ಹಿರಿಯರನ್ನು ಗೌರವಿಸುವ ಬಗ್ಗೆ ನಿಮ್ಮಿಂದ ತಿಳಿಯಬೇಕಿಲ್ಲ: ಮೋದಿಗೆ ಸಿದ್ದರಾಮಯ್ಯ ಟಾಂಗ್

ತಮ್ಮ ಪಕ್ಷದ ಹಿರಿಯ ಎಲ್.ಕೆ.ಅಡ್ವಾಣಿ ಅವರನ್ನು ನೀವೆಷ್ಟು ಗೌರವಿಸುತ್ತೀರಿ ಎಂಬುದು ನಮಗೆ ತಿಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. 

Last Updated : May 2, 2018, 01:53 PM IST
ಹಿರಿಯರನ್ನು ಗೌರವಿಸುವ ಬಗ್ಗೆ ನಿಮ್ಮಿಂದ ತಿಳಿಯಬೇಕಿಲ್ಲ: ಮೋದಿಗೆ ಸಿದ್ದರಾಮಯ್ಯ ಟಾಂಗ್ title=

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ರಾಜಕೀಯ ನಾಯಕರ ಟೀಕಾ ಪ್ರಹಾರ ಮುಂದುವರೆದಿದೆ. ಮಂಗಳವಾರ ಉಡುಪಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಗೌರವಿಸುವ ಕುರಿತು ಮಾತನಾಡಿದ್ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಪಕ್ಷದ ಹಿರಿಯ ಎಲ್.ಕೆ.ಅಡ್ವಾಣಿ ಅವರನ್ನು ನೀವೆಷ್ಟು ಗೌರವಿಸುತ್ತೀರಿ ಎಂಬುದು ನಮಗೆ ತಿಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. 

ದೇವೇಗೌಡರನ್ನು ಹಾದಿ ಹೊಗಳಿದ ಪ್ರಧಾನಿ ಮೋದಿ

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಗೌರವಿಸುವ ಬಗ್ಗೆ ನೀವು ಅಷ್ಟೊಂದು ಉಚಿತ ಸಲಹೆ ನೀಡಿದ್ದೀರಿ. ಆದರೆ, 2014ರಲ್ಲಿ ನಿಮ್ಮ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಎಷ್ಟರಮಟ್ಟಿಗೆ ಗೌರವದಿಂದ ನಡೆಸಿಕೊಂಡಿರಿ ಮತ್ತು ಹೆಚ್.ಡಿ.ದೇವೇಗೌಡರ ಬಗ್ಗೆ ಎಷ್ಟು ಕನಿಕರ ತೋರಿಸಿದ್ರಿ ಎಂಬುದು ನಮ್ಮೆಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ, ಮಂಗಳವಾರ ಚಾಮರಾಜನಗರದ ಸಂತೆಮರಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ 75ವರ್ಷದ ಹಿರಿಯ ಯಡಿಯೂರಪ್ಪ ಅವರು ನಡುಬಗ್ಗಿಸಿ ನಮಸ್ಕರಿಸುತ್ತಿದ್ದರೂ ನೀವು ಸುಮ್ಮನಿದ್ದಿರಲ್ಲ, ಇದು ಹಿರಿಯರಿಗೆ ತೋರುವ ಗೌರವವೇ ? ಎಂಡು ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. 

ಕೇಂದ್ರದ ರೈತಪರ ಯೋಜನೆಗೆ ಶೇ.50 ಹಣ ಭರಿಸಿರುವುದು ಕರ್ನಾಟಕ ಸರ್ಕಾರ: ಮೋದಿಗೆ ಸಿದ್ದು ತಿರುಗೇಟು

ಮಂಗಳವಾರ ಉಡುಪಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೆಲ ತಿಂಗಳ ಹಿಂದಷ್ಟೇ ರಾಹುಲ್ ಗಾಂಧಿಯವರು ದೇವೇಗೌಡ ಅವರ ಬಗ್ಗೆ ಸಾರ್ವಜನಿಕವಾಗಿ ತೆಗಳಿದ್ದರು. ಅವರ ಮಾತುಗಳು ನಿಜಕ್ಕೂ ನಾಚಿಕೆಗೇಡು ಎನಿಸಿತು. ಹಿರಿಯರಿಗೆ ಗೌರವ ಕೊಡುವ ರಾಹುಲ್ ಅವರ ಸಂಸ್ಕೃತಿ ಇದೆಯೇ? ಹಿರಿಯರಿಗೆ ಈ ರೀತಿ ಗೌರವ ನೀಡುತ್ತಾರೆಯೇ? ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಮೋದಿಯನ್ನು ಟೀಕಿಸಿದ್ದಾರೆ.

Trending News