕೊಂಡು ಕನ್ನಡದ ವರ ನಟ ಡಾ.ರಾಜ್ ಕುಮಾರ್ ರವರ ಸಮಾದಿ ಭೇಟಿ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಯವರಿಗೆ  ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಕೂಡ ಸಾಥ್ ನೀಡಿದರು. ರಾಹುಲ್ ಭೇಟಿಯ ವೇಳೆ ರಾಘವೇಂದ್ರ ರಾಜಕುಮಾರ್ ಕೂಡ ಹಾಜರಿದ್ದರು.

ಇದೇ ಮೇ 12ರಂದು ನಡೆಯುವ ಕರ್ನಾಟಕದ ವಿಧಾನಸಭಾ  ಚುನಾವಣೆಗೆ ಕೊನೆಯ ಹಂತದ ಪ್ರಚಾರದಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮತ್ತೆ ಪಕ್ಷಕ್ಕೆ ಹೊಸ ಚೈತನ್ಯ ನಿಡುವ ಹುಮ್ಮಸ್ಸಿನಲ್ಲಿಸಿದ್ದಾರೆ.

Trending News